ಉತ್ತರಾಖಂಡ: ಕುಸಿದ ಸುರಂಗಮಾರ್ಗದಿಂದ ಎಲ್ಲ 41 ಕಾರ್ಮಿಕರ ರಕ್ಷಣೆ; 17 ದಿನಗಳ ಕಾರ್ಯಾಚರಣೆ ಯಶಸ್ವಿ

Source: Vb | By I.G. Bhatkali | Published on 29th November 2023, 11:46 PM | National News |

ಉತ್ತರಕಾಶಿ: ಉತ್ತರಾಖಂಡದ ಸಿಲ್ಯಾರಾದಲ್ಲಿ ಕುಸಿದುಬಿದ್ದ ಸುರಂಗಮಾರ್ಗದಲ್ಲಿ ಕಳೆದ 17 ದಿನಗಳಿಂದ ಸಿಲುಕಿಕೊಂಡಿದ್ದ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಮಂಗಳವಾರ ಯಶಸ್ವಿಯಾಗಿದ್ದು ಎಲ್ಲಾ 41 ಕಾರ್ಮಿಕರನ್ನು ಸುರಕ್ಷಿತವಾಗಿ ಹೊರತರಲಾಗಿದೆ. ಇದರೊಂದಿಗೆ ಮೂರು ವಾರಗಳಿಂದ ಕಾರ್ಮಿಕರ ಸುರಕ್ಷತೆಯ ಬಗ್ಗೆ ಇದ್ದ ಆತಂಕ ಕೊನೆಗೊಂಡಿದ್ದು, ಇಡೀ ದೇಶವೇ ನೆಮ್ಮದಿಯ  ನಿಟ್ಟುಸಿರೆಳೆಯುವಂತಾಗಿದೆ.

ಕಾರ್ಮಿಕರನ್ನು ಕೊಳವೆಮಾರ್ಗದ ಮೂಲಕ ಹೊರತರುವ ಕಾರ್ಯಾಚರಣೆ ರಾತ್ರಿ 8 ಗಂಟೆಗೆ ಆರಂಭಗೊಂಡಿದ್ದು, ಎಲ್ಲಾ ಕಾರ್ಮಿಕರು ಸುರಕ್ಷಿತವಾಗಿದ್ದಾರೆಂದು ಅಧಿಕೃತ ಮೂಲಗಳು ತಿಳಿಸಿವೆ. ಸುರಂಗ ಮಾರ್ಗದ ಕುಸಿದ ಅವಶೇಷಗಳ ನಡುವೆ ಅಳವಡಿ ಸಲಾದ ಉಕ್ಕಿನ ಪೈಪ್ ಮೂಲಕ ರಾಷ್ಟ್ರೀಯ ವಿಪತ್ತು ಸ್ಪಂದನಾ ಪಡೆ (ಎನ್‌ಡಿಆರ್‌ಎಫ್) ಹಾಗೂ ರಾಜ್ಯ ವಿಪತ್ತು ಸ್ಪಂದನಾ ಪಡೆ (ಎಸ್‌ಡಿ ಆರ್‌ಎಫ್ಗಳ ಸಿಬ್ಬಂದಿ ಕಾರ್ಮಿಕರು ಸಿಲುಕಿ ಕೊಂಡಿದ್ದ ಸ್ಥಳವನ್ನು ಪ್ರವೇಶಿಸಿದ್ದರು.

ಹಾಗೂ ಒಬ್ಬೊಬ್ಬರಂತೆ ಕಾರ್ಮಿಕರನ್ನು ಹೊರತಂದರೆಂದು ಮೂಲಗಳು ತಿಳಿಸಿವೆ. 4.5 ಕಿ.ಮೀ. ವಿಸ್ತೀರ್ಣದ ನಿರ್ಮಾಣ ಹಂತದ ಸಿಲ್ಯಾರಾ ಸುರಂಗಮಾರ್ಗದ ಒಂದು ಭಾಗವು ನವೆಂಬರ್ 12ರಂದು ಸಂಭವಿಸಿದ ಭೂಕುಸಿತದಿಂದಾಗಿ ಕುಸಿದುಬಿದ್ದಿದ್ದು, ಅಲ್ಲಿದ್ದ ಎಲ್ಲಾ 41 ಕಾರ್ಮಿಕರು ಹೊರಬರಲು ಸಾಧ್ಯವಾಗದೆ ಕಳೆದ 17 ದಿನಗಳಿಂದ ಸಿಲುಕಿಕೊಂಡಿದ್ದರು.

ಸುರಂಗಮಾರ್ಗದ ಕುಸಿದುಬಿದ್ದ ಭಾಗದ ಮೂಲಕ ತಳ್ಳಲಾಗಿದ್ದ ಆರು ಇಂಚಿನ ಪೈಪ್ ಮೂಲಕ ಕಾರ್ಮಿಕರಿಗೆ ಆಹಾರ, ಔಷಧಿ ಮತ್ತಿತರ ಸಾಮಗ್ರಿಗಳನ್ನು ಕಳುಹಿಸಿಕೊಡಲಾಗುತ್ತಿತ್ತು.

ಕಾರ್ಮಿಕರನ್ನು ತರಲು ಪೈಪ್‌ ಅಳವಡಿಕೆಗಾಗಿ ಕುಸಿದುಬಿದ್ದ ಕಲ್ಲು, ಮಣ್ಣು ಬಂಡೆಗಳ ಅವಶೇಷಗಳ ನಡುವೆ ರಂಧ್ರವನ್ನು ಕೊರೆಯಲು ಆರಂಭದಲ್ಲಿ ಅತ್ಯಾಧುನಿಕ ಆಗೆರ್ ಯಂತ್ರವನ್ನು ಬಳಸಲಾಗಿತ್ತು. ಆದರೆ ಆ ಯಂತ್ರವು ರಂಧ್ರಕೊರೆಯುವ ವೇಳೆ ಹಾನಿಗೀಡಾಗಿದ್ದರಿಂದ ಕಾರ್ಯಾಚರಣೆ ಎರಡು ದಿನಗಳ ಕಾಲ ಸ್ಥಗಿತಗೊಂಡಿತ್ತು. ತರುವಾಯ ರಕ್ಷಣಾ ತಂಡಗಳು ಕ್ಯಾಟ್ ಹೋಲ್ ತಂತ್ರಗಾರಿಕೆಗೆ ಮೊರೆಹೋದವು. ರಾಟ್‌ಹೋಲ್ ಗಣಿಗಾರರ ತಂಡವೊಂದು ಯಂತ್ರೋಪಕರಣಗಳ ನೆರವಿಲ್ಲದೆ ಕೇವಲ ಕೈಸಲರಿತವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ರಕ್ಷಿಸಲ್ಪಟ್ಟ ಕಾರ್ಮಿಕರಿಗಾಗಿ ಸಿಲ್ಯಾರಾದಿಂದ 30 ಕಿ.ಮೀ. ದೂರದ ಚಿನಾಯಿಸಾಲೂರ್‌ನಲ್ಲಿರುವ ಸಾಮುದಾಯಿಕ ಆರೋಗ್ಯಕೇಂದ್ರದಲ್ಲಿ 41 ಕೃತಕ ಆಮ್ಲಜನಕ ಪೂರೈಕೆ ಸೌಲಭ್ಯವಿರುವ ಹಾಸಿಗೆಗಳನ್ನು ಸ್ಥಾಪಿಸಲಾಗಿದೆ.

ಕಾರ್ಮಿಕರನ್ನು ಆಸ್ಪತ್ರೆಗೆ ಕೊಂಡೊಯ್ಯಲು ಆ್ಯಂಬುಲೆನ್ಸ್‌ಗಳು ಸಾಲುಗಟ್ಟಿ ನಿಂತಿದ್ದವು. ಅಗತ್ಯವಿದ್ದಲ್ಲಿ ಕಾರ್ಮಿಕರನ್ನು ಅತ್ಯಾಧುನಿಕ ಆಸ್ಪತ್ರೆಗೆ ಸಾಗಿಸಲಿಕ್ಕಾಗಿ ಏರ್‌ಲಿಫ್ಟ್ ಮಾಡುವ ಏರ್ಪಾಡುಗಳನ್ನು ಕೂಡಾ ಮಾಡಲಾಗಿತ್ತು.

ಮನಶಾಸ್ತ್ರಜ್ಞರ ಸಲಹೆಯ ಮೇರೆಗೆ ಸುರಂಗಮಾರ್ಗದ ಹೊರಗಡೆ ಇರುವ ಇಡೀ ಪ್ರದೇಶದಲ್ಲಿ ಸಾರ್ವಜನಿಕರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿತ್ತು.

ರಕ್ಷಿಸಲ್ಪಟ್ಟ ಕಾರ್ಮಿಕರನ್ನು ಆ್ಯಂಬುಲೆನ್ಸ್‌ ನಲ್ಲಿ ಕೊಂಡೊಯ್ಯುತ್ತಿದ್ದಂತೆಯೇ ದೂರದಲ್ಲಿ ಜಮಾಯಿಸಿದ್ದ ಜನರು ಭಾರತ ಮಾತಾ ಕಿ ಜೈ ಇತ್ಯಾದಿ ಘೋಷಣೆಗಳನ್ನು ಕೂಗುತ್ತಾ ಅಭಿನಂದನೆ ಸಲ್ಲಿಸಿದರು. ಸುರಂಗಮಾರ್ಗದ ಆಸುಪಾಸಿನಲ್ಲಿ ಸ್ಥಳೀಯರು ಸಿಹಿತಿಂಡಿಗಳನ್ನು ವಿತರಿಸಿ ಸಂಭ್ರಮಿಸಿದರು.

ಗಡ್ಕರಿ ಅಭಿನಂದನೆ: ಸಿಲ್ಯಾರಾ ಸುರಂಗಮಾರ್ಗದಲ್ಲಿ ಎಲ್ಲಾ 41 ಕಾರ್ಮಿಕರು ಸುರಕ್ಷಿತವಾಗಿ ಹೊರಬಂದಿರುವುದರಿಂದ ತಾನೀಗ ನಿರಾಳವಾಗಿ ದ್ದೇನೆ ಹಾಗೂ ಸಂತಸಭರಿತನಾಗಿದ್ದೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು 'ಎಕ್ಸ್' ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಕಾರ್ಯಾಚರಣೆಯ ಮೇಲೆ ನಿರಂತರವಾಗಿ ನಿಗಾವಿರಿಸಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೂ ಅವರು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.

“ವಿವಿಧ ಸಂಸ್ಥೆಗಳ ಅತ್ಯುತ್ತಮ ಸಮನ್ವಯತೆಯಿಂದಾಗಿ ಈ ಕಾರ್ಯಾಚರಣೆ ಯಶಸ್ವಿಯಾಗಿದೆ. ಇತ್ತೀಚಿನ ವರ್ಷಗಳಲ್ಲಿ ನಡೆದಿರುವ ಅತ್ಯಂತ ಮಹತ್ವದ ರಕ್ಷಣಾ ಕಾರ್ಯಾಚರಣೆ ಇದಾಗಿದೆ ಎಂದು ಗಡ್ಕರಿ ಹೇಳಿದ್ದಾರೆ. ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಪ್ರತಿಯೊಂದು ಸಂಸ್ಥೆಗಳು ಹಾಗೂ ವ್ಯಕ್ತಿಗಳಿಗೆ ಅವರು ಕೃತಜ್ಞತೆಯನ್ನು ಅರ್ಪಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...