ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳ ಬಂಧನ, ಬಂಧಿತರಿಂಧ ಒಟ್ಟು 196 ಗ್ರಾಂ ತೂಕದ ಚಿನ್ನಾಭರಣ ವಶ

Source: so news | By MV Bhatkal | Published on 13th March 2019, 12:36 AM | Coastal News | Don't Miss |

ಹಾಸನ:ಗಂಡಸಿಯ ಶ್ರೀರಾಮಪುರ ಗೇಟ್‍ನಲ್ಲಿ ವಾಸವಿರುವ ಪಿರ್ಯಾದಿಯವರು 2018 ನೇ ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ವಾಸವಿರುವ ತಮ್ಮ ಮಗನ ಮನೆಗೆಂದು ತೆರಳಿದ್ದಾರೆ ದುಷ್ಕರ್ಮಿಗಳು ಮನೆಯ ಬೀಗ ಹೊಡೆದು ಒಟ್ಟು 32 ಗ್ರಾಂ ತೂಕದ ಚಿನ್ನಾಭರಣ ಹಾಗೂ 66,000 ರೂಪಾಯಿಗಳನ್ನು ದೋಚಿಕೊಂಡು ಪರಾರಿಯಾಗಿರುತ್ತಾರೆ. ಆ ನಂತರ ಗಂಡಸಿ ಪೊಲೀಸ್ ಠಾಣೆಯಲ್ಲಿ ಮೊ.ನಂ 238/2018 ಕಲಂ 454.457.380 ಐಪಿಸಿ ರೀತ್ಯಾ ಮನೆಕಳ್ಳತನ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಅರಸೀಕೆರೆ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಸದಾನಂದ ಅ ತಿಪ್ಪಣ್ಣನವರ ಮಾರ್ಗದರ್ಶನದಲ್ಲಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ ಎಸ್. ಅವರ ನೇತೃತ್ವದಲ್ಲಿ ಗಂಡಸಿ ಪೊಲೀಸ್ ಠಾಣೆಯ ಪಿಎಸ್.ಐ ಶಬ್ಬೀರ್ ಹುಸೇನ್ ಅವರು ಹಾಗೂ ಸಿಬ್ಬಂಧಿಗಳ ತಂಡವು ಆರೋಪಿಗಳಾದ ಕಾಂತರಾಜು(42), ಶ್ರೀಕಾಂತ(27) ಇವರನ್ನು ಮಾ.9 ರಂದು ದಸ್ತಗಿರಿ ಮಾಡಿದ್ದು ಆರೋಪಿಗಳಿಂದ ಸುಮಾರು 196 ಗ್ರಾಂ ತೂಕದ ಚಿನ್ನಾಭರಣಗಳನ್ನು ಅಮಾನತ್ತು ಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. 
ಅರಸೀಕೆರೆ ಗ್ರಾಮಾಂತರ ವೃತ್ತದ ವೃತ್ತ ನಿರೀಕ್ಷಕರಾದ ಸಿದ್ದರಾಮೇಶ್ವರ ಎಸ್ ಗಂಡಸಿ ಠಾಣೆಯ ಪಿಎಸ್.ಐ ಶಬ್ಬೀರ್ ಹುಸೇನ್, ಎಎಸ್‍ಐ ಲಕ್ಷ್ಮಣ ಸಿಬ್ಬಂದಿಗಳಾದ ನಂಜುಂಡೇಗೌಡ, ಶಿವಶಂಕರ, ನಾಗರಾಜು, ಲೋಕೇಶ, ರವಿ, ಶೇಖರ್‍ಗೌಡ ಶಿರಿಗೇರಿ, ಪಕೃದೀನ್, ಶಂಕರೇಗೌಡ, ನಾಗೇಂದ್ರ, ವರುಣ್‍ಕುಮಾರ್, ಪ್ರದೀಪ, ವಾಹನ ಚಾಲಕರಾದ ವಸಂತಕುಮಾರ, ಗೋಪಿ ಇವರುಗಳನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಡಾ. ಎ.ಎನ್ ಪ್ರಕಾಶ್‍ಗೌಡ ಅವರು ಶ್ಲಾಘಿಸಿರುತ್ತಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...