ಹೆಬಳೆ ಗ್ರಾ.ಪಂ. ವ್ಯಾಪ್ತಿಯ ಅನಧಿಕೃತ ”ನಾಮಫಲಕ’ ಭಗವಾದ್ವಜ ತೆರವು; ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್

Source: SOnews | By Staff Correspondent | Published on 7th March 2024, 5:08 PM | Coastal News |

ಭಟ್ಕಳ: ತಾಲೂಕಿನ ಹೆಬಳೆ ಗ್ರಾಮ ಪಂಚಾಯತಿ ವ್ಯಾಪ್ತಿಯ ತೆಂಗಿನಗುಂಡಿ ಬೀಚ್ ನಲ್ಲಿ ಸೋಮವಾರದಂದು ಕೆನರಾ ಲೋಕಸಭಾ ಕ್ಷೇತ್ರದ ಸಂಸದ ಅನಂತ್ ಕುಮಾರ್ ಹೆಗಡೆ ಸಂಘಪರಿವಾರದ ಕಾರ್ಯಕರ್ತರೊಂದಿಗೆ ಸೇರಿ ಕಾನೂನುಬಾಹಿರವಾಗಿ ಹಾರಿಸಲಾಗಿದ್ದ ಹನುಮ ಧ್ವಜ ಮತ್ತು ವೀರ ಸಾವರ್ಕರ್ ಕಟ್ಟೆ ನಾಮಫಲಕವನ್ನು ಬುಧವಾರ ರಾತ್ರಿ ಪೊಲೀಸರು ತೆರವುಗೊಳಿಸಿದ್ದಾಗಿ ವರದಿಯಾಗಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾರ್ವಜನಿಕ ಸ್ಥಳದಲ್ಲಿ ಗೊಂದಲ ಹಾಗೂ ಕೋಮು ಪ್ರಚೋದನೆಗೆ ಕುಮ್ಮಕ್ಕು ನೀಡಿದ ಆರೋಪದಡಿ ಮಂಗಳವಾರದಂದು ಸಂಸದ ಅನಂತ್ ಕುಮಾರ್ ಹೆಗಡೆ ಸೇರಿದಂತೆ 20ಕ್ಕೂ ಹೆಚ್ಚು ಮಂದಿಯ ವಿರುದ್ಧ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಸಧ್ಯ ಘಟನಾ ಸ್ಥಳದಲ್ಲಿ ಪೊಲೀಸ್ ಬಿಗೂ ಬಂದೋಬಸ್ತ ಏರ್ಪಡಿಸಿದ್ದು ಪರಿಸ್ಥಿತಿ ಶಾಂತವಾಗಿದೆ ಎಂದು ಹೇಳಲಾಗುತ್ತಿದೆ.

ಆಯೋಧ್ಯೆಯಲ್ಲಿ ರಾಮಮಂದಿರ ಪ್ರಾಣಾಪ್ರತಿಷ್ಟಾಪನೆಯ ಮುಂಚಿನ ದಿನ ಜ.21 ರಂದು ಸಂಘಪರಿವಾರದ ಸದಸ್ಯರು ಅನಧಿಕೃತವಾಗಿ ವೀರಸಾವರ್ಕರ್ ಕಟ್ಟೆಯ ನಾಮಫಲಕ ಅಳವಡಿಸಿ ಅಲ್ಲಿ ಭಗವಾ ದ್ವಜವನ್ನು ಹಾರಿಸಿದ್ದರು. ಪಂಚಾಯತ್ ಆಡಳಿತ ಇದರ ವಿರುದ್ಧ ದೂರು ನೀಡಿದ ನಂತರ ಜ.28ರಂದು ಪೊಲೀಸರು ಇದನ್ನು ತೆರವುಗೊಳಿಸಿದ್ದರು. ನಂತರದ ಬೆಳವಣೆಗೆಯಲ್ಲಿ ನಾಮಫಲಕ ಮರುಸ್ಥಾಪನೆ ಮಾಡುವಂತೆ ಆಗ್ರಹಿಸಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯಿತಿ ಸದಸ್ಯರು, ಬಿಜೆಪಿ ಕಾರ್ಯಕರ್ತರು ಜ.30ರಂದು ಹೆಬಳೆ ಗ್ರಾಮ ಪಂಚಾಯಿತಿ ಎದುರು ಪ್ರತಿಭಟನೆ ನಡೆಸಿದ್ದರು. ಅಲ್ಲದೇ, ತೆಂಗಿನಗುಂಡಿ ಬೀಚ್ ನ ಸಮೀಪ ನಾಮಫಲಕ ಅಳವಡಿಕೆಗೆ ಕಟ್ಟೆ ಪುನರ್ ನಿರ್ಮಿಸಿದ್ದರು.

ಮಾ.5 ಸೋಮವಾರದಂದು ಭಟ್ಕಳಕ್ಕೆ ಬಂದ ಅನಂತ್ ಕುಮಾರ್ ಕೂಟವನ್ನು ಕಟ್ಟಿಕೊಂಡು ತೆಂಗಿನಗುಂಡಿ ಬೀಚ್ ಗೆ ತೆರಳಿ ಅಕ್ರಮವಾಗಿ ಹನುಮದ್ವಜ ಹಾರಿಸಿ ವೀರಸಾವರ್ಕರ್ ಎಂಬ ನಾಮಫಲಕ ಅಳವಸಿದ್ದರು. ಇದಾದ ಎರಡು ದಿನಗಳ ನಂತರ ಬುಧವಾರ ಮಧ್ಯರಾತ್ರಿ ತೆಂಗಿನಗುಂಡಿ ಬಿಚ್ ನಲ್ಲಿ ಅಳವಸಿದ್ದ ಅನಧಿಕೃತ ನಾಮಫಲಕ ಮತ್ತು ಹನುಮದ್ವಜವನ್ನು ಪೊಲೀಸರು ತೆರವುಗೊಳಿಸಿದ್ದಾರೆ.

ಅನಧಿಕೃತ ದ್ವಜಸ್ಥಂಭ ತೆರವುಗೊಳಿಸುವಂತೆ ಸಾರ್ವಜನಿಕರ ಆಗ್ರಹ: ಪೊಲೀಸರು ಕೇವಲ ಹನುಮದ್ವಜ ಮತ್ತು ನಾಮಫಲಕ ಮಾತ್ರ ತೆರವುಗೊಳಿಸಿದ್ದಾರೆ. ಆದರೆ ಅಕ್ರಮವಾಗಿ ಕಟ್ಟಿಕೊಂಡಿರುವ ದ್ವಜ ಕಟ್ಟೆಯನ್ನು ಹಾಗೆಯೇ ಬಿಟ್ಟಿದ್ದು ಇದು ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಅಶಾಂತಿಗೆ ಕಾರಣವಾಗಬಹುದು ಎಂದು ಆತಂಕ ವ್ಯಕ್ತಪಡಿಸಿರುವ ಸ್ಥಳಿಯ ಮೀನುಗಾರರು ಅನಧಿಕೃತವಾಗಿ ಕಟ್ಟಿಕೊಂಡಿರುವ ಕಟ್ಟೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

ಈ ಕುರಿತಂತೆ ಸ್ಥಳಿಯ ಮೀನುಗಾರರ ಸಮುದಾಯಕ್ಕೆ ಸೇರಿದ ವ್ಯಕ್ತಿಯೊಬ್ಬರು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಇಲ್ಲಿ ಎಲ್ಲ ಸಮುದಾಯದವರು ಅತ್ಯಂತ ಶಾಂತರೀತಿಯಿಂದ ಜೀವಿಸುತ್ತಿದ್ದಾರೆ. ಸಂಘಪರಿವಾರ ಇಲ್ಲಿ ಅಶಾಂತಿಯನ್ನು ಹುಟ್ಟುಹಾಕಲು ಒಂದಿಲ್ಲೊಂದು ರೀತಿಯಲ್ಲಿ ಪ್ರಯತ್ನ ಮಾಡುತ್ತಲೇ ಇದೆ. ಆದರೆ ಇಲ್ಲಿನ ಜನರು ಇದಕ್ಕೆ ಕಿವಿಗೊಡುವುದಿಲ್ಲ. ಯಾವುದೇ ಕಾರಣಕ್ಕೂ ಇಲ್ಲಿನ ಶಾಂತಿಯನ್ನು ಹಾಳು ಮಾಡಲು ಬಿಡುವುದಿಲ್ಲ ಎಂದು ಹೇಳಿದ್ದಾರೆ. ಕಟ್ಟೆಯನ್ನು ತೆರವು ಗೊಳಿಸದೆ ಇದ್ದರೆ ಅಲ್ಲಿ ಮುಂದಿನ ದಿನಗಳಲ್ಲಿ ಕಿಡಿಗೇಡಿಗಳು ಬೇರೆ ಧರ್ಮದವರ ದ್ವಜವನ್ನು ಹಾರಿಸಬಹುದು. ಇಲ್ಲವೆ ಕಟ್ಟೆಯನ್ನು ವಿರೋಪಗೊಳಿಸಬಬಹುದು. ಈ ಕಾರಣಕ್ಕೆ ಅಲ್ಲಿಂದ ಕೂಡಲೇ ದ್ವಜಕಟ್ಟೆಯನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿದ್ದಾರೆ.

Read These Next

ಎಸ್.ಎಸ್.ಎಲ್.ಸಿ ಪುನರ್ಬಲನ ತರಗತಿ; ಶಿಕ್ಷಕರ ಹಿತ ಕಾಪಾಡುವಂತೆ ಐಟಾ (AIITA) ದಿಂದ ಸರ್ಕಾರಕ್ಕೆ ಮನವಿ

ಗೌರವಾನ್ವಿತ ಪ್ರಧಾನ ಕಾರ್ಯದರ್ಶಿಯವರಿಗೆ ಸಮಗ್ರ ಮನವಿಯನ್ನು ಸಲ್ಲಿಸಿದ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ಬೆಂಗಳೂರು ...