ಡೆಂಗ್ಯು ಜ್ವರದಿಂದ ಯುವಕ ಸಾವನ್ನಪ್ಪಿದ ಹಿನ್ನೆಲೆ ಮಾವಿನಕುರ್ವ ಬಂದರಿಗೆ ಆರೋಗ್ಯ ಇಲಾಖೆ ತಂಡದ ಭೇಟಿ

Source: SO News | By MV Bhatkal | Published on 24th October 2023, 1:37 PM | Coastal News | Don't Miss |

ಭಟ್ಕಳ: ತಾಲೂಕಿನ ಮಾವಿನಕುರ್ವೆ ಪಂ.ವ್ಯಾಪ್ತಿಯಲ್ಲಿ ಡೆಂಗ್ಯು ಜ್ವರದಿಂದ ಯುವಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಜಿಲ್ಲಾ ಮಲೇರಿಯಾ ನಿಯಂತ್ರಣಾಧಿಕಾರಿ ರಮೇಶ ರಾವ್ (ಡಿ.ಎಂ.ಓ) ಬಂದರ ಸುತ್ತ ಮುತ್ತ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. 

ಈ ಮೊದಲು ಭಟ್ಕಳ ತಾಲೂಕಾ ಆಸ್ಪತ್ರೆಗೆ ಭೇಟಿ ನೀಡಿದ ಅವರು ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳಿಗೆ ಡೆಂಗ್ಯೂ ತಡೆಗಟ್ಟುವಿಕೆ, ನಿಯಂತ್ರಣ ಮತ್ತು ನಿರ್ವಹಣಾ ಕ್ರಮಗಳನ್ನು ಸಂಪೂರ್ಣವಾಗಿ ಸಜ್ಜುಗೊಳಿಸಲು ಮತ್ತು ಬಲಪಡಿಸಲು ಸೂಚಿಸಿದರು ಹಾಗೂ ಮಾವಿನಕುರ್ವೆ ಪಂ ವ್ಯಾಪ್ತಿಯಲ್ಲಿ ಬರುವ 1172 ಮನೆಗಳು ಹಾಗೂ ಗ್ರಾಮೀಣ ಮತ್ತು ನಗರ ಭಾಗದಲ್ಲಿ 3 ದಿನಗಳೊಳಗಾಗಿ ಸರ್ವೇ ಕಾರ್ಯ ಮುಗಿಸುವ ಜೊತೆಯಲ್ಲಿ ಮನೆಗಳಿಗೆ ತೆರಳಿ ವೇಳೆ ಸ್ವಚ್ಛತೆ ಹಾಗೂ ರೋಗ ಲಕ್ಷಣಗಳ ಬಗ್ಗೆ ಅರಿವು ಮೂಡಿಸುವುದು, ನಿಂತ ಕೊಳಚೆ ನೀರಿಗೆ ಹೈಪೋಕ್ಲೋರೈಟ್ ಸೊಲ್ಯೂಷನ್ಸ್ ಸಿಂಪಡಿಸುವಂತೆ ಸೂಚಿಸಿದರು.
ಬಳಿಕ ಸಭೆ ಮುಗಿಸಿ ತಾಲೂಕಿನ ಆರೋಗ್ಯ ಇಲಾಖೆ ತಂಡದೊಂದಿಗೆ ಮಾವಿನ ಕುರ್ವೆ ಧಕ್ಕೆಗೆ ತೆರಳಿ  ಸಣ್ಣ ಸಣ್ಣ ಚರಂಡಿಯಲ್ಲಿ ನಿಂತ ನೀರಿಗೆ ಹೈಪೋಕ್ಲೋರೈಟ್ ಸೊಲ್ಯೂಷನ್ಸ್ ಸಿಂಪಡಿಸಿ, ಬಂದರ ಬೀಚ್ ಗೆ ತೆರಳುವ ರಸ್ತೆ ಪಕ್ಕದಲ್ಲಿ ಕುಡಿಯಲು ಯೋಗ್ಯವಲ್ಲದ ಬಾವಿಯ ಪಕ್ಕದಲ್ಲಿ ನೀರು ನಿಂತು ದುರ್ವಾಸನೆ ಬಿರುತ್ತಿರುದನ್ನು ಗಮನಿಸಿದ ಅವರು ತಕ್ಷಣ ಸ್ಥಳೀಯ ಪಂಚಾಯತಗೆ ಬಾವಿಯನ್ನು ಮುಚ್ಚುವಂತೆ ಪತ್ರ ಬರೆಯಲು ಸೂಚಿಸಿದರು. 

ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಅವರು ಭಟ್ಕಳದಲ್ಲಿ ಕಳೆದ ಹಲವಾರು ದಿನಗಳಿಂದ ನಗರ ಪ್ರದೇಶಗಳಲ್ಲಿ ಶಂಕಿತ ಡೆಂಗ್ಯು ಪ್ರಕರಣ ಪತ್ತೆಯಾದ ಹಿನ್ನೆಯಲ್ಲಿ ಆರೋಗ್ಯ ಇಲಾಖೆಯಿಂದ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕು ಅವೆಲ್ಲವುಗಳನ್ನು ಮಾಡಿದ್ದು.
ಶಂಕಿತ ಪ್ರಕರಣದಲ್ಲಿ ಯುವಕನೊರ್ವ ಸಾವನ್ನಪ್ಪಿದ್ದು  ಇದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿ ಆರೋಗ್ಯ ಸಿಬ್ಬಂದಿಗಳಾದ ಪ್ರಾಥಮಿಕ ಆರೋಗ್ಯ ಸುರಕ್ಷ ಅಧಿಕಾರಿಗಳು ಹಾಗೂ ಸಮುದಾಯ ಆರೋಗ್ಯ ಅಧಿಕಾರಿಗಳು ಹಾಗೂ ಆಶಾಕಾರ್ಯಕರ್ತರನ್ನು ಸೇರಿಸಿಕೊಂಡು ಶಂಕಿತ ಪ್ರಕರಣ ಇರುವ ಪ್ರದೇಶಗಳಿಗೆ ಭೇಟಿ ಸಾರ್ವಜನಿಕರಿಗೆ ಜಾಗ್ರತಿ ಮುಡಿಸುವುದರ ಜೊತೆಯಲ್ಲಿ ನೀರಿನತೊಟ್ಟಿ, ಡ್ರಮ್‌, ಬ್ಯಾರಲ್‌ ಮತ್ತು ಟ್ಯಾಂಕ್‌ಗಳನ್ನು ಕನಿಷ್ಠ ವಾರಕ್ಕೆ ಒಮ್ಮೆ ಸ್ವಚ್ಛಗೊಳಿಸಬೇಕು. ಮಳೆನೀರು ಸಂಗ್ರಹವಾಗುವ ಟೈರ್‌, ತೆಂಗಿನ ಚಿಪ್ಪು ವಿಲೇವಾರಿ ಮಾಡಿ
ಏರ್‌ಕೂಲರ್‌, ಹೂವಿನಕುಂಡ ಇತ್ಯಾದಿಗಳಲ್ಲಿ ನೀರನ್ನು ಪ್ರತಿವಾರ ಖಾಲಿ ಮಾಡುವಂತೆ ಸೂಚಿಸಿವಂತೆ ತಿಳಿಸುತ್ತೇವೆ ಅದರ ಜೊತೆಯಲ್ಲಿ ಸಾರ್ವಜನಿಕ ಕೂಡ ಆರೋಗ್ಯ ಇಲಾಖೆಯೊಂದಿಗೆ ಕೈ ಜೋಡಿಸಿವಂತೆ ಕೋರಿದರು. 

ಕಳೆದ 2014 ರಲ್ಲಿಯೂ ಕೂಡ ಬಂದರಲ್ಲಿ 80ಕ್ಕೂ ಅಧಿಕ ಡೆಂಗ್ಯು  ಪ್ರಕರಣ ಪತ್ತೆಯಾಗಿತ್ತು ಆದರೆ ಯಾವುದೇ ಸಾವು ಸಂಭವಿಸಿರಲಿಲ್ಲ ಆದರೆ ಮತ್ತೆ ಈಗಲೂ ಅದೇ ಪ್ರದೇಶದಲ್ಲಿ ಶಂಕಿತ ಪ್ರಕರಣಗಳು ಕಂಡು ಬಂದಿರುವ ಹಿನ್ನೆಲೆಯಲ್ಲಿ ಮೀನುಗಾರಿಕೆ ಇಲಾಖೆ ಸಹಾಯದಿಂದ ನೀರು ನಿಲ್ಲುವ ಪ್ರದೇಶಗಲ್ಲಿ ನೀರು ಹರಿದು ಹೋಗುವಂತೆ ಮಾಡಲು ಸೂಚಿಸುತ್ತೇವೆ ಹಾಗೂ ನಗರ ಭಾಗದಲ್ಲಿ ಪುರಸಭೆ ಸಹಾಯದಿಂದ ಪೊಗಿಂಗ್ ಮಾಡುವಂತೆ ಸೂಚಿಸುತ್ತೇವೆ ಎಂದು ಹೇಳಿದರು.

ಈ ವೇಳೆ ಮೀನುಗಾರಿಕೆ ಇಲಾಖೆಯ, ಸ್ಥಳೀಯ ಪಂಚಾಯತ್ ಅಧಿಕಾರಿಗಳು ಸ್ಥಳಕ್ಕೆ ಬಾರದ ಹಿನ್ನೆಲೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದರು.

ಈ ಸಂದರ್ಭದಲ್ಲಿ ತಾಲೂಕಾ ವೈದ್ಯಾಧಿಕಾರಿ ಸವಿತಾ ಕಾಮತ್ ಹಾಗೂ ಆರೋಗ್ಯ ಇಲಾಖೆಯ ವಿವಿಧ ಸಿಬ್ಬಂದಿಗಳು,ಸ್ಥಳೀಯ ಮುಖಂಡರಾದ ರಮೇಶ್ ಖಾರ್ವಿ,ಗೋವಿಂದ ಖಾರ್ವಿ ಮುಂತಾದವರು ಉಪಸ್ಥಿತಿ ಇದ್ದರು.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...