2021-22ರ ನಡುವೆ ಅದಾನಿ ಪವರ್‌ನಿಂದ ವಿದ್ಯುತ್ ಖರೀದಿ ವೆಚ್ಚ ಶೇ.102 ಹೆಚ್ಚಳ; ಗುಜರಾತ್ ಸರಕಾರ

Source: Vb | By I.G. Bhatkali | Published on 6th March 2023, 7:42 AM | National News |

ಅಹ್ಮದಾಬಾದ್: ಗುಜರಾತ್ ಸರಕಾರದಿಂದ 2021 ಮತ್ತು 2022ರ ನಡುವೆ ಅದಾನಿ ಪವರ್‌ನಿಂದ ವಿದ್ಯುತ್ ಖರೀದಿಯ ಸರಾಸರಿ ವೆಚ್ಚದಲ್ಲಿ ಶೇ.102ರಷ್ಟು ಏರಿಕೆಯಾಗಿದೆ ಎಂದು ರಾಜ್ಯದ ಇಂಧನ ಸಚಿವ ಕನು ದೇಸಾಯಿ ಅವರು ವಿಧಾನಸಭೆಯಲ್ಲಿ ತಿಳಿಸಿದ್ದಾರೆ.

ಆಪ್ ಶಾಸಕ ಹೇಮಂತ ಅಹಿರ್ ಅವರ ಪ್ರಶ್ನೆಗೆ ನೀಡಿದ ಉತ್ತರದಲ್ಲಿ ಸಚಿವರು, ಅದಾನಿ ಪವರ್‌ನಿಂದ ವಿದ್ಯುತ್‌ ಖರೀದಿಯ ಸರಾಸರಿ ವೆಚ್ಚವು 2022ರಲ್ಲಿ ಶೇ.102ರಷ್ಟು, ಅಂದರೆ ಪ್ರತೀ ಯೂನಿಟ್‌ಗೆ 3.58 ರೂ.ನಿಂದ 7.24 ರೂ.ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

ವೆಚ್ಚದಲ್ಲಿ ಹೆಚ್ಚಳವಾಗಿದ್ದರೂ 2021ಕ್ಕೆ ಹೋಲಿಸಿದರೆ 2022ರಲ್ಲಿ ಅದಾನಿ ಪವರ್‌ನಿಂದ ಶೇ.7.5ರಷ್ಟು ಹೆಚ್ಚು ವಿದ್ಯುತ್ ಖರೀದಿಸಲಾಗಿದೆ. 2021ರಲ್ಲಿ 558.7 ಕೋಟಿ ಯೂನಿಟ್ ವಿದ್ಯುತ್ ಖರೀದಿಸಲಾಗಿದ್ದರೆ, 2022ರಲ್ಲಿ ಅದು 600.7 ಕೋಟಿ ಯೂನಿಟ್‌ಗಳಿಗೆ ಏರಿಕೆಯಾಗಿದೆ. ಈ ಎರಡು ವರ್ಷಗಳ ಅವಧಿಯಲ್ಲಿ ಗುಜರಾತ್ ಸರಕಾರವು ನಿಗದಿತ ಶುಲ್ಕಗಳು ಮತ್ತು ಪ್ರತೀ ಯೂನಿಟ್ ವಿದ್ಯುತ್ ವೆಚ್ಚ ಸೇರಿದಂತೆ ಅದಾನಿ ಪವರ್‌ಗೆ 8,160 ಕೋ.ರೂ.ಗಳನ್ನು ಪಾವತಿಸಿದೆ.

2007ರಲ್ಲಿ ಅದಾನಿ ಪವರ್ ಸಲ್ಲಿಸಿದ್ದ ಬಿಡ್‌ನಲ್ಲಿ 25 ವರ್ಷಗಳ ಅವಧಿಗೆ ಪ್ರತೀ ಯೂನಿಟ್ ವಿದ್ಯುತ್ತನ್ನು 2.35 ರೂ. ಮತ್ತು 2.89 ರೂ.ನಡುವಿನ ದರಕ್ಕೆ ಮಾರಾಟ ಮಾಡಲು ಅವಕಾಶವಿದ್ದರೂ ಅದು ಗುಜರಾತ್ ಸರಕಾರದಿಂದ ಅಧಿಕ ದರವನ್ನು ವಸೂಲು ಮಾಡಿದೆ.

ಅದಾನಿ ವಿದ್ಯುತ್ ಯೋಜನೆಯು ಇಂಡೋನೇಶ್ಯದಿಂದ ಆಮದು ಕಲ್ಲಿದ್ದಲನ್ನು ಅವಲಂಬಿಸಿತ್ತು ಮತ್ತು 2011ರ ಬಳಿಕ ಕಲ್ಲಿದ್ದಲು ಬೆಲೆಯಲ್ಲಿ ಅನಿಗದಿತ ಏರಿಕೆಯಿಂದಾಗಿ ಅದಕ್ಕೆ ಪೂರ್ಣ ಸಾಮರ್ಥ್ಯದಲ್ಲಿ ವಿದ್ಯುತ್‌ ಉತ್ಪಾದನೆ ಸಾಧ್ಯವಾಗಿರಲಿಲ್ಲ. ಇದನ್ನು ಪರಿಗಣಿಸಿ ರಾಜ್ಯ ಸರಕಾರವು ಉನ್ನತಾಧಿಕಾರ ಸಮಿತಿಯೊಂದನ್ನು ರಚಿಸಿತ್ತು. 2018,ಡಿ.1ರ ನಿರ್ಣಯದಂತೆ ಸರಕಾರವು ನೀತಿ ನಿರ್ಧಾರವಾಗಿ ಕೆಲವು ತಿದ್ದುಪಡಿಗಳೊಂದಿಗೆ ಸಮಿತಿಯ ಶಿಫಾರಸುಗಳನ್ನು ಅಂಗೀಕರಿಸುವ ಮೂಲಕ ವಿದ್ಯುತ್‌ ಖರೀದಿ ದರಗಳಲ್ಲಿ ಏರಿಕೆಯನ್ನು ಅನು ಮೋದಿಸಿತ್ತು ಎಂದು ಸಚಿವರು ವಿವರಿಸಿದರು.

ಅಂತರ್‌ರಾಷ್ಟ್ರೀಯ ಕಲ್ಲಿದ್ದಲು ಬೆಲೆಗಳ ಏರಿಕೆ ಯಿಂದಾಗಿ 2021ರಲ್ಲಿ ವಿದ್ಯುತ್‌ ಖರೀದಿ ದರ ದಲ್ಲಿ ಹೆಚ್ಚಳವನ್ನು ಪರಿಷ್ಕರಿಸಲು ರಾಜ್ಯ ಸರಕಾರವು ಅದಾನಿ ಪವರ್‌ನೊಂದಿಗೆ ಇನ್ನೊಂದು ಒಪ್ಪಂದಕ್ಕೆ ಸಹಿ ಹಾಕಿತ್ತು ಎಂದು ಅವರು ತಿಳಿಸಿದರು.

ವೆಚ್ಚ ಹೆಚ್ಚಳ ಸದ್ದಿಲ್ಲದೆ ಗ್ರಾಹಕರ ತಲೆಗೆ ಅದಾನಿ ಪವರ್‌ನಿಂದ ಖರೀದಿಸಿದ ವಿದ್ಯುತ್ತಿನ ಹೆಚ್ಚುತ್ತಿರುವ ವೆಚ್ಚವನ್ನು ಭರಿಸಿಕೊಳ್ಳಲು ಸರಕಾರದ ಮಾರ್ಗಗಳ ಕುರಿತು ವಿದ್ಯುತ್‌ ಕ್ಷೇತ್ರದ ತಜ್ಞ ಕೆ.ಕೆ. ಬಜಾಜ್ ಅವರು, ಸರಕಾರವು ಸರಳವಾಗಿ ಇಂಧನ ಮತ್ತು ವಿದ್ಯುತ್‌ ಖರೀದಿ ಬೆಲೆ ಹೊಂದಾಣಿಕೆ (ಎಫ್ಪಿಪಿಪಿಎ) ಶುಲ್ಕವನ್ನು ಹೆಚ್ಚಿಸುತ್ತದೆ. ಕಳೆದ ಹಲವಾರು ವರ್ಷಗಳಿಂದ ತಾನು ವಿದ್ಯುತ್ ದರವನ್ನು ಹೆಚ್ಚಿಸಿಲ್ಲ ಎಂದು ಗುಜರಾತ್ ಸರಕಾರವು ಹೇಳಿಕೊಳ್ಳುತ್ತಿದೆಯಾದರೂ, ಅಧಿಕಾರಿಗಳು ಗ್ರಾಹಕರ ದೈಮಾಸಿಕ ವಿದ್ಯುತ್ ಬಿಲ್‌ನಲ್ಲಿ ಎಫ್ ಪಿಪಿಪಿಎ ಶುಲ್ಕವನ್ನು ಸದ್ದಿಲ್ಲದೆ ಹೆಚ್ಚಿಸುತ್ತಿದ್ದಾರೆ ಎಂದು ತಿಳಿಸಿದರು. 2021 ಮತ್ತು 2022ರ ನಡುವೆ ರಾಜ್ಯ ಸರಕಾರವು ಕನಿಷ್ಠ ಎಂಟು ಸಲ ಎಫ್ ಪಿಪಿಪಿಎ ಶುಲ್ಕವನ್ನು ಹೆಚ್ಚಿಸಿದೆ.

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...