ಗೇರುಸೊಪ್ಪ ಆಣೆಕಟ್ಟಿನ ಒಳ ಹರಿವು ತೀವ್ರ ಏರಿಕೆ; 70000 ಕ್ಯೂಸೆಕ್ಸ ನೀರನ್ನು ಆಣೆಕಟ್ಟಿನಿಂದ ಬಿಡುಗಡೆ

Source: sonews | By sub editor | Published on 18th August 2018, 11:09 PM | Coastal News | Don't Miss |

ಭಟ್ಕಳ: ಗೇರುಸೊಪ್ಪ ಆಣೆಕಟ್ಟಿನ ಒಳ ಹರಿವು ತೀವ್ರ ಏರಿಕೆಯಾಗಿರುತ್ತದೆ. ಅಣೆಕಟ್ಟಿನ ಸುರಕ್ಷತೆಯ ದೃಷ್ಠಿಯಿಂದ ದಿನಾಂಕ:17-8-2018 ರಂದು   70000   ಕ್ಯೂಸೆಕ್ಸ ನೀರನ್ನು ಆಣೆಕಟ್ಟಿನಿಂದ ಬಿಡುಗಡೆ ಮಾಡಲಾಗಿದ್ದು, ತಾಲೂಕಿನ ನಗರಬಸ್ತಿಕೇರಿ, ಹೆರಂಗಡಿ, ಜಲವಳ್ಳಿ, ಜಲವಳಕರ್ಕಿ, ಪಡುಕುಳಿ, ಮಾವಿನಕುರ್ವಾ, ಖರ್ವಾ ಹಾಗೂ ಹೊಸಾಡ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿರುತ್ತದೆ ಎಂದು ಭಟ್ಕಳ ಸಹಾಯಕ ಆಯುಕ್ತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸದರ ಗ್ರಾಮಗಳಲ್ಲಿ ಈಗಾಗಲೇ ಗುರುತಿಸಲಾಗಿದ್ದ ಕಟ್ಟಡಗಳಲ್ಲಿ ಸಂತ್ರಸ್ಥರಿಗೆ ಗಂಜಿ ಕೇಂದ್ರ ತೆರೆಯಲು ಸಿದ್ದತೆಗಳನ್ನು ಮಾಡಿಕೊಳ್ಳಲಾಗಿತ್ತು. ಈ ಪೈಕಿ ನಗರಬಸ್ತಿಕೇರಿ , ಹೊಸಾಡ ಹಾಗೂ ಕೆಳಗಿನ  ಇಡಗುಂಜಿ ಗ್ರಾಮದಲ್ಲಿ ಗಂಜಿ ಕೇಂದ್ರ ತೆರೆದಿದ್ದು ಇರುತ್ತದೆ. ಮುಂಜಾಗೃತಾ ಕ್ರಮವಾಗಿ ಕೆಳಗಿನ ಇಡಗುಂಜಿ ಗ್ರಾಮದ ಬಸವನಹಿತ್ಲು ಮಜಿರೆಯ 28 ಕುಟುಂಬಗಳನ್ನು ಸದರ ಪ್ರದೇಶದಿಂದ ಸ್ಥಳಾಂತರಿಸಲಾಗಿದ್ದು, ಈ ಪೈಕಿ 4 ಕುಟುಂಬಗಳ 16 ಜನ ಸದಸ್ಯರು ಹಿರಿಯ ಪ್ರಾಥಮಿಕ ಶಾಲೆ, ಮೇಲಿನ ಇಡಗುಂಜಿಯಲ್ಲಿ ತೆರೆಯಲಾಗಿರುವ ಗಂಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿರುತ್ತಾರೆ. ಉಳಿದ ಕುಟುಂಬಗಳು ತಮ್ಮ ಸಂಬಂದಿಕರ ಮನೆಗಳಿಗೆ ತೆರಳಿರುತ್ತಾರೆ. ನಗರಬಸ್ತಿಕೇರಿ ಗ್ರಾಮದ ಹುಂಜನಮಕ್ಕಿ ಮಜಿರೆಯ 3 ಕುಟುಂಬಗಳ 13 ಜನರನ್ನು ಅದೇ ಮಜಿರೆಯ ಖಾಸಗಿ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದ್ದು ಇರುತ್ತದೆ.

ಶರಾವತಿ ನದಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗದೇ ಇರುವದರಿಂದ ಹಾಗೂ ಈಗಾಗಲೇ ಕೈಗೊಳ್ಳಲಾಗಿದ್ದ ಮುಂಜಾಗೃತಾ ಕ್ರಮಗಳಿಂದಾಗಿ ಯಾವುದೇ ಅನಾಹುತ ಸಂಬವಿಸಿದ್ದು ಇರುವದಿಲ್ಲ. ಕುಂಟೋಡಿ ಗ್ರಾಮದಲ್ಲಿ ತೂಗು ಸೇತುವೆ, ಸಂಶಿ-ದಾಸನಗೋಡು ಸೇತುವೆ, ಹೆರಂಗಡಿ ಗ್ರಾಮದ ಗಾಬಿತಕೇರಿ ಪೂಟ್ ಬಿಡ್ಜ್ ಹಾಗೂ ಹಲವು ರಸ್ತೆಗಳಿಗೆ ಹಾನಿ ಸಂಬವಿಸಿದ್ದು ಇರುತ್ತದೆ.  ಪ್ರವಾಹದಿಂದಾಗಿ 65 ಮನೆಗಳಿಗೆ ನೀರು ನುಗ್ಗಿದ್ದು, ಪ್ರವಾಹದ ನೀರು ಸಂಪೂರ್ಣ ಇಳಿಕೆಯಾಗಿದ್ದು, ಕೃಷಿ ಹಾಗೂ ತೋಟಗಾರಿಕಾ ಬೆಳೆ ಹಾನಿಯ ಬಗ್ಗೆ ಸಮೀಕ್ಷೆ ನಡೆಸಿ, ್ಲ ಪರಿಹಾರ ಮಂಜೂರಿಗೆ ಕ್ರಮ ಕೈಗೊಳ್ಳಲಾಗುವದು. 

ಸಹಾಯಕ ಆಯುಕ್ತರು
ಭಟ್ಕಳ

Read These Next

ಪಟ್ಟಣದವಾಸಿಗಳೆ ಎಚ್ಚರ  ಬೀದಿಯಲ್ಲಿ ಬೌ ಬೌ ಸದ್ದು ಎಚ್ಚರ ತಪ್ಪಿದರೂ ನಾಯಿ ಕಡಿತ. ಕೈಕಟ್ಟಿ ಕುಳಿತಿರುವ ಪುರಸಭೆ ಅಧಿಕಾರಿಗಳು

ಶ್ರೀನಿವಾಸಪುರ: ಪಟ್ಟಣದವಾಸಿಗಳೆ ಎಚ್ಚರ  ಪಟ್ಟಣದ ಹಾದಿ ಬೀದಿಯಲ್ಲಿ ಈಗ ಬೌ ಬೌ ಸದ್ದು. ಸ್ವಲ್ಪ ಎಚ್ಚರ ತಪ್ಪಿದರೂ ನಾಯಿ ಕಡಿತ ...

ಗೊಂದಲ ನಿವಾರಿಸಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಹಿಜುವನಹಳ್ಳಿ ಗ್ರಾಮಸ್ಥರ ಮನವಿ

ಹಿಜುವನಹಳ್ಳಿ ಗ್ರಾಮದಲ್ಲಿ ಸುಮಾರು 130 ಮನೆಗಳು ಇದ್ದು, 600ಕ್ಕೂ ಹೆಚ್ಚು ಜನ ವಾಸಿಸುತ್ತಿದ್ದಾರೆ, ನೂರಾರು ವರ್ಷಗಳಿಂದ ಯಾರ ನಡುವೆಯೂ ...