ಬಿಜೆಪಿ ತೊರೆದ ಉ.ಪ್ರ.ಸಂಸದೆ ಸಾವಿತ್ರಿಬಾಯಿ

Source: sonews | By Staff Correspondent | Published on 7th December 2018, 12:08 AM | National News | Don't Miss |

ಹೊಸದಿಲ್ಲಿ : ತಮ್ಮ ವಿವಾದಾಸ್ಪದ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದೆ ಸಾವಿತ್ರಿ ಬಾಯಿ ಫುಳೆ ಇಂದು ಪಕ್ಷವನ್ನು ತೊರೆದಿದ್ದಾರೆ. "ಭಾರತದ ಹಣವನ್ನು ದೇಶದ ಅಭಿವೃದ್ಧಿಗಾಗಿ ಉಪಯೋಗಿಸುವ ಬದಲು ಮೂರ್ತಿಗಳನ್ನು ನಿರ್ಮಿಸಲು ಬಳಸಲಾಗುತ್ತಿದೆ'' ಎಂದು ಅವರು ಆರೋಪಿಸಿದ್ದಾರೆ. ಬಿಜೆಪಿ ಸಮಾಜವನ್ನು ವಿಭಜಿಸಲು ಯತ್ನಿಸುತ್ತಿದೆ ಎಂದೂ ಅವರು ದೂರಿದ್ದಾರೆ. 

"ನಾನೊಬ್ಬಳು ಸಾಮಾಜಿಕ ಕಾರ್ಯಕರ್ತೆ. ನಾನು ದಲಿತರಿಗಾಗಿ ಕೆಲಸ ಮಾಡುತ್ತೇನೆ. ಆದರೆ ದಲಿತರಿಗೆ ಮೀಸಲಾತಿ ಒದಗಿಸಲು ಬಿಜೆಪಿ ಏನನ್ನೂ ಮಾಡುತ್ತಿಲ್ಲ,'' ಎಂದು ಬಹ್ರೈಚ್ ಕ್ಷೇತ್ರದ ಸಂಸದೆಯಾಗಿರುವ ಫುಳೆ ತಾವು ಬಿಜೆಪಿ ತೊರೆಯುತ್ತಿರುವುದಾಗಿ ಘೋಷಿಸಿದ ನಂತರ ಹೇಳಿಕೊಂಡರು.

ಹನುಮಾನ್ ಒಬ್ಬ ದಲಿತನಾಗಿದ್ದ ಹಾಗೂ ಮನುವಾದಿ ಜನರ ಗುಲಾಮನಾಗಿದ್ದ ಎಂದು ಫುಳೆ ಈ ಹಿಂದೆ ಆರೋಪಿಸಿದ್ದರು. "ಆತ ದಲಿತ ಹಾಗೂ ಮಾನವನಾಗಿದ್ದ. ಆತ ರಾಮನಿಗಾಗಿ ಎಲ್ಲವನ್ನೂ ಮಾಡಿದ. ಆದರೂ ಅವನಿಗೇಕೆ ಬಾಲ ನೀಡಲಾಗಿತ್ತು ಹಾಗೂ ಮುಖವನ್ನು ಕಪ್ಪಗಾಗಿಸಲಾಗಿತ್ತು? ಆತನನ್ನೇಕೆ ಕೋತಿಯನ್ನಾಗಿಸಲಾಗಿತ್ತು?'' ಎಂದು ಫುಳೆ ಪ್ರಶ್ನಿಸಿದ್ದರು. ಹನುಮಾನ್ ಒಬ್ಬ ದಲಿತನಾಗಿದ್ದ ಎಂದು ಮುಖ್ಯಮಂತ್ರಿ ಆದಿತ್ಯನಾಥ್ ಹೇಳಿದ್ದಕ್ಕೆ ಪ್ರತಿಯಾಗಿ ಆಕೆ ಮೇಲಿನಂತೆ ಪ್ರತಿಕ್ರಿಯಿಸಿದ್ದರು.

ಮೇ ತಿಂಗಳಲ್ಲಿ ಆಕೆ ಜಿನ್ನಾರನ್ನು ಮಹಾಪುರುಷ್ ಎಂದು ಹೇಳಿ ವಿವಾದಕ್ಕೀಡಾಗಿದ್ದರು. 

Read These Next

ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ವರದಿ ಕೊಡಿ; ರಾಜ್ಯ ಡಿಜಿಪಿಗೆ ರಾಷ್ಟ್ರೀಯ ಮಹಿಳಾ ಆಯೋಗ ಸೂಚನೆ

ಹಾಸನ ಸಂಸದ ಪ್ರಜ್ವಲ್ ರೇವಣ್ಣ ಸಾವಿರಾರು ಮಹಿಳೆಯರ ಮೇಲೆ ನಡೆಸಿದ್ದಾರೆನ್ನಲಾದ ಲೈಂಗಿಕ ದೌರ್ಜನ್ಯಗಳ ಬಗ್ಗೆ ಮೂರು ದಿನಗಳಲ್ಲಿ ...

ನಾಮಪತ್ರ ಹಿಂಪಡೆದ ಇಂದೋರ್ ಕಾಂಗ್ರೆಸ್ ಅಭ್ಯರ್ಥಿ; ಅಕ್ಷಯ್ ಕಾಂತಿ ಬಮ್ ಬಿಜೆಪಿ ಸೇರ್ಪಡೆ

ಇಂದೋರ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಅಕ್ಷಯ್ ಕಾಂತಿ ಬಮ್ ಅವರು ತನ್ನ ನಾಮಪತ್ರವನ್ನು ಹಿಂಪಡೆದಿದ್ದಾರೆ ಹಾಗೂ ಬಿಜೆಪಿ ...

ಲೈಂಗಿಕ ಹಗರಣ; ಪ್ರಜ್ವಲ್ ರೇವಣ್ಣರನ್ನು ಮೋದಿ ರಕ್ಷಿಸುತ್ತಿದ್ದಾರೆ; ಕಾಂಗ್ರೆಸ್

ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣರನ್ನು ಪ್ರಧಾನಿ ನರೇಂದ್ರ ಮೋದಿಯವರು ...