ಭಟ್ಕಳ: ಪುರಸಭೆ ಅಂಗಡಿ ಮಳಿಗೆ ಹರಾಜಿನ ಸುತ್ತ ಅನುಮಾನದ ಹುತ್ತ: ಲಕ್ಷ ರೂ ದಾಟಿದ ಬಿಡ್

Source: S O News service | By Staff Correspondent | Published on 23rd August 2016, 4:31 PM | Coastal News | Don't Miss |


ಭಟ್ಕಳ: ಕಳೆದ ಎರಡು ಮೂರು ದಿನಗಳ ಹಿಂದೆ ಆರಂಭಗೊಂಡ ಇಲ್ಲಿನ ಪುರಸಭೆಯ ಅಂಗಡಿ ಮಳಿಗೆ ಹರಾಜು ಪ್ರಹಸನ ಇಂದು ಕೊನೆಗೊಂಡಿದ್ದು ೬೨೨ ರೂ ಗೆ ಆರಂಭಗೊಂಡ ಚಿಕ್ಕ ಮಳಿಗೆಯೊಂದು ಒಂದು ಲಕ್ಷ ಕ್ಕೂ ಅಧಿಕ ಮೌಲ್ಯಕ್ಕೆ (ಮಾಸಿಕ) ಹರಾಜಾಗಿದ್ದು ಈ ಹರಾಜು ಪ್ರಕ್ರಿಯೆಯ  ಕುರಿತಂತೆ ಜನರಲ್ಲಿ ಅನುಮಾನದ ಹುತ್ತ ಬೆಳೆಯುವಂತೆ ಮಾಡಿದೆ. 
ಮಾಸಿಕ ೭-೮ ನೂರು ಮಾಸಿಕ ಬಾಡಿಗೆಯ ಅಂಗಡಿಗಳಿಗೆ ೫೦ ರಿಂದ ೬೦ ಸಾವಿರ ವರೆಗೆ ಬೇಡಿಕೆ ಉಂಟಾಗಿದ್ದು ಇಲ್ಲಿನ ಬಾಡಿಗೆದಾರರು ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ಕಟ್ಟುತ್ತಾರೋ ಅಥವಾ ಇದರ ಹಿಂದೇ ಬೇರೆ ಏನಾದರೂ ಯೋಜನೆ ಅಡಗಿದಿಯೋ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡುತ್ತಿದ್ದು ಮಾಮೂಲಿ ಚಾಕಲೇಟ್, ಪಾನಬೀಡ ಮಾರಾಟವಾಗುವ ಅಂಗಡಿಗಳ ಮಾಲಿಕರು ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ದರ ಏರಿಸಿದ್ದರ ಹಿಂದಿರುವ ಉದ್ದೇಶಗಳೇನು ಎನ್ನುವುದು ಬಹಿರಂಗವಾಗಬೇಕಾಗಿದೆ. 
ಕಾಣದ ಕೈಗಳ ಕೈವಾಡ?: ಬಹಿರಂಗ ಹರಾಜಿನಲ್ಲಿ ಅಂಗಡಿಗಳಿಗೆ ಮಾಸಿಕ ದರವನ್ನು ಇಷ್ಟೊಂದು ಪ್ರಮಾಣದಲ್ಲಿ ಏರಿಕೆ ಮಾಡುವುದರ ಹಿಂದೆ ಕಾಣದ ಕೈಗಳ ಕೈವಾಡ ಇರುವುದಾಗಿ ಸ್ಪಷ್ಟವಾಗಿ ಗೋಚರಿಸುತ್ತಿದೆ. ಮೊದಲೆರಡು ಮಳಿಗೆಗಳು ಆರಂಭದ ಬೆಲೆ ಯಿಂದ ೧೩ಸಾವಿರಕ್ಕೂ ಕೊನೆಗೊಂಡಾಗ ಜನರು ಇಷ್ಟೊಂದು ದೊಡ್ಡ ಮೊತ್ತ ಎಂದು ಹುಬ್ಬೇರಿಸುವಂತಾಯಿತು. ಆದರೆ ಬೇರೆ ಬೇರೆ ಅಂಗಡಿಗಳ ಹಳೆಯ ಮಾಲಿಕರು ತಮ್ಮಲ್ಲಿಯೇ ಅಂಗಡಿಗಳನ್ನು ಉಳಿಸಿಕೊಳ್ಳಲು ೭೦ ರಿಂದ ೧ ಲಕ್ಷದವರೆಗೂ ಹೋಗಿದ್ದನ್ನು ಕಂಡರೆ ಇಲ್ಲಿ ಅಂಗಡಿಗಳ ಹರಾಜು ಆಗುತ್ತಿಲ್ಲ ಬದಲಿಗೆ ಅಂಗಡಿದಾರರು ತಮ್ಮ ತಮ್ಮ ಸಾಮರ್ಥ್ಯ ಪ್ರದರ್ಶನಕ್ಕಿಟ್ಟಿದ್ದಾರೆ ಎನ್ನುವಂತೆ ಭಾಸವಾಗುತ್ತಿದ್ದು ಹರಾಜಿನಲ್ಲಿ ಭಾಗವಹಿಸಿದೆ ಇದ್ದವರಿಗಂತೋ ಇದೊಂದು ಮನರಂಜನೆಯ ಕಾರ್ಯಕ್ರಮವಾಗಿ ಗೋಚರಿಸುತ್ತಿತ್ತು. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...