ಉ.ಕ.ಜಿಲ್ಲೆಯಾದ್ಯಂತ ಇಂದಿನಿಂದ ೧೪೪ ಸೆಕ್ಷನ್ ಜಾರಿ; ಭಟ್ಕಳ ಲಾಕ್ ಡೌನ್ ಮಾಡಲು ಜಿಲ್ಲಾಧಿಕಾರಿ ಆದೇಶ

Source: sonews | By Staff Correspondent | Published on 23rd March 2020, 6:29 PM | Coastal News | Don't Miss |

ಭಟ್ಕಳ: ದೇಶ ಮತ್ತು ರಾಜ್ಯದಲ್ಲಿ  ಕೋವಿಡ್ -19 ವೈರಾಣು ಸೊಂಕಿತರ ಸಂಖ್ಯೆಯಲ್ಲಿ ಏರಿಕೆಯಾಗುದ್ದು, ಅದರಲ್ಲಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿಗೆ ವಿದೇಶದಿಂದ ಬಂದಿರುವವವರ ಸಂಖ್ಯೆ ಹೆಚ್ಚಿರುವ ಹಿನ್ನಲೆಯಲ್ಲಿ ಮಾ.೨೪ರಿಂದ ಉ.ಕ.ಜಿಲ್ಲೆಯಾದ್ಯಂತ ೧೪೪ ಸೆಕ್ಷನ್ ಜಾರಿಗೊಳಿಸಿದ್ದು ಭಟ್ಕಳದ ಜನತೆ ಹೆಚ್ಚಿನ ಪ್ರಮಾಣದಲ್ಲಿ ವಿದೇಶದಿಂದ ಮರಳುತ್ತಿದ್ದು ನಿಗಧಿತ ಸಾಮಾಜಿಕ ಅಂತರ ಕಾಯ್ದುಕೊಳ್ಳು ಸೂಚನರ ನೀಡಿದರೂ ಸಹ ಸಾರ್ವಜನಿಕರು ಸರಕಾರಾತ್ಮಕವಾಗಿ ಸ್ಪಂಧಿಸದೆ ಇರುವುದರಿಮದ  ಭಟ್ಕಳ ತಾಲೂಕಿನ ಸಂಪರ್ಕವನ್ನ ಸಂಪೂರ್ಣ ಬಂದ್ ( ಲಾಕ್ ಡೌನ್) ಮಾಡಲಾಗುವುದು ಎಂದು ಜಿಲ್ಲಾಧಿಕರಿ ಡಾ ಹರೀಶಕುಮಾರ ಆದೇಶ ಹೊರಡಿಸಿದ್ದಾರೆ.

ಇನ್ನೂ ಜಿಲ್ಲೆಯ ಉಳಿದ ತಾಲೂಕಿನಲ್ಲಿಯೂ ನಾಳೆಯಿಂದ 144 ಜಾರಿ ಮಾಡಿಲಾಗಿದೆ. ನಿನ್ನೆ ಭಟ್ಕಳದ ಯುವಕನಲ್ಲಿ ಕೊರೋನಾ ಕಾಣಿಸಿಕೊಂಡಿರುವುದರಿಂದ ನಮ್ಮ ಜಿಲ್ಲೆಗೆ ಅಥವಾ ಭಟ್ಕಳಕ್ಕೆ ಯಾವುದೆ ತೊಂದರೆ ಇಲ್ಲ. ಆ ಯುವಕ ಭಟ್ಕಳಕ್ಕೆ ಬರುವ ಮೊದಲೆ ಮಂಗಳೂರಿನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದರಿಂದ ಯಾರು ಭಯಪಡಬೇಕಾಗಿಲ್ಲ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದು, ಅಗತ್ಯ ಸರಕುಸಾಗಣಿಕೆ, ಜೀವನೋಪಾಯಕ್ಕೆ ಅಗತ್ಯವಿರುವ ಆಹಾರ ,ಪಡಿತರ, ಹಾಲು ತರಕಾರಿ, ದಿನಸಿ, ಮಾಂಸ, ಮೀನು, ಹಣ್ಣುಹಂಪಲು ಸರಬರಾಜಿನಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದೂ ಅವರು ತಿಳಿಸಿದ್ದಾರೆ.

ಸರ್ಕಾರದ ಆದೇಶವನ್ನು ಉಲ್ಲಂಘಿಸಿದ್ದಲ್ಲಿ ಅಪಾಧಿತರ ವಿರುದ್ಧ ಕ್ರಮ ಜರಗಿಸಲು ಆಯಾ ತಾಲೂಕು ದಂಡಾಧಿಕಾರಿಗಳು ಬದ್ಧರಾಗಿರುತ್ತಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...