ಭಟ್ಕಳ: ಮನೆ ಎದುರಿಗೆ ನಿಲ್ಲಿಸಿಟ್ಟ ಜನರೇಟರಿಗೆ ಪಲ್ಸರ್ ಬೈಕ್ ಡಿಕ್ಕಿ:ಸವಾರ ಸ್ಥಳದಲ್ಲಿ ಸಾವು

Source: S O news | By MV Bhatkal | Published on 4th February 2023, 11:53 PM | Coastal News | Don't Miss |

ಭಟ್ಕಳ: ಮನೆಯ ಎದುರಿಗೆ ನಿಲ್ಲಿಸಿದ ಕೊಹಿಲಾ ಮಾಲೀಕತ್ವದ ದೊಡ್ಡದಾದ ಜನರೇಟಿಗೆ ಚಲಿಸುತ್ತಿದ್ದ ಪಲ್ಸರ್ ಬೈಕ್ ಸವಾರ ಡಿಕ್ಕಿ ಹೊಡೆದು ಪರಿಣಾಮ ಸ್ಥಳದಲ್ಲಿ ಮೃತಪಟ್ಟ ಘಟನೆ ಮಾರುಕೇರಿ ಕೋಟಖಂಡ ದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿ ರಾಘ ಸಣ್ಣು ಗೊಂಡ (31), ಕೋಟಖಂಡ ನಿವಾಸಿ ಎಂದು ತಿಳಿದು ಬಂದಿದೆ.

ಯಾವುದೇ ಸುರಕ್ಷತಾ ಕ್ರಮಗಳನ್ನು ಅಳವಡಿಸದೇ ರಸ್ತೆಗೆ ತಾಗಿಸಿಕೊಂಡು ನಿರ್ಲಕ್ಷತನದಿಂದ ನಿಲ್ಲಸಿ,ರಸ್ತೆಯ ತಿರುವಿನಲ್ಲಿ ಯಾವುದೇ ಮುಂಜಾಗ್ರತೆ ಹಾಗೂ ಜನರೇಟರ್‌ನ ಹಿಂದೆ ಮುಂದೆ ಯಾವುದೇ ರಿಫೆಕ್ಟರ್‌ನ್ನು ಅಳವಡಿಸದೇ ಇದ್ದುದ್ದರಿಂದ, ಮೃತ ಸವಾರ  ಬಜಾಜ ಪಲ್ಸರ್ ಬೈಕ್ ಮೇಲೆ ಹೋಗುವಾಗ  ನಾಗೇಶ, ಗಣೇಶ ಹೆಬ್ಬಾರ ಮನೆಯ ಎದುರಿನ ಕೋಟಖಂಡ ರಸ್ತೆಯ ತಿರುವಿನಲ್ಲ ದೊಡ್ಡದಾದ ಜನರೇಟರಗೆ
ಹಿಂದಿನಿಂದ ಬಡಿದು ಬೈಕ್ ಸಮೇತ ರಸ್ತೆಯ ಮೇಲೆ ಬಿದ್ದ ಪರಿಣಾಮ  ತಲೆಗೆ ತೀವ್ರ ಪೆಟ್ಟು ಬಿದ್ದ ಪರಿಣಾಮ  ಸ್ಥಳದಲ್ಲಿ ಬೈಕ್ ಸವಾರ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ನಾಗೇಶ ಗಣೇಶ ಹೆಬ್ಬಾರ, ಇವರ ನಿರ್ಲಕ್ಷತನವೇ ಕಾರಣವಾಗಿದೆ ಎಂದು ಗ್ರಾಮೀಣ ಠಾಣೆಯಲ್ಲಿ ಮೃತನ ತಮ್ಮ ಗಣಪತಿ ಗೊಂಡ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡ ಪಿ. ಎಸ್. ಐ ಶ್ರೀಧರ್ ನಾಯ್ಕ ತನಿಖೆ ಕೈಗೊಂಡಿದ್ದಾರೆ.

ಅಪಘಾತ ಸುದ್ದಿ ತಿಳಿದು ಸರ್ಕಾರಿ ಆಸ್ಪತ್ರೆಯಲ್ಲಿ ನೂರಾರು ಜನರು ಜಮ್ಮಾ ಗೊಂಡು ಅಂತಿಮ ದರ್ಶನ ಪಡೆದರು.

Read These Next

ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ಎ.೩-೧೫ ಚಿಣ್ಣರ ಮೇಳ-೨ ಬೇಸಿಗೆ ಶಿಬಿರ; ಭಿತ್ತಿಪತ್ರ ಬಿಡುಗಡೆ

ಭಟ್ಕಳ: ಎ.೩ರಿಂದ ೧೫ ರ ವರೆಗೆ ಸಾಗರ ರಸ್ತೆಯ ವಿದ್ಯಾಂಜಲಿ ಪಬ್ಲಿಕ್ ಶಾಲೆಯಲ್ಲಿ ನಡೆಯುವ ಚಿಣ್ಣರ ಮೇಳ-೨ ಬೇಸಿಗೆ ಶಿಬಿರದ ಭಿತ್ತಿವನ್ನು ...

ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯಿಂದ ಕೊಲೆ ಬೆದರಿಕೆ:ದೂರು ದಾಖಲು

ಭಟ್ಕಳ ಸರಕಾರಿ ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ವ್ಯಕ್ತಿಯಿಂದ ಕೊಲೆ ಬೆದರಿಕೆ:ದೂರು ದಾಖಲು