ಮಾರ್ಚ 28 ಕ್ಕೆ ಕುಮಟದಲ್ಲಿನ ಬೃಹತ್ ಅರಣ್ಯ ಅತಕ್ರಮಣದಾರರ ಸಭೆ ಮುಂದಕ್ಕೆ

Source: SO News | By MV Bhatkal | Published on 26th March 2024, 6:05 PM | Coastal News | Don't Miss |

ಶಿರಸಿ: ಮುಂಬರುವ ಲೋಕಸಭಾ ಚುನಾವಣಾ ಹಿನ್ನೆಲೆಯಲ್ಲಿ ಮಾರ್ಚ ೨೮ ಗುರವಾರದಂದು ಕುಮಟದಲ್ಲಿ ಕರೆಯಲಾದ ಜಿಲ್ಲಾ ಮಟ್ಟದ ಬೃಹತ್ ಅರಣ್ಯವಾಸಿಗಳ ಸಭೆಯನ್ನ ಮುಂದೂಡಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ನಿರಂತರ ೩೩ ವರ್ಷ ಅರಣ್ಯವಾಸಿಗಳ ಪರವಾಗಿ ಭೂಮಿ ಹಕ್ಕು, ಅರಣ್ಯವಾಸಿಗಳ ದೌರ್ಜನ್ಯ, ಹೋರಾಟ, ಸಂಘಟನೆ, ಅರಣ್ಯವಾಸಿಗಳ ಪರವಾಗಿ ನ್ಯೂಡೆಲ್ಲಿಯಲ್ಲಿ ಪ್ರಕರಣ ಮುಂತಾದ ವಿವಿಧ ರೀತಿಯ ಅರಣ್ಯವಾಸಿಗಳ ಪರವಾದ ಕಾರ್ಯ ಜರುಗಿಸುವ ಹಿನ್ನೆಲೆಯಲ್ಲಿ ಚರ್ಚಿಸಿ ಲೋಕಸಭೆ ಚುನಾವಣೆಯಲ್ಲಿ ಅರಣ್ಯವಾಸಿಗಳ ನಿರ್ಧಾರ ಪ್ರಕಟಿಸುವ ಉದ್ದೇಶದಿಂದ ಕುಮಟಾದಲ್ಲಿ ಮಾರ್ಚ ೨೮ ರಂದು ಸಭೆ ಕರೆಯಲಾಗಿತ್ತು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 ಅತೀ ಶೀಘ್ರದಲ್ಲಿ ಮುಂದಿನ ಸಭೆಯ ದಿನಾಂಕವನ್ನ ಪ್ರಕಟಿಸಲಾಗುವುದೆಂದು ರವೀಂದ್ರ ನಾಯ್ಕ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Read These Next

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...