ಲಿಂಕ್‌ವೊಂದನ್ನು ತೆರೆದ ಖಾಸಗಿ ಬ್ಯಾಂಕ್‌ನ 40 ಗ್ರಾಹಕರಿಗೆ ಲಕ್ಷಾಂತರ ರೂ. ವಂಚನೆ

Source: Vb | Published on 5th March 2023, 10:22 PM | National News |

ಮುಂಬೈ: ಇಲ್ಲಿಯ ಖಾಸಗಿ ಬ್ಯಾಂಕೊಂದರ ಕನಿಷ್ಠ 40 ಗ್ರಾಹಕರು ತಮ್ಮ ಕೆವೈಸಿ ಮತ್ತು ಪಾನ್ ವಿವರಗಳನ್ನು ನವೀಕರಿಸುವಂತೆ ನಕಲಿ ಎಸ್‌ಎಂಎಸ್ ಗಳಲ್ಲಿಯ ಲಿಂಕ್‌ವೊಂದನ್ನು ಕ್ಲಿಕ್ಕಿಸಿದ ಬಳಿಕ ಮೂರೇ ದಿನಗಳಲ್ಲಿ ತಮ್ಮ ಖಾತೆಗಳಲ್ಲಿಯ ಲಕ್ಷಾಂತರ ರೂ. ಗಳನ್ನು ಕಳೆದುಕೊಂಡಿದ್ದಾರೆ.

ಬ್ಯಾಂಕ್ ಗ್ರಾಹಕರ ಗೌಪ್ಯ ವಿವರಗಳನ್ನು ಕೇಳುವ ಇಂತಹ ಲಿಂಕ್‌ಗಳನ್ನು ಕ್ಲಿಕ್ಕಿಸದಂತೆ ಮುಂಬೈ ಪೊಲೀಸರು ನಾಗರಿಕರಿಗೆ ಎಚ್ಚರಿಕೆ ನೀಡಿದ್ದಾರೆ.

ವಂಚಕರು ಫಿಶಿಂಗ್ ಲಿಂಕ್ ಗಳೊಂದಿಗೆ, ಕೆವೈಸಿ/ಪಾನ್ ವಿವರಗಳನ್ನು ಅಪ್ ಡೇಟ್ ಮಾಡದಿದ್ದಕ್ಕಾಗಿ ನಿಮ್ಮ ಬ್ಯಾಂಕ್ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂಬ ಎಸ್ಎಂಎಸ್ ಸಂದೇಶಗಳನ್ನು ಗ್ರಾಹಕರಿಗೆ ಕಳುಹಿಸುತ್ತಿದ್ದಾರೆ ಮತ್ತು ಇಂತಹ ಲಿಂಕ್‌ಗಳು ಗ್ರಾಹಕರನ್ನು ಅವರ ಬ್ಯಾಂಕಿನ ನಕಲಿ ವೆಬ್‌ಸೈಟ್‌ಗೆ ಕೊಂಡೊಯ್ಯುತ್ತವೆ. ಅಲ್ಲಿ ತಮ್ಮ ಕಸ್ಟಮರ್ ಐಡಿ, ಪಾಸ್‌ವರ್ಡ್ ಮತ್ತು ಇತರ ಗೌಪ್ಯ ವಿವರಗಳನ್ನು ನಮೂದಿಸುವಂತೆ ಅವರಿಗೆ ಸೂಚಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಂಚಕರ ತಂತ್ರಕ್ಕೆ ಬಲಿಯಾದ 40 ಗ್ರಾಹಕರಲ್ಲಿ ಟಿವಿ ನಟಿ ಶ್ವೇತಾ ಮೆನನ್ ಸೇರಿದ್ದಾರೆ.

ಕಳೆದ ವಾರ ತಾನು ನಕಲಿ ಎಸ್‌ಎಂಎಸ್‌ನಲ್ಲಿಯ ಲಿಂಕ್ ಅನ್ನು ಕ್ಲಿಕ್ಕಿಸಿದ್ದೆ, ಈ ಸಂದೇಶವನ್ನು ತನ್ನ ಈ ಬ್ಯಾಂಕ್ ಕಳುಹಿಸಿದೆ ಎಂದು ತಾನು ನಂಬಿದ್ದೆ. ಲಿಂಕ್ ಕ್ಲಿಕ್ಕಿಸಿದಾಗ ತೆರೆದುಕೊಂಡಿದ್ದ ಪೋರ್ಟಲ್‌ನಲ್ಲಿ ತನ್ನ ಕಸ್ಟಮರ್ ಐಡಿ, ಪಾಸ್‌ವರ್ಡ್ ಮತ್ತು ಒಟಿಪಿಯನ್ನು ನಮೂದಿಸಿದ್ದೆ. ಬ್ಯಾಂಕ್ ಅಧಿಕಾರಿಯೆಂದು ಹೇಳಿಕೊಂಡಿದ್ದ ಮಹಿಳೆ ತನಗೆ ಕರೆ ಮಾಡಿ ತನ್ನ ಮೊಬೈಲ್‌ಗೆ ಬಂದಿದ್ದ ಇನ್ನೊಂದು ಒಟಿಪಿಯನ್ನು ನಮೂದಿಸುವಂತೆ ಸೂಚಿಸಿದ್ದಳು. ಇದಾದ ಬಳಿಕ ತನ್ನ ಖಾತೆಯಿಂದ 57,636 ರೂ. ಮಾಯವಾಗಿದ್ದವು ಎಂದು ಮೆನನ್ ಪೊಲೀಸ್ ದೂರಿನಲ್ಲಿ ತಿಳಿಸಿದ್ದಾರೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...