ಉಡುಪಿ: ಠಾಣೆಯಲ್ಲೇ ರಾಜಿನಾಪತ್ರ ಬರೆದು ಮನೆಗೆ ತೆರಳಿದ ಪಿ.ಎಸ್.ಐ ಮಹಾಬಲ ಶೆಟ್ಟಿ

Source: sonews | By Staff Correspondent | Published on 6th July 2018, 11:37 PM | Coastal News | State News |

ಉಡುಪಿ: ತನ್ನ ಮೇಲಾಧಿಕಾರಿಗಳು ಕಿರುಕುಳ ನಿಡುತ್ತಿದ್ದಾರೆಂದು ಆರೋಪಿಸಿ  ಹೆಬ್ರಿ ಪೊಲೀಸ್ ಠಾಣೆಯ ಉಪ ನಿರೀಕ್ಷಕ ಮಹಾಬಲ ಶೆಟ್ಟಿ ಪೊಲೀಸ್ ಠಾಣೆಯಲ್ಲಿ ರಾಜಿನಾಮೆ ಬರೆದು ಮನೆಗೆ ತೆರಳಿದ ಘಟನೆ ಶುಕ್ರವಾರ ನಡೆದಿದೆ. 

ಕಳ್ತೂರು ಸಂತೆಕಟ್ಟೆಯಲ್ಲಿ ಜಮೀನಿಗೆ ಸಂಬಂಧಿಸಿದ ಪ್ರಕರಣವೊಂದು ಗುರುವಾರ ಹೆಬ್ರಿ ಠಾಣೆಯಲ್ಲಿ ದಾಖಲಾಗಿದ್ದು, ಇದೇ ಪ್ರಕರಣದ ಇನ್ನೊಂದು ಕಡೆಯವರು ಶುಕ್ರವಾರ ಮೇಲಾಧಿಕಾರಿಗಳನ್ನು ಸಂಪರ್ಕಿಸಿ ಹೆಬ್ರಿ ಪೊಲೀಸರ ಬಗ್ಗೆ ದೂರು ನೀಡಿದ್ದಾರೆನ್ನಲಾಗಿದೆ. ಈ ವಿಚಾರವಾಗಿ ಮೇಲಾಧಿಕಾರಿಗಳು ಠಾಣಾಧಿಕಾರಿಯವನ್ನು ಕರೆಸಿ ವಿಚಾರಿಸಿದ್ದಾರೆನ್ನಲಾಗಿದೆ.

ಬಳಿಕ ಠಾಣೆಗೆ ಆಗಮಿಸಿದ ಮಹಾಬಲ ಶೆಟ್ಟಿ, ರಾಜಕೀಯ ಪ್ರಭಾವದಿಂದ ಮೇಲಾಧಿಕಾರಿಗಳು ಕಿರುಕುಳ ನೀಡುತ್ತಿದ್ದಾರೆಂದು ಆರೋಪಿಸಿ, ಠಾಣೆಯ ಡೈರಿ ಯಲ್ಲಿ ರಾಜೀನಾಮೆ ಬರೆದಿದ್ದು, ಬಳಿಕ ತನ್ನ ಮೊಬೈಲ್‌ನ್ನು ಟೇಬಲ್ ಮೇಲೆ ಇಟ್ಟು ಮನೆಗೆ ತೆರಳಿದ್ದಾರೆ ಎಂದು ತಿಳಿದು ಬಂದಿದೆ. ಅಲ್ಲದೆ ಅವರು ರಾಜೀ ನಾಮೆ ಪತ್ರವನ್ನು ಮಂಗಳೂರು ಪಶ್ಟಿಮ ವಲಯ ಐಜಿಪಿ ಹಾಗೂ ಇತರ ಅಧಿಕಾರಿಗಳಿಗೂ ಕಳುಹಿಸಿದ್ದಾರೆನ್ನಲಾಗಿದೆ.

ಠಾಣೆಯಿಂದ ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರದಲ್ಲಿರುವ ತನ್ನ ಮನೆಗೆ ತೆರಳಿದ ಅವರು ಯಾರ ಸಂಪರ್ಕಕ್ಕೂ ಸಿಕ್ಕಿರಲಿಲ್ಲ. ನಂತರ ಮೇಲಾಧಿಕಾರಿಗಳು ಇವರ ಬಗ್ಗೆ ಮಾಹಿತಿ ಕಲೆಹಾಕಿ, ಮನೆಗೆ ತೆರಳಿ ಮನವೊಲಿಸಿ ಠಾಣೆಗೆ ಬರುವಂತೆ ಮಾಡಿದ್ದಾರೆಂದು ಮೂಲಗಳು ತಿಳಿಸಿವೆ.
ಮಹಾಬಲ ಶೆಟ್ಟಿ ವಿಧಾನಸಭಾ ಚುನಾವಣೆಗೆ ಮೊದಲು ಹೆಬ್ರಿ ಠಾಣೆ ಉಪನಿರೀಕ್ಷಕರಾಗಿ ಭಡ್ತಿ ಹೊಂದಿ ಅಧಿಕಾರ ವಹಿಸಿಕೊಂಡಿದ್ದರು. ಇದಕ್ಕೂ ಮೊದಲು ಅವರು ಅಮಾಸೆಬೈಲು ಠಾಣೆಯಲ್ಲಿ ಎಎಸ್ಸೈ ಆಗಿ ಸೇವೆ ಸಲ್ಲಿಸುತ್ತಿದ್ದರು. ಅವರು ಇನ್ನು ಎರಡು ವರ್ಷಗಳಲ್ಲಿ ನಿವೃತ್ತರಾಗಲಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...