ನಾಳೆ ಕಾರವಾರದಲ್ಲೂ ನಡೆಯಲಿದೆ ಐಕ್ಯ ಪ್ರತಿಭಟನಾ ಹೋರಾಟ.

Source: SO News | By Laxmi Tanaya | Published on 27th September 2020, 11:14 AM | Coastal News | Don't Miss |

ಕಾರವಾರ : ಕಾರವಾರದಲ್ಲಿ ಸಮಾನ ಮನಸ್ಕ ಜನಪರ ಸಂಘಟನೆಗಳು, ಸಿಐಟಿಯು, ಕೆಪಿಆರ್ ಎಸ್, ಎಸ್ ಎಫ್ ಐ,  ದಲಿತ ಪರ ಸಂಘಟನೆಗಳು, ಆಟೋ ರಿಕ್ಷಾ ಸಂಘಟನೆ,  ಮಹಿಳಾ ಸಂಘಟನೆಗಳ ಮುಖಂಡರು ರಾಮ ನಾಯ್ಕ ರವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ಸೇರಿ ಬೆಂಬಲ ಸೂಚಿಸಿದೆ.

ಸೆ. ೨೮ ರ ಬೆಳಿಗ್ಗೆ ೧೦.೩೦ ಕ್ಕೆ ಕಾರವಾರದಲ್ಲಿ ರಂಗಮಂದಿರದ ಎದುರಿನಿಂದ ನಡೆಯುವ ಐಕ್ಯ ಪ್ರತಿಭಟನಾ ಹೋರಾಟ ಪ್ರಾರಂಭವಾಗಲಿದೆ. ಇದಕ್ಕೆ  ಕಾರವಾರದ ಸಮಸ್ತ ದುಡಿಯುವ ಜನತೆ ರೈತ- ಕಾರ್ಮಿಕರ ಹಕ್ಕುಗಳ ಪರವಾಗಿ ನಡೆಯುವ ಐತಿಹಾಸಿಕ ಹೋರಾಟಕ್ಕೆ ಬೆಂಬಲ ಸೂಚಿಸಬೇಕೆಂದು ಕೋರಿಕೊಳ್ಳಲಾಗಿದೆ.

ಸಭೆಯಲ್ಲಿ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಾಘು ನಾಯ್ಕ, ಅಲ್ತಾಫ್ ಶೇಖ್, ಇಮ್ತಿಯಾಜ್ ಬುಖಾರಿ,  ದಲಿತ ಸಂಘಟನೆಗಳ ಪರವಾಗಿ ಶ್ಯಾಮಸುಂದರ ಗೋಕರ್ಣ, ದೇವಾನಂದ ಠಾಣೇಕರ್, ಸಿಐಟಿಯುನ ಯಮುನಾ ಗಾಂವ್ಕರ್, ಕರ್ನಾಟಕ ಪ್ರಾಂತ ರೈತ ಸಂಘದ ಶ್ಯಾಮನಾಥ ನಾಯ್ಕ,  ಮಂಜುಳಾ ಕಾಣಕೋಣಕರ್, ತಾರಾ ನಾಯ್ಕ, ಎಸ್. ಎಫ್ ಐ ನ ವಿಶಾಲ್, ರಮೇಶ ಮುದ್ಗೇಕರ್, ಪ್ರಶಾಂತ ಲಾಂಜೇಕರ್, ಘಾರು ಮಾಂಗ್ರೇಕರ್ ಮುಂತಾದವರು ಇದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...