ಅಬುಧಾಬಿ ಕರ್ನಾಟಕ ಸಂಘದ ಆದ್ಧೂರಿ 62ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭ ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ

Source: b k ganesh rai | By Arshad Koppa | Published on 4th November 2017, 11:48 PM | Gulf News | Special Report |

ಚಿತ್ರ ಕೃಪೆ: ನ್ಯೂಸ್ ಕರ್ನಾಟಕ. ಕಾಂ. 

ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಆಶ್ರಯದಲ್ಲಿ ನಡೆಸಲಾಗುವ ಪ್ರಾದೇಶಿಕ ಸಮಾರಂಭ 62ನೇ ಕರ್ನಾಟಕ ರಾಜ್ಯೋತ್ಸವ ಅಬುಧಾಬಿ ಕರ್ನಾಟಕ ಸಂಘದ ಆಶ್ರಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. 2017 ನವೆಂಬರ್ 3ನೇ ತಾರೀಕು ಶುಕ್ರವಾರ ಬೆಳಿಗ್ಗೆ 10.30 ಕ್ಕೆ ಅಬುಧಾಬಿಯಲ್ಲಿರುವ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮದೊಂದಿಗೆ ಸರ್ವರ ಮನಸೆಳೆಯಿತು.

ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರಿಂದ ಉದ್ಘಾಟನೆ


ಸಮಾರಂಭದ ಉದ್ಘಾಟನೆಯನ್ನು ಯು.ಎ.ಇ. ಕನ್ನಡಿಗರ ಮಹಾಪೋಷಕರಾದ ಶ್ರೀಮತಿ (ಡಾ|) ಮತ್ತು ಡಾ|                       ಬಿ. ಆರ್. ಶೆಟ್ಟಿಯವರು ಇಂಡಿಯಾ ಸೋಶಿಯಲ್ ಸೆಂಟರ್‍ನ ಅಧ್ಯಕ್ಷರು ಶ್ರೀ ಜಯಚಂದ್ರ ನಾಯರ್ ಮತ್ತು ಪ್ರಧಾನ ಕಾರ್ಯದರ್ಶಿ ಶ್ರೀ ಎಂ. ಎ. ಸಲಾಂ ಹಾಗೂ ಅತಿಥಿಯಾಗಿ ಆಗಮಿಸಿದ್ದ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ಸಮ್ಮುಖದಲ್ಲಿ ಉದ್ಘಾಟಿಸಿದರು. ಅಧ್ಯಕ್ಷರಾದ ಶ್ರೀ ಸರ್ವೋತ್ತಮ ಶೆಟ್ಟಿಯವರು ಹಾಗೂ ಕಾರ್ಯಕಾರಿ ಸಮಿತಿಯ ಸರ್ವ ಸದಸ್ಯರು ಉಪಸ್ತಿತರಿದ್ದರು. ಸರ್ವರನ್ನು ಶ್ರೀ ಮನೋಹರ್ ತೋನ್ಸೆಯವರು ಸ್ವಾಗತಿಸಿ, ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಶ್ರೀಮತಿ ದಿವ್ಯಾಶರ್ಮಾ ತಂಡದವರಿಂದ ಪ್ರಾರ್ಥನೆ, ಮತ್ತು ಅಬುಧಾಬಿ ಬ್ರಾಹ್ಮಣ ಸಮಾಜ ತಂಡ ಒಂದು ಮತ್ತು ಎರಡು ವಿಭಾಗದ ಮಹಿಳಾ ಸದಸ್ಯರಿಂದ ಸಮೂಹ ಗೀತೆ ಮತ್ತು ಸುಮಾ ಅಶೋಕ್ ರವರಿಂದ ಸ್ವಾಗತ ಭರತನಾಟ್ಯ ಪ್ರದರ್ಶನ ನೀಡಿದರು. 
ಪ್ರೇಕ್ಷಕರ ಮನ ಸೆಳೆದ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ಶಾಯರಿ
ಊರಿನಿನಿಂದ ಆಗಮಿಸಿದ ಪ್ರಖ್ಯಾತ ಶಾಯರಿ ಸಾಮ್ರಾಟ್ ಅಸಾದುಲ್ಲಾ ಬೇಗ್ ರವರ ತಮ್ಮದೇ ಆದ ಶೈಲಿಯಲ್ಲಿ ಹಾಸ್ಯಮಿಶ್ರಿತ ಶಾಯರಿಗಳ ಮೂಲಕ ಸರ್ವರ ಮನಗೆದ್ದರು.

2017ನೇ ಸಾಲಿನ ಪ್ರತಿಷ್ಠಿತ ಡಾ| ದ. ರಾ. ಬೇಂದ್ರೆ ಪ್ರಶಸ್ತಿ ಶ್ರೀ ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ಯವರಿಗೆ ಪ್ರದಾನ


ಅಬುಧಾಬಿ ಕರ್ನಾಟಕ ಸಂಘ ಪ್ರತಿವರ್ಷ ರಾಜ್ಯೋತ್ಸವದ ಸಂದರ್ಭದಲ್ಲಿ ನೀಡಲಾಗುತಿರುವ 2017ನೇ ಸಾಲಿನ ಪ್ರತಿಷ್ಠಿತ ಡಾ| ದ. ರಾ. ಬೇಂದ್ರೆ ಪ್ರಶಸ್ತಿಯನ್ನು ಯು.ಎ.ಇ.ಯಲ್ಲಿ ಯಕ್ಷಗಾನ ಕಲೆಗೆ ಶಾಸ್ತ್ರೀಯ ಸ್ಪರ್ಶನೀಡಿ ದುಬಾಯಿಯಲ್ಲಿರುವ ಹವ್ಯಾಸಿ ಕಲಾವಿದರು ಮತ್ತು ಹಲವಾರು  ಮಕ್ಕಳಿಗೆ ಅತ್ಯುತ್ತಮ ತರಬೇತಿ ನೀಡಿ, ಯಶಸ್ವಿ ಪ್ರದರ್ಶನಗಳನ್ನು ನೀಡುತ್ತಾ ಬರುತ್ತಿರುವ ಯಕ್ಷಗಾನ ಕಲಾವಿದರು, ಗುರುಗಳಾಗಿರುವ ಶ್ರೀ ಶೇಖರ್ ದಾಮೋದರ ಶೆಟ್ಟಿಗಾರ್ ಕಿನ್ನಿಗೋಳಿ ಯವರಿಗೆ ಸರ್ವ ಸದಸ್ಯರು ಹಾಗೂ ಮುಖ್ಯ ಅತಿಥಿಗಳ ಸಮ್ಮುಖದಲ್ಲಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಪ್ರಧಾನಿಸಿದರು.


ಸಮಾರಂಭಕ್ಕೆ ಬೆಂಬಲ ಪ್ರೋತ್ಸಾಹ, ಸಹಕಾರ ನೀಡಿದ ಪ್ರಾಯೋಜಕರನ್ನು ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖ್ಯಸ್ತರು, ಮಾಧ್ಯಮ ಪ್ರತಿನಿಧಿಗಳನ್ನು ವೇದಿಕೆಯಲ್ಲಿ ಗೌರವಿಸಲಾಯಿತು
ಊರಿನಿಂದ ಆಗಮಿಸಿದ ಪ್ರಖ್ಯಾತ ಯುವ ಗಾಯಕಿ ಕು. ಲಹರಿ ಕೋಟ್ಯಾನ್ ಮತ್ತು ಯು.ಎ.ಇ. ಯ ಪ್ರಖ್ಯಾತ ಗಾಯಕರಾದ ಶ್ರೀ ಹರೀಶ್ ಶೇರಿಗಾರ್ ಇವರುಗಳು ತಮ್ಮ ಸುಮಧುರ ಕಂಠಸಿರಿಯಲ್ಲಿ ಕನ್ನಡ ಗೀತಾ ಗಾಯನದ ಮೂಲಕ ಸಭಿಕರ ಮನ ಮುದಗೊಳಿಸಿದರು.


ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಪ್ರತಿವರ್ಷ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಯು.ಎ.ಇ. ಯಲ್ಲಿ ಶೈಕ್ಷಣ ಕ ಕ್ಷೇತ್ರದಲ್ಲಿ, ಕ್ರೀಡಾ ಕ್ಷೇತ್ರದಲ್ಲಿ ಹಾಗೂ ಇನ್ನಿತರ ವಿಭಾಗಗಳಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಅವರ ಮಾತಾಪಿತರ ಸಮ್ಮುಖದಲ್ಲಿ ಪದಕ ನೀಡಿ ಶ್ರೀಮತಿ (ಡಾ|) ಮತ್ತು ಡಾ| ಬಿ. ಆರ್. ಶೆಟ್ಟಿಯವರು ಗೌರವಿಸಿದರು.
ಅಬ್ದುಲ್ ಸಲಾಮ್ ದೇರಳಕಟ್ಟೆಯವರ ವಿದ್ಯಾರ್ಥಿಗಳು ಮತ್ತು ವ್ಯಕ್ತಿತ್ವ ವಿಕಸನ ಪುಸ್ತಕವನ್ನು ಡಾ. ಬಿ. ಆರ್. ಶೆಟ್ಟಿಯವರು ಬಿಡುಗಡೆ ಮಾಡಿದರು.


ಯಕ್ಷಮಿತ್ರರು ಬಾಲಕಲಾವಿದರ ತಂಡದಿಂದ ಯಕ್ಷಗಾನ "ಸರಸೇತು ಬಂದನ"
ಯಕ್ಷಮಿತ್ರರು ದುಬಾಯಿ ಹಿರಿಯ ಕಲಾವಿದರ ಹಿಮ್ಮೇಳದಲ್ಲಿ ಹಾಗೂ ಬಾಲಕಲಾವಿದ ತಂಡದವರಿಂದ ಯಕ್ಷಗಾನ "ಸರಸೇತು ಬಂದನ" ಕನ್ನಡ ಪೌರಾಣ ಕ ಕಥಾಪ್ರಸಂಗವನ್ನು ಪ್ರದರ್ಶಿಸಲಾಯಿತು.
ಶ್ರೀಮತಿ ವೀಣಾ ಮಲ್ಯರವರ ನಿರ್ದೇಶನ ಮತ್ತು ವೇಷಧಾರಿಣ ಯಾಗಿ ಮಕ್ಕಳ ಸಹಿತ ಹುಲಿವೇಷ ನೃತ್ಯ ತುಳುನಾಡಿನ ಕಲಾಪರಂಪರೆಯನ್ನು ಪ್ರತಿಬಿಂಭಿಸಿತ್ತು.
ಇತ್ತಿಚೇಗೆ ಯು.ಎ.ಇ. ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿದ್ದ ಸ್ವಸ್ತಿಕ್ ಆಚಾರ್ಯ ನಿರ್ದೇಶನದಲ್ಲಿ ನಾಟ್ಯಾಸಂ  ತಂಡದವರಿಂದ "ವೀರಗಾಸೆ" ಅಕರ್ಷಣ ಯ ಪ್ರದರ್ಶನ ನಡೆಯಿತು.

ಸ್ವಸ್ತಿಕ್ ಆಚಾರ್ಯ ನಿರ್ದೇಶನದಲ್ಲಿ ಗಾಂಧಿಜಿಯ ತತ್ವಗಳು ಹಾಸ್ಯ ಪ್ರಹಸನ ಸರ್ವರ ಮನಸೆಳೆಯಿತು.

 

ಜನಮನ ಗೆದ್ದ ಆದರ್ಶ ದಂಪತಿಗಳು ಸ್ಪರ್ಧೆ
ಈ ವರ್ಷದ ವಿಶೇಷ ಆಕರ್ಷಣೆಯಾಗಿ ಕನ್ನಡಿಗ ದಂಪತಿಗಳಿಗೆ ಆದರ್ಶ ದಂಪತಿ ಸ್ಪರ್ಧೆ ಏರ್ಪಡಿಸಲಾಗಿದ್ದು ಹಲವು ಜೋಡಿಗಳು ಭಾಗವಹಿಸಿ ವೈವಿಧ್ಯಮಯ ಸ್ಪರ್ಧೆಗಳ ಮೂಲಕ ತಮ್ಮ ತಮ್ಮ ಚಮತ್ಕಾರಿಕ ಪ್ರತಿಭೆಯನ್ನು ಪ್ರದರ್ಶಿಸಿ ಜನಮನ ಗೆದ್ದರು.
ಪ್ರಥಮ ಸ್ಥಾನ : ಶ್ರೀ ಮತ್ತು ಶ್ರೀಮತಿ ವಿಜಯರಾವ್ ಹೇಮಾ ದಂಪತಿಗಳು
ದ್ವಿತೀಯಾ ಸ್ಥಾನ : ಶ್ರೀ ಮತ್ತು ಶ್ರೀಮತಿ ಶ್ರೀಕೃಷ್ಣ ರಕ್ಷಿತಾ ದಂಪತಿಗಳು
ತೃತಿಯಾ ಸ್ಥಾನ : ಶ್ರೀ ಮತ್ತು ಶ್ರೀಮತಿ ಉದಯಾ ಗೀತಾ ನಾಯಕ್ ದಂಪತಿಗಳು
ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೆ ಉಡುಗೊರೆಯನ್ನು ನೀಡಲಾಯಿತು. 

ಬೆಳಗಿನಿಂದ ಸಂಜೆಯವರೆಗೆ ಅತ್ಯಂತ ಅಕರ್ಷಕ ಕಾರ್ಯಕ್ರಮ ವಿರೂಪಣೆಯನ್ನು ಊರಿನಿಂದ ಆಗಮಿಸಿದ್ದ ಶ್ರೀ ಸಾಹಿಲ್ ರೈಯವರು ಮತ್ತು ಶ್ರೀಮತಿ ರಜನಿ ಭಟ್ ನಡೆಸಿಕೊಟ್ಟರು. 
ಈ ವರ್ಷದ ಅದ್ಧೂರಿ ಸಮಾರಂಭಕ್ಕೆ ವೇದಿಕೆಯಲ್ಲಿ ಬೃಹತ್ ಎಲ್. ಇ. ಡಿ. ಡಿಜಿಟಲ್ ಡಿಸ್ಪ್ಲೆ ಪರದೆಯನ್ನು ಅಳವಡಿಸಲಾಗಿದ್ದು ದಿನ ಪೂರ್ತಿ ಅಬುಧಾಬಿ ಕರ್ನಾಟಕ ಸಂಘದ ಹೆಜ್ಜೆ ಗುರುತುಗಳು, ಕನ್ನಡ ನಾಣುಡಿಗಳು, ಕನ್ನಡದ ಕಣ್ಮಣ ಗಳ ಭಾವಚಿತ್ರಗಳು, ನುಡಿಮುತ್ತುಗಳು ಮಿಂಚಿ ಮಾಯವಾಗುತಿದ್ದು ಸರ್ವರ ಗಮನ ಸೆಳೆಯಿತು.
ಕೊನೆಯಲ್ಲಿ ಸಾಂಸ್ಕೃತಿಕ ಪ್ರದರ್ಶನ ನೀಡಿರುವ ತಂಡಗಳ ನಿರ್ದೇಶಕರು ಮತ್ತು ಮಕ್ಕಳು ಹಾಗೂ ರಾಜ್ಯೋತ್ಸವ ಸಮಾರಂಭದ  ಅಹ್ವಾನ ಪತ್ರ, ಸನ್ಮಾನ ಪತ್ರ, ಡಿಜಿಟಲ್ ಡಿಸ್ಪ್ಲೆ ವಿನ್ಯಾಸಗಾರರಾದ ಶ್ರೀ ಗಣೇಶ್ ರೈಯವರಿಗೆ ಶ್ರೀ ಸರ್ವೋತ್ತಮ ಶೆಟ್ಟಿಯವರು ಸ್ಮರಣ ಕೆ ನೀಡಿ ಗೌರವಿಸಿದರು.
ಅಬುಧಾಬಿ ಕರ್ನಾಟಕ ಸಂಘದ ಅದ್ಧೂರಿ ರಾಜ್ಯೋತ್ಸವ ಸಮಾರಂಭವನ್ನು ಸರ್ವರಿಗೂ ವಂದನೆಗಳನ್ನು ಅರ್ಪಿಸುವುದರ ಮೂಲಕ ಮುಕ್ತಾಯಗೊಳಿಸಲಾಯಿತು.

ಮಾಧ್ಯಮ ವರದಿ
 

Read These Next

ದುಬಾಯಿಯಲ್ಲಿ "ಗಲ್ಫ್ ಕರ್ನಾಟಕೊತ್ಸವ" ಯಶಸ್ವಿ; ಐತಿಹಾಸಿಕ ದಾಖಲೆಗೆ ಸಾಕ್ಷಿಯಾದ ಅನಿವಾಸಿ ಕನ್ನಡಿಗರು

ಕರ್ನಾಟಕದ 21 ಅತ್ಯಂತ್ ಪ್ರಭಾವಶಾಲಿ ವ್ಯಾಪಾರ  ಐಕಾನ್ ಗಳು ಗಲ್ಫ್ ಕರ್ನಾಟಕ ರತ್ನ ಪ್ರಶಸ್ತಿಗಳೊಂದಿಗೆ ಗೌರವಿಸಲಿಟ್ಟರು.

ದಹನಕಾರಿ ಹೇಳಿಕೆಗಳಿಗೆ ಹೆಸರಾದ ಅನಂತ್ ಕುಮಾರ್ ಹೆಗಡೆ ಸಂಸತ್ತಿನಲ್ಲೇಕೆ ಮೌನವಾಗಿದ್ದಾರೆ?

ಪ್ರಜಾಪ್ರಭುತ್ವದಲ್ಲಿ, ಜನರ ಧ್ವನಿಯನ್ನು ಚುನಾಯಿತ ಪ್ರತಿನಿಧಿಗಳ ಮೂಲಕ ಕೇಳಬೇಕು. ಆದಾಗ್ಯೂ, ಸಂಸತ್ತಿನ ಕೆಲವು ಸದಸ್ಯರು (ಸಂಸದರು) ...

ಭಟ್ಕಳದಲ್ಲಿ ಹೆಚ್ಚಿದ ಹೆಣ್ಣು ಮಕ್ಕಳ ಸಂಖ್ಯೆ: ಗರಿಷ್ಠ ಲಿಂಗಾನುಪಾತ; ಕಾರವಾರ ಮತ್ತು ಮುಂಡಗೋಡನಲ್ಲಿ ಅತೀ ಕಡಿಮೆ ಲಿಂಗಾನುಪಾತ

ಹೆಣ್ಣು ಮತ್ತು ಗಂಡು ನಡುವಿನ ಲಿಂಗಾನುಪಾತದ ವ್ಯತ್ಯಾಸ ದೇಶಾದ್ಯಂತ ವ್ಯಾಪಕವಾಗಿ ಕಂಡು ಬರುತ್ತಿದ್ದು, ಈಗಾಗಲೇ ಈ ವ್ಯತ್ಯಾಸದಿಂದ ...

ಕಾರವಾರ: ವಿಶೇಷ ಚೇತನರಿಗೆ ಯುಡಿಐಡಿ ಕಾರ್ಡ್ ವಿತರಣೆ; ಉತ್ತರ ಕನ್ನಡ ಜಿಲ್ಲೆ ರಾಜ್ಯದಲ್ಲಿ ದ್ವಿತೀಯ

ವಿಶೇಷ ಚೇತನರಿಗಾಗಿ ರೂಪಿಸಲಾಗುವ ಸರ್ಕಾರದ ವಿವಿಧ ಯೋಜನೆಗಳ ಸೌಲಭ್ಯಗಳನ್ನು ವಿಶೇಷ ಚೇತನರಿಗೆ ಪರಿಣಾಮಕಾರಿಯಾಗಿ ತಲುಪಿಸುವ ...