ಅಮೆರಿಕದ ಡೌ ಜೋನ್ಸ್ ಸೂಚ್ಯಂಕದಿಂದ ಅದಾನಿ ಎಂಟರ್‌ಪ್ರೆಸಸ್ ಹೊರಗೆ

Source: Vb | By I.G. Bhatkali | Published on 5th February 2023, 12:56 AM | National News |

ಹೊಸದಿಲ್ಲಿ: ವಂಚನೆಯ ಆರೋಪ ಎದುರಿಸುತ್ತಿರುವ ಅದಾನಿ ಗುಂಪಿನ ಮುಂಚೂಣಿ ಕಂಪೆನಿ ಅದಾನಿ ಎಂಟರ್ ಪ್ರೈಸಸನ್ನು ಫೆಬ್ರವರಿ 7ರಿಂದ ತನ್ನ ಸೂಚ್ಯಂಕಗಳಿಂದ ತೆಗೆದು ಹಾಕಲು ಅಮೆರಿಕದ ಶೇರು ವಿನಿಮಯ ಕೇಂದ್ರ ಎಸ್ ಆ್ಯಂಡ್ ಪಿ ಡೌ ಜೋನ್ಸ್ ನಿರ್ಧರಿಸಿದೆ.

ವಂಚನೆ ಹಾಗೂ ಶೇರು ಮಾರುಕಟ್ಟೆ ಯಲ್ಲಿ ಹಸ್ತಕ್ಷೇಪ ಮಾಡುವ ಮೂಲಕ ಅದಾನಿ ಗುಂಪಿನ ಶೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲಾಗಿದೆ ಎಂಬ ಆರೋಪಗಳ ಬಳಿಕ, ಮಾಧ್ಯಮ ಮತ್ತು ಶೇರುದಾರರ ವಿಶ್ಲೇಷಣೆಗಳ ಆಧಾರದಲ್ಲಿ ಅದಾನಿ ಎಂಟರ್‌ಪ್ರೆಸಸ್ ಕಂಪೆನಿಯನ್ನು ತನ್ನ ಸೂಚ್ಯಂಕದಿಂದ ಹೊರಗಿಡುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಎಸ್ ಆ್ಯಂಡ್ ಪಿ ಡೌ ಜೋನ್ಸ್ ಗುರುವಾರ ತಿಳಿಸಿದೆ.

ಇದು ಅದಾನಿ ಗುಂಪಿಗೆ ತೀವ್ರ ಹಿನ್ನಡೆಯಾಗಿದೆ. ಈ ಬಗ್ಗೆ ಟ್ವಿಟ್ ಮಾಡಿರುವ ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಆದರೆ, ಅದಾನಿ ಶೇರುಗಳು ತನ್ನ ಸೂಚ್ಯಂಕದಲ್ಲಿ ಮುಂದುವರಿಯುವ ಅರ್ಹತೆಯನ್ನು ಹೊಂದಿವೆಯೇ ಎನ್ನುವ ಮೌಲ್ಯಮಾಪನವನ್ನು ರಾಷ್ಟ್ರೀಯ ಶೇರು ವಿನಿಮಯ ಕೇಂದ್ರ (ಎನ್‌ಎಸ್‌ಇ) ಇನ್ನೂ ಯಾಕೆ ಮಾಡಿಲ್ಲ ಎಂದು ಪ್ರಶ್ನಿಸಿದ್ದಾರೆ.

“ತಪ್ಪು ಲೆಕ್ಕ ಒಪ್ಪಿಸುವಿಕೆ ಮತ್ತು ವಂಚನಾ ವಿಧಾನಗಳ ಮೂಲಕ ಅದಾನಿ ಗುಂಪಿನ ಶೇರುಗಳ ಮೌಲ್ಯವನ್ನು ಕೃತಕವಾಗಿ ಹೆಚ್ಚಿಸಲಾಗಿದೆ ಎಂಬ ಆರೋಪಗಳ ಬಳಿಕ, ಎಸ್ ಆ್ಯಂಡ್ ಪಿ ಡೌ ಜೋನ್ಸ್ ತನ್ನ ಡೌ ಜೋನ್ಸ್ ಸೂಚ್ಯಂಕಗಳಿಂದ ಅದಾನಿ ಎಂಟರ್‌ ಪೈಸಸ್ ಕಂಪೆನಿಯನ್ನು ಅಂತರ್ ರಾಷ್ಟ್ರೀಯ ಶೇರು ವಿನಿಮಯ ಕೇಂದ್ರಗಳು ಇಂಥ ಕ್ರಮಗಳನ್ನು ತೆಗೆದುಕೊಳ್ಳಲು ಮುಂದಾಗಿರುವಾಗ, ಭಾರತದ ಎನ್‌ಎಸ್‌ಇ ಅದಾನಿ ಶೇರುಗಳ ಸದಸ್ಯತ್ವ ಮೌಲ್ಯಮಾಪನವನ್ನು ಇನ್ನೂ ಯಾಕೆ ಮಾಡುತ್ತಿಲ್ಲ?” ಎಂದು ಟಿಎಂಸಿಯ ದಿಟ್ಟ ನಿಲುವಿನ ನಾಯಕಿ ಟ್ವಿಟರ್‌ನಲ್ಲಿ ಪ್ರಶ್ನಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...