ದುರಾಡಳಿತ ಯೋಗಿ ಆದಿತ್ಯನಾಥ್ ಸರ್ಕಾರ ವಜಾಗೊಳಿಸಿ- ಡಿಎಸ್‍ಎಸ್

Source: sonews | By Staff Correspondent | Published on 5th October 2020, 7:01 PM | Coastal News | Don't Miss |

ಮುಂಡಗೋಡ,: ಉತ್ತರ ಪ್ರದೇಶ ಯೋಗಿ ಆದಿತ್ಯನಾಥರ ಸರ್ಕಾರವನ್ನು ವಜಾ ಮಾಡಿ ದುರಾಡಳಿತ ನಡೆಸುತ್ತಿರುವ ಯೋಗಿ ಆದಿತ್ಯಾನಾಥ ಇವರನ್ನು ಮುಖ್ಯ ಮಂತ್ರಿ ಹುದ್ದೆಯಿಂದ ಕೆಳಗಿಳಿಸಿ ಇಲ್ಲಿಯ ಜನರಿಗೆ ಸಂವಿಧಾನ ಬದ್ದ ರಕ್ಷಣೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರಕನ್ನಡ ರಾಷ್ಟ್ರಪತಿಯವರಿಗೆ ತಹಶೀಲ್ದಾರ ಮೂಲಕ ಮನವಿ ಅರ್ಪಿಸಿದರು.

ಮನವಿಯಲಿ ಸೆಪ್ಟಂಬರ್ ತಿಂಗಳಲ್ಲಿ ಉತ್ತರ ಪ್ರದೇಶದಲ್ಲಿ ಮನೀಷ ವಾಲ್ಮೀಕಿ  ಹೆಣ್ಣು ಮಗಳ ಮೇಲೆ ನಾಲ್ಕು ಜನರು ಅತ್ಯಾಚಾರ ಮಾಡಿ ಮನೀಷಾಳ ಕಾಲು ಮತ್ತು ನಡಮುರಿದು ನಾಲಿಗೆಯನ್ನು ಕತ್ತರಿಸಿ ಹೀನಾಯವಾಗಿ ಕೊಲೆ ಮಾಡಿದ ಈ ಹೇಯ ಕೃತ್ಯವನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ಉತ್ತರ ಕನ್ನಡ ಜಿಲ್ಲಾ ಶಾಖೆ ಕಠಿಣ ಶಬ್ದಗಳಿಂದ ಖಂಡಿಸುತ್ತದೆ.

ಉತ್ತರ ಪ್ರದೇಶ ರಾಜ್ಯದಲ್ಲಿ  ಯೋಗಿ ಆದಿತ್ಯಾನಾಥರವರ ಬಿ.ಜೆ.ಪಿ ಸರ್ಕಾರ ಜಾರಿಗೆ ಬಂದನಂತರ  ಜನರ ಮೇಲೆ ದೌರ್ಜನ್ಯಗಳು ನಡೆಯುತ್ತಿದ್ದು ಹಾಗೂ ಕೋಮು ಗಲಭೆಗಳು ಹೆಚ್ಚಾಗುತ್ತ ಇವೆ.  ಕೋಮು ಗಲಭೆಗಳಿಂದ  ಅಲ್ಪಸಂಖ್ಯಾತರ ಮತ್ತು ಹಿಂದುಳಿದ ವರ್ಗಗಳ ಕೋಲೆಗಳಾಗಿವೆ ಹಲವಾರು ಜನರು  ಅಂಗವಿಕಲರಾಗಿದ್ದಾರೆ, ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಬಲತ್ಕಾರ ಹಾಗೂ ಕೋಲೆಗಳಾಗಿವೆ ಹಾಗೂ ಎಷ್ಟು ಜನರು ಸೆರೆಮನೆಯಲ್ಲಿ ನರಳುತ್ತಿದ್ದಾರೆ. ಇಲ್ಲಿಯ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು ಇಲ್ಲಿಯ ಪೋಲಿಸರು ರೌಡಿಗಳಂತೆ ವರ್ತಿಸಿ ಅಮಾನವಿಯವಾಗಿ ನಡೆದುಕೊಳ್ಳುತ್ತಾ ರಕ್ಷಕರು ಭಕ್ಷಕರಾಗಿ ಈ ರಾಜ್ಯದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗಿ ಸಂವಿಧಾನದ ಕಾನೂನುಗಳನ್ನು ಸಂಪೂರ್ಣವಾಗಿ ಉಲ್ಲಂಘನೆಯಾಗಿದ್ದು ಇಲ್ಲಿಯ ಜನರು ಭಯ ವಾತಾವರಣದಲ್ಲಿ ಬದುಕುತ್ತಿದ್ದಾರೆ.

ಆದ್ದರಿಂದ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ ನೇತೃತ್ವದ ರಾಜ್ಯ ಸರ್ಕಾರವನ್ನು ಕಿತ್ತು ಒಗೆದು ಉತ್ತರ ಪ್ರದೇಶ  ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ತರಬೇಕು ಆರೋಪಿತರಿಗೆ ಸಹಾಯ ಮಾಡಿದ ಸಂಬಂದಿಸಿದ ಪೋಲಿಸ್ ಅಧಿಕಾರಿಗಳನ್ನು ಕೂಡಲೇ ಅಮಾನತ್ತು ಮಾಡಿ ತನ್ನಿಖೆ ನಡೆಸಿ ಇವರ ಮೇಲೆ ಕಾನೂನು ಕ್ರಮ ಜರುಗಿಸಲು ಒತ್ತಾಯಿಸುತ್ತೇವೆ ಎಂದು ತಿಳಿಸಿದ್ದಾರೆ
ಈ ಸಂದರ್ಭದಲ್ಲಿ ಎಸ್.ಫಕ್ಕಿರಪ್ಪ, ಬಸವರಾಜ ಸಂಗಮೇಶ್ವರ, ಮಂಜುನಾಥ ಹರಿಜನ, ಸುಭಾಸ ವಡ್ಡರ, ರವಿ ಯಲ್ಲಾಪುರ, ಯಮನಪ್ಪ ಸುಣಗಾರ, ಮಂಜುನಾಥ ಕಲಾಲ, ರಾಜು ಭೋವಿ ಸೇರಿದಂತೆ ಮುಂತಾದವರು ಇದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...