ಕಟ್ಟೇವೀರ ಸ್ಪೋಟ್ಸ ಕ್ಲಬ್‍ನ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಕ್ಕೆ ಅದ್ದೂರಿಯಾಗಿ ಚಾಲನೆ:ಸಿದ್ದಿ ಜನಾಂಗದವರಿಂದ ಜನಪದ ನೃತೃ ಹಾಗು ಸಿಡಿ ಮದ್ದು ಪ್ರದರ್ಶನ 

Source: S.O. News Service | By MV Bhatkal | Published on 20th January 2018, 10:29 AM | Coastal News | Don't Miss |

ಭಟ್ಕಳ: ಕ್ರೀಡಾಪಟುಗಳ ಸಾಧನೆಯ ಹಾದಿಯಲ್ಲಿ ಸಾಕಷ್ಟು ಅಡೆತಡೆಗಳು ಬರಲಿದ್ದು, ಅವೆಲ್ಲವನ್ನು ಮೆಟ್ಟಿ ನಿಂತು ಸಾಧನೆಗೈವುದು ಅತೀ ಮುಖ್ಯ ಎಂದು ಶಾಸಕ ಮಂಕಾಳ ವೈದ್ಯ ಹೇಳಿದರು.ಅವರು ಇಲ್ಲಿನ ಕಟ್ಟೆವೀರ ಸ್ಪೋಟ್ಸ ಕ್ಲಬ್ ಮುಠ್ಠಳ್ಳಿ, ರಂಜನ್ ಇಂಡೆನ್ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಇವರ ಸಹಯೋಗದೊಂದಿಗೆ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದಲ್ಲಿ ಪುರುಷರಿಗಾಗಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಸತತ 10 ವರ್ಷಗಳಿಂದ ಕ್ರೀಡೆಗೆ ಉತ್ತೇಜನ ನೀಡುತ್ತಾ ಯುವಕರಿಗೆ ಸ್ಪೂರ್ತಿದಾಯಕ ಕಾರ್ಯ ಮಾಡುತ್ತಿರುವುದು ಪ್ರಶಂಸನೀಯವಾದದ್ದು. ರಾಷ್ಟ್ರ ಮಟ್ಟದಲ್ಲಿ 6 ಕ್ರೀಡಾಪಟುಗಳನ್ನು ಆಯ್ಕೆಯಾಗುವಂತೆ ಮಾಡಿ ಅಲ್ಲಿ ತಮ್ಮ ಪ್ರತಿಭೆಯನ್ನು ಪ್ರದರ್ಶನ ಮಾಡುವಂತೆ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಿದ್ದಾರೆ. ಮುಂದಿನ ದಿನದಲ್ಲಿ ಕ್ರೀಡಾಪಟುಗಳಿಗೆ ಮೂಲಭೂತ ಸೌಲಭ್ಯ ಒದಗಿಸುವಲ್ಲಿ ನನ್ನ ಕಡೆಯಿಂದ ಎಲ್ಲಾ ಬೆಂಬಲ ಸಹಕಾರಿ ಸಿಗಲಿದೆ. ಎಂದು ಹೇಳಿದರು.

ಮುಖ್ಯ ಅತಿಥಿ ಹಾಗೂ ಕಬಡ್ಡಿ ಕ್ರೀಡಾಂಗಣದ ಉದ್ಘಾಟನೆ ಮಾಡಿದ ಬಿಗ್‍ಬಾಸ ಖ್ಯಾತಿಯ ಪ್ರಥಮ ಮಾತನಾಡಿದ್ದು ಕ್ರಿಕೆಟ್‍ಗೆ ಸಿಗುವಷ್ಟು ಮಹತ್ವ ದೇಶೀಯ ಕ್ರೀಡೆ ಕಬಡ್ಡಿಗೆ ಸಿಗಬೇಕು. ಮತ್ತು ಈ ಕುರಿತು ರಾಜ್ಯ ಸರಕಾರಕ್ಕೆ ಮನವಿಯನ್ನು ಮಾಡಲಿದ್ದೇನೆ. ನಾನು ಸಹ ಓರ್ವ ಕಬಡ್ಡಿ ಕ್ರೀಡಾಭಿಮಾನಿಯಾಗಿ ಬಂದಿದ್ದು, ಕಾರ್ಯಕ್ರಮ ಉತ್ತಮ ರೀತಿಯಲ್ಲಿ ಆಯೋಜನೆ ಮಾಡಿದ್ದು ಸಂತಸವಾಗಿದೆ ಎಂದು ಹೇಳಿದರು.       

ಇನ್ನೋರ್ವ ಮುಖ್ಯ ಅತಿಥಿಯಾಗಿ ಜಿಲ್ಲಾ ಅಮ್ಯೇಚೂರ್ ಕಬಡ್ಡಿ ಅಸೋಸಿಯೇಶನ ಅಧ್ಯಕ್ಷ ಹಾಗೂ ರಾಜ್ಯ ಉಪಾಧ್ಯಕ್ಷ ಸೂರಜ್ ನಾಯ್ಕ ಸೋನಿ ಮಾತನಾಡಿದ ಅವರು ಕಬಡ್ಡಿಗೆ ಭಟ್ಕಳದಲ್ಲಿ ಸಾಕಷ್ಟು ಪ್ರೋತ್ಸಾಹ ಸಿಗುತ್ತಲಿದ್ದು, ಯುವಕರಿಗೆ ಆಕರ್ಷಣಾ ಕ್ರೀಡೆಯಾಗಿ ಬೆಳೆಯುತ್ತಿದೆ. ಕಬಡ್ಡಿಗೆ ಇನ್ನಷ್ಟು ಉತ್ತೇಜನದ ಅವಶ್ಯಕತೆ ಇದ್ದು ಮುಂದಿನ ದಿನದಲ್ಲಿ ಕಟ್ಟೇವೀರ ಸ್ಪೋಟ್ಸ ಕ್ಲಬ್‍ನಿಂದ ಓರ್ವ ಆಟಗಾರ ಪ್ರೋ ಕಬಡ್ಡಿ ಆಟಗಾರ ಆಯ್ಕೆಯಾಗಿ ಜಿಲ್ಲೆಗೆ ತಾಲೂಕಿಗೆ ಒಳ್ಳೆಯ ಹೆಸರು ಸಿಗುವಂತೆ ಮಾಡಲಿ ಎಂದು ಹಾರೈಸಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾರ್ಯಕ್ರಮದ ಪ್ರಾಯೋಜಕತ್ವ ವಹಿಸಿಕೊಂಡ ಶಿವಾನಿ ಶಾಂತಾರಾಮ ತಾಲುಕಿನಲ್ಲಿ ಸಾಕಷ್ಟು ಪ್ರತಿಭಾನ್ವಿತ ಕ್ರೀಡಾಪಟುಗಳಿದ್ದು, ಅವರು ತೆರೆಮರೆಯಲ್ಲಿದ್ದಾರೆ. ಭಟ್ಕಳದ ಮಲ್ಲಿಗೆಯ ಕಂಪಿನಷ್ಟೇ ಕ್ರೀಡಾಭಿಮಾನಿಗಳು ಇದ್ದು, ಅವರ ಉತ್ಸಾಹ ಪ್ರೋತ್ಸಾಹದಿಂದ ನಮ್ಮಲ್ಲಿನ ಕ್ರೀಡಾಪಟುಗಳ ಬೆಳವಣಿಗೆ ಸಾಧ್ಯವಾಗುತ್ತಿದೆ. ಮುಂದಿನ ದಿನದಲ್ಲಿ ತಾಲೂಕಿನಲ್ಲಿ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಯೋಜನೆ ಮಾಡಬೇಕೆಂಬ ಆಸೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಶಾಸಕ ಮಂಕಾಳ ವೈದ್ಯ, ಬಿಗ್ ಬಾಸ್ ಖ್ಯಾತಿಯ ಪ್ರಥಮ, ಸೂರಜ್ ನಾಯ್ಕ ಸೋನಿ, ಜಿ.ಪಂ. ಅಧ್ಯಕ್ಷೆ ಜಯಶ್ರೀ ಮೋಗೇರ, ರಾಜ್ಯ ಅಮೇಚ್ಯುರ ಕಬಡ್ಡಿ ಅಸೋಶಿಯೇಶನ್ ನಿರ್ಣಾಯಕ ಮಂಡಳಿ ಅಧ್ಯಕ್ಷ ಎಂ.ಷಣ್ಮುಗಮ್, ಶಾಸಕ ಮಂಕಾಳ ವೈದ್ಯ,ಬಿಗ್ ಬಾಸ ಖ್ಯಾತಿಯ ಪ್ರಥಮ, ಜಿ.ಪಂ ಅಧ್ಯಕ್ಣೆ ಜಯಶ್ರೀ ಮೋಗೇರ

ಅವರಿಗೆ ಕಟ್ಟೆವೀರ ಸ್ಪೋಟ್ಸ ಕ್ಲಬ್ ಮುಠ್ಠಳ್ಳಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಪೂರ್ವದಲ್ಲಿ ಕಟ್ಟೆವೀರ ಸ್ಪೋಟ್ಸ ಕ್ಲಬ್ ಮುಠ್ಠಳ್ಳಿ ಸದಸ್ಯರು, ಪಂದ್ಯದ ಆಟಗಾರರು ಇಲ್ಲಿನ ಪ್ರವಾಸಿ ಮಂದಿರದಿಂದ ಸಂಶುದ್ಧೀನ್ ಸರ್ಕಲ ಮಾರ್ಗವಾಗಿ ಶ್ರೀ ಗುರು ಸುಧೀಂದ್ರ ಕಾಲೇಜು ಮೈದಾನದವರೆಗೆ ಮೆರವಣಿಗೆಯಲ್ಲಿ ಸಾಗಿ ವೇದಿಕೆಗೆ ಬಂದರು. ಮೆರವಣಿಗೆಯೂದಕ್ಕೂ ಯಲ್ಲಾಪುರದ ಸಿದ್ದಿ ಜನಾಂಗದವರಿಂದ ಜನಪದ ನೃತೃ ಹಾಗು ಸಿಡಿ ಮದ್ದು ಪ್ರದರ್ಶನ ಪ್ರಮುಖ ಆಕರ್ಷಣಿಯವಾಗಿತ್ತು. 

ಈ ಸಂಧರ್ಭದಲ್ಲಿ ಜಿ.ಪಂ.ಅಧ್ಯಕ್ಷೆ ಜಯಶ್ರೀ ಮೋಗೇರ, ತಾ.ಪಂ. ಅಧ್ಯಕ್ಷ ಈಶ್ವರ ನಾಯ್ಕ, ಜಾಲಿ ಪ.ಪಂ. ಅಧ್ಯಕ್ಷ ಅಬ್ದುಲ್ ರಹೀಂ, ಜಿ.ಪಂ. ಸದಸ್ಯ ಅಲ್ಬರ್ಟ ಡಿಕೋಸ್ತಾ, ಕಟ್ಟೆವೀರ ಸ್ಪೋಟ್ಸ ಕ್ಲಬ್  ಗೌರವಾಧ್ಯಕ್ಷ ರಾಮಕೃಷ್ಣ ನಾಯ್ಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಠ್ಠಲ ನಾಯ್ಕ, ನಾಮಧಾರಿ ಸಮಾಜದ ಅಧ್ಯಕ್ಷ ಎಂ.ಆರ್.ನಾಯ್ಕ, ಗ್ರಾ.ಪಂ. ಮುಠ್ಠಳ್ಳಿ ಉಪಾಧ್ಯಕ್ಷ ಗಣಪತಿ ನಾಯ್ಕ, ಪಂ.ಸದಸ್ಯೆ ಮೀನಾಕ್ಷಿ ಜಟ್ಟಪ್ಪ ನಾಯ್ಕ ಮುಂತಾದ ಗಣ್ಯರು ಉಪಸ್ಥಿತರಿದ್ದರು. ಕಟ್ಟೆವೀರ ಸ್ಪೋಟ್ಸ ಕ್ಲಬ್ ಮುಠ್ಠಳ್ಳಿ ಅಧ್ಯಕ್ಷ ಶ್ರೀಧರ ನಾಯ್ಕ ಪ್ರಾಸ್ತಾವಿಕವಾಗಿ ಮಾತನಾಡಿದ್ದರು. ಸ್ಪೋಟ್ಸ ಕ್ಲಬ್‍ನ ಸದಸ್ಯ ಕೃಷ್ಣ ಮೂರ್ತಿ ಶೆಟ್ಟಿ ವರದಿ ವಾಚಿಸಿದರು. ಕಾರ್ಯಕ್ರಮದ ಸ್ವಾಗತ ಗಂಗಾಧರ ನಾಯ್ಕ, ನಿರೂಪಣೆ ಮತ್ತು ವಂದನಾರ್ಪಣೆ ಶ್ರೀಧರ ಶೇಟ್ ನಿರ್ವಹಿಸಿದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...