ಅದಾನಿ, ಅಂಬಾನಿಗಳಿಂದ ಬಿಜೆಪಿ ನಾಯಕರ ಖರೀದಿ; ಪ್ರಿಯಾಂಕಾ ಗಾಂಧಿ ಟೀಕೆ

Source: Vb | By I.G. Bhatkali | Published on 4th January 2023, 8:06 AM | National News |

ಘಾಝಿಯಾಬಾದ್: ಕೈಗಾರಿಕೋದ್ಯಮಿಗಳಾದ ಗೌತಮ್ ಅದಾನಿ ಮತ್ತು ಮುಕೇಶ್ ಅಂಬಾನಿ ಅವರು ರಾಜಕಾರಣಿಗಳು ಮತ್ತು ಮಾಧ್ಯಮ ಸಂಸ್ಥೆಗಳನ್ನು ಖರೀದಿಸಿದ್ದಾರೆ, ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಖರೀದಿಸಲು ಅವರಿಗೆ ಸಾಧ್ಯವಾಗಲಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಮಂಗಳವಾರ ಇಲ್ಲಿ ಹೇಳಿದರು.

ದಿಲ್ಲಿಯಲ್ಲಿ ಒಂಭತ್ತು ದಿನಗಳ ವಿರಾಮದ ಬಳಿಕ ಮಂಗಳವಾರ ಪುನರಾರಂಭಗೊಂಡ ರಾಹುಲ್ ನೇತೃತ್ವದ ಭಾರತ ಜೋಡೊ ಯಾತ್ರೆಯು ಉತ್ತರ ಪ್ರದೇಶದ ಘಾಝಿಯಾಬಾದ್ ಪ್ರವೇಶಿಸಿದೆ. ಈ ಸಂದರ್ಭ ರೆಲಿಯಲ್ಲಿ ಮಾತನಾಡಿದ ಪ್ರಿಯಾಂಕಾ, ರಾಹುಲ್ ಪ್ರತಿಷ್ಠೆಯನ್ನು ಹಾಳುಗೆಡವಲು ಸರಕಾರವು ಸಾವಿರಾರು ಕೋಟಿ ರೂ.ಗಳನ್ನು ವ್ಯಯಿಸಿದೆ, ಆದರೆ ತನ್ನ ಸೋದರ ಸತ್ಯದ ಹಾದಿಯಿಂದ ಹಿಂದೆ ಸರಿದಿಲ್ಲ. ಅವರನ್ನು ಗುರಿಯಾಗಿಸಿಕೊಳ್ಳಲು ತನಿಖಾ ಸಂಸ್ಥೆಗಳನ್ನು ಬಳಸಿಕೊಳ್ಳಲಾಗಿತ್ತು, ಆದರೆ ಅದರಿಂದ ಅವರು ಭೀತಿಗೊಳ್ಳಲಿಲ್ಲ. ಅವರೋರ್ವ ಯೋಧರಾಗಿದ್ದಾರೆ ಎಂದು ಹೇಳಿದರು.

'ರಾಹುಲ್ ಸುರಕ್ಷತೆಯ ಬಗ್ಗೆ ಹೆದರಿಕೆಯಿದೆಯೇ ಎಂದು ಹಲವರು ನನ್ನನ್ನು ಪ್ರಶ್ನಿಸಿದ್ದಾರೆ. ರಾಹುಲ್ ಸತ್ಯದ ರಕ್ಷಾಕವಚವನ್ನು ಧರಿಸಿದ್ದಾರೆ ಎಂದು ನಾನು ಅವರಿಗೆ ಉತ್ತರಿಸಿದ್ದೇನೆ. ದೇವರು ನನ್ನ ಸೋದರನನ್ನು ಸುರಕ್ಷಿತವಾಗಿಡುತ್ತಾನೆ. ನೀವೆಲ್ಲ ಸತ್ಯವನ್ನು ಗುರುತಿಸುವವರೆಗೂ ದೇವರು ಈ ದೇಶದ ಸತ್ಯವನ್ನು ರಕ್ಷಿಸುತ್ತಾನೆ' ಎಂದ ಪ್ರಿಯಾಂಕಾ ಏಕತೆಯ ಮಾರ್ಗದಲ್ಲಿ ಮಾತ್ರ ತಮ್ಮ ಅಭಿವೃದ್ಧಿ ಅಡಗಿದೆ ಎನ್ನುವುದನ್ನು ತಿಳಿದುಕೊಳ್ಳುವಂತೆ ಜನರನ್ನು ಆಗ್ರಹಿಸಿದರು.

ಮಂಗಳವಾರ ಮಾಜಿ 'ರಾ' ಕಾರ್ಯದರ್ಶಿ ಎ.ಎಸ್.ದುಲತ್ ಮತ್ತು ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಸಂಸದೆ ಪ್ರಿಯಾಂಕಾ ಚತುರ್ವೇದಿ ಅವರು ಭಾರತ ಜೋಡೋ ಯಾತ್ರೆಯಲ್ಲಿ ಹೆಜ್ಜೆಗಳನ್ನು ಹಾಕಿದರು.

ಈ ನಡುವೆ ಸುದ್ದಿಗೋಷ್ಠಿಯಲ್ಲಿ ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ವಿರಚಿತ 'ಡಿಸ್ಕವರಿ ಆಫ್ ಇಂಡಿಯಾ'ವನ್ನು ಪ್ರಸ್ತಾಪಿಸಿದ ಬಿಜೆಪಿ ಸಂಸದ ಸುಧಾಂಶು ತ್ರಿವೇದಿಯವರು, ಗಾಂಧಿ ಕುಟುಂಬವು ನಾಲ್ಕು ತಲೆಮಾರುಗಳಿಂದಲೂ ಭಾರತದ ಅನ್ವೇಷಣೆಯಲ್ಲಿ ತೊಡಗಿದೆ ಎಂದು ವ್ಯಂಗ್ಯವಾಡಿದರು. 'ರಾಹುಲ್‌ಜಿ, ಭಾರತೀಯ ಸಂಸ್ಕೃತಿಯನ್ನು ಅದನ್ನು ಅರ್ಥೈಸಿಕೊಳ್ಳುವ ಮೂಲಕ ತಿಳಿದುಕೊಳ್ಳಬಹುದೇ ಹೊರತು ಭಾರತದಲ್ಲಿ ಪ್ರವಾಸ ಮಾಡುವ ಮೂಲಕ ಅಲ್ಲ' ಎಂದು ಅವರು ಹೇಳಿದರು.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...