ಮಣಿಪುರ ಸಿಎಂನಿಂದ ರಾಜೀನಾಮೆ ಪ್ರಸ್ತಾವ ನಾಟಕೀಯ ಬೆಳವಣಿಗೆಯಲ್ಲಿ ಹಿಂದಕ್ಕೆ

Source: Vb | By I.G. Bhatkali | Published on 1st July 2023, 8:27 AM | National News |

ಇಂಫಾಲ: ಮಣಿಪುರದ ಮುಖ್ಯಮಂತ್ರಿ ಎನ್. ಬಿರೇನ್ ಸಿಂಗ್ ಅವರ ಇಲ್ಲಿಯ ಅಧಿಕೃತ ನಿವಾಸವು ಶುಕ್ರವಾರ ಅಪರಾಹ್ನ ಹೈಡ್ರಾಮಾಕ್ಕೆ ಸಾಕ್ಷಿಯಾಗಿತ್ತು. ಸಿಂಗ್ ಅವರು ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ಸಲ್ಲಿಸಲು ಅಪರಾಹ್ನ ಒಂದು ಗಂಟೆಗೆ ಕೇವಲ 200 ಮೀ. ಅಂತರದಲ್ಲಿರುವ ರಾಜಭವನಕ್ಕೆ ತೆರಳುವುದು ನಿಗದಿಯಾಗಿತ್ತು. ಬಳಿಕ ಅದನ್ನು ಮೂರು ಗಂಟೆಗೆ ಮುಂದೂಡಲಾಗಿತ್ತು. ಅಪರಾಹ್ನ 2:20ರ ಸುಮಾರಿಗೆ ತನ್ನ ಬೆಂಗಾವಲು ವಾಹನಗಳ ಸಾಲಿನೊಂದಿಗೆ ಸಿಂಗ್ ನಿವಾಸದಿಂದ ಹೊರಕ್ಕೆ ಬಂದಾಗ ನೂರಾರು ಮಹಿಳೆಯರು ಅವರು ರಾಜಭವನಕ್ಕೆ ತೆರಳುವುದನ್ನು ತಡೆದಿದ್ದರು.

ರಾಜೀನಾಮೆ ನೀಡದಂತೆ ಸಿಂಗ್ ಅವರನ್ನು ಆಗ್ರಹಿಸಿದ ಮಹಿಳೆಯರು ಅವರನ್ನು ಬೆಂಬಲಿಸಿ ಘೋಷಣೆಗಳನ್ನು ಕೂಗಿದರು. ಈ ಹಿನ್ನೆಲೆಯಲ್ಲಿ ಸಿಂಗ್ ರಾಜೀನಾಮೆ ಸಲ್ಲಿಸದೆ ತನ್ನ ನಿವಾಸಕ್ಕೆ ಮರಳಿದರು.

ಕೆಲ ಸಮಯದ ಬಳಿಕ ಹೊರಗೆ ಬಂದ ಕೆಲವು ಸಚಿವರು ಸಿಂಗ್ ರಾಜೀನಾಮೆ ಪತ್ರವನ್ನು ಓದಿದರು. ರಾಜೀನಾಮೆ ಪತ್ರ ತಮ್ಮ ಕೈಗೆ ಬಂದಾಗ ಮಹಿಳೆಯರು ಅದನ್ನು ಹರಿದು ಹಾಕಿದರು.

ಬಳಿಕ, ಹುದ್ದೆಯಲ್ಲಿ ಮುಂದುವರಿಯಬೇಕು ಎಂಬ ಜನರು ಮತ್ತು ನಾಗರಿಕ ಸಮಾಜ ಸಂಘಟನೆಗಳ ಆಗ್ರಹಕ್ಕೆ ಮಣಿದಿರುವ ಸಿಂಗ್ ರಾಜೀನಾಮೆಯನ್ನು ನೀಡದಿರಲು ನಿರ್ಧರಿಸಿದ್ದಾರೆ ಎಂದು ಬಿಜೆಪಿ ಪ್ರಕಟಿಸಿತು. ಆದರೆ, ಸಿಂಗ್ ತನ್ನ ಕುರ್ಚಿಯನ್ನು ಉಳಿಸಿಕೊಳ್ಳಲು ನಾಟಕವಾಡಿದ್ದರು ಎಂದು ಅವರ ಟೀಕಾಕಾರರು ಕುಟುಕಿದ್ದಾರೆ.

ಗುರುವಾರ ಬೆಳಗ್ಗೆ ಹಿಂಸಾಚಾರದಲ್ಲಿ ಇಬ್ಬರು ಮೃತಪಟ್ಟಿದ್ದರು. ಸಂಜೆ ಹಿಂಸಾಚಾರ ಮತ್ತು ಹತ್ಯೆಗಳನ್ನು ತಡೆಯುವಲ್ಲಿ ರಾಜ್ಯ ಸರಕಾರವು ವಿಫಲಗೊಂಡಿದೆ ಎಂದು ಆಕ್ರೋಶಿತ ನೂರಾರು ಜನರ ಗುಂಪು ಮೃತರ ಪೈಕಿ ಓರ್ವನ ಶವದೊಂದಿಗೆ ಸಿಂಗ್ ನಿವಾಸಕ್ಕೆ ಜಾಥಾ ತೆರಳಲು ಪ್ರಯತ್ನಿಸಿದ್ದರು. ಅವರನ್ನು ಸಮಾಧಾನಿಸಲು ಪೊಲೀಸರು ಗಂಟೆಗಳ ಕಾಲ ನಡೆಸಿದ ಪ್ರಯತ್ನ ವಿಫಲಗೊಂಡಾಗ ನಿವಾಸಗಳಲ್ಲಿ 200 ಎಕರೆ ಜಮೀನಿಗೆ ಸಂಬಂಧಿಸಿದ 150 ರಿಂದ 160 ಕ್ರಯಪತ್ರಗಳು ದೊರೆತಿವೆ. ಈ ಜಮೀನುಗಳ ಮೌಲ್ಯವು ಸುಮಾರು 100 ಕೋಟಿ ರೂ.ದಾಟಬಹುದು. ಬಹುತೇಕ ಆಸ್ತಿ ಅಜಿತ್ ಆಪ್ತ ಗೌರವ್ ಶೆಟ್ಟಿ ಹೆಸರಿನಲ್ಲಿದೆ ಎಂದು ಹೇಳಲಾಗುತ್ತಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...