ಉತ್ತರ ಕನ್ನಡ ಜಿಲ್ಲಾ ದೇವಡಿಗ sಸಮಾಜ ನೌಕರರ ಸಮಾವೇಶ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

Source: sonews | By Staff Correspondent | Published on 13th August 2018, 6:27 PM | Coastal News | Don't Miss |

ಭಟ್ಕಳ :  ದೇವಡಿಗ ಸಮಾಜದಲ್ಲಿ ಪ್ರತಿಭಾವಂತರು ಸಾಕಷ್ಟು ಸಂಖ್ಯೆಯಲ್ಲಿ ಇದ್ದಾರೆ. ಅವರಿಗೆ ಮಾರ್ಗದರ್ಶನ, ಪ್ರೋತ್ಸಾಹ ಅಗತ್ಯವಾಗಿದೆ. ಅದೇ ರೀತಿ ಸಂಘದಿಂದ ಸಹಾಯ ಪಡೆದ ವಿದ್ಯಾರ್ಥಿಗಳು ಮುಂದೆ ತಾವು ಉನ್ನತ ಸ್ಥಾನವನ್ನು ಪಡೆದಾಗ, ಅಥವಾ ಆರ್ಥಿಕವಾಗಿ ಸದೃಢರಾದಾಗ ಸಮಾಜದ ಏಳ್ಗೆಗಾಗಿ ಶ್ರಮಿಸಬೇಕು ಎಂದು ದಿನೇಶ ಗೋವಿಂದ ದೇವಡಿಗ, ಮುಖ್ಯಸ್ಥರು, ಆರ್.ಎನ್.ಡಿ. ವಿಭಾಗ, ಟಾಟಾ ಮೋಟರ್ಸ್ ಲಿ. ರವರು ಹೇಳಿದರು. 
    
ಅವರು ತಾಲೂಕಿನ ಬೆಂಗ್ರೆ ಯಕ್ಷೆಮನೆ ದೇವಡಿಗ ಸಭಾ ಭವನದಲ್ಲಿ ಉತ್ತರ ಕನ್ನಡ ಜಿಲ್ಲಾ ದೇವಡಿಗ ಸಮಾಜ ನೌಕರರ ಸಂಘ (ರಿ), ಮುರುಡೇಶ್ವರ ಇದರ ಆಶ್ರಯದಲ್ಲಿ ನಡೆದ ಪ್ರತಿಭಾ ಪುರಸ್ಕಾರ, ಸನ್ಮಾನ ಹಾಗೂ ನೌಕರರ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು. 
    
ಮುಖ್ಯ ಅತಿಥಿಗಳಾಗಿ ವಿಷ್ಣು ದೇವಡಿಗ ಸದಸ್ಯರು, ತಾಲೂಕಾ ಪಂಚಾಯತ ಭಟ್ಕಳ, ವೆಂಕ್ಟಯ್ಯ ಜೆ. ಭೈರುಮನೆ, ಅಧ್ಯಕ್ಷರು, ಗ್ರಾಮ ಪಂಚಾಯತ, ಬೆಂಗ್ರೆ, ಶ್ರೀಮತಿ ಸುಭದ್ರಾ ದೇವಡಿಗ, ಉಪಾಧ್ಯಕ್ಷರು, ಗ್ರಾಮೀಣ ವ್ಯವಸಾಯ ಸೇವಾ ಸಹಕಾರಿ ಸಂಘ, ಶಿರಾಲಿ, ಕಮಲಾಕರ ಕೋಟದಮಕ್ಕಿ ಇವರು ಉಪಸ್ಥಿತರಿದ್ದರು.
    
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಉತ್ತರ ಕನ್ನಡ ಜಿಲ್ಲಾ ದೇವಾಡಿಗ ಸಮಾಜ ನೌಕರ ಸಂಘದ ಅಧ್ಯಕ್ಷ ಮಾದೇವ ಜಿ. ಗದ್ದೆಮನೆ ಇವರು ವಹಿಸಿದ್ದರು. ಸಂಘದ ಸದಸ್ಯರಾದ ಲಕ್ಷ್ಮಣ ಕೋಟದಮಕ್ಕಿ ಎಲ್ಲರನ್ನು  ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಕಾರ್ಯದರ್ಶಿ ಮಂಜುನಾಥ ಜಿ. ದೇವಡಿಗÀ ಇವರು ವರದಿ ವಾಚನ ಮಾಡಿದರು. ಶಿಕ್ಷಕ ನಾಗೇಶ ದೇವಡಿಗ ಇವರು ಕಾರ್ಯಕ್ರಮ ನಿರೂಪಿಸಿದರು. 
     
ಶಿಕ್ಷಣ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಿದ ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ, ಬಿಬಿಎ, ಬಿಸಿಎ, ಬಿಸಿಎಂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಹಾಗೂ ಉದಯೋನ್ಮುಖ ಸಾಧಕರುಗಳನ್ನು, ಮತ್ತು ನಿವೃತ್ತ ನೌಕರರನ್ನು ಸನ್ಮಾನಿಸಿ ಗೌರವಿಸಲಾಯಿತು. 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...