ಭಟ್ಕಳ; ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿತ

Source: S O News service | By Staff Correspondent | Published on 10th September 2018, 6:46 PM | Coastal News | Don't Miss |

ಭಟ್ಕಳ: ಮೂವರು ಮಹಿಳೆಯರು ಸೇರಿದಂತೆ ನಾಲ್ವರಿಗೆ ಹುಚ್ಚು ನಾಯಿ ಕಡಿದು ಆಸ್ಪತ್ರೆ ದಾಖಲಾದ ಘಟನೆ ಸೋಮವಾರ ತಾಲೂಕಿನ ಮುಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಮೂಡಭಟ್ಕಳದಲ್ಲಿ ಜರಗಿದೆ. 

ಹುಚ್ಚು ನಾಯಿ ಕಡಿತಕ್ಕೊಳಗಾದವರನ್ನು  ಮೂಡಭಟ್ಕಳದ ಸಾವಿತ್ರಿ ಕೃಷ್ಣ ನಾಯ್ಕ (40), ಲಕ್ಷ್ಮಣ ವೆಂಕಟಪ್ಪ ನಾಯ್ಕ (38), ಮುಟ್ಟಳ್ಳಿ ಗ್ರಾಮದ ಮೀನಾಕ್ಷಿ ನಾರಾಯಣ ನಾಯ್ಕ(28) ಹಾಗೂ ರಜನಿ ವೆಂಕಟರಮಣ ನಾಯ್ಕ(28) ಎಂದು ಗುರುತಿಸಲಾಗಿದೆ. 

ಹುಚ್ಚು ನಾಯಿಕಡಿತಕ್ಕೊಳಗಾದವರನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು ಅಲ್ಲಿ ಹುಚ್ಚು ನಾಯಿ ಕಡಿತಕ್ಕೆ ಬೇಕಾದ ಚುಚ್ಚು ಮದ್ದು ಲಭ್ಯವಿಲ್ಲದ ಕಾರಣ ಹೊರಗಡೆಯಿಂದ ದುಬಾರಿ ದರದಲ್ಲಿ ಚುಚ್ಚುಮದ್ದನ್ನು ತಂದು ಚಿಕಿತ್ಸೆ ಮಾಡಲಾಯಿತು. 

ಭಟ್ಕಳದ ತಾಲೂಕು ಆಸ್ಪತ್ರೆಯಲ್ಲಿ ಹುಚ್ಚು ನಾಯಿ ಕಡಿತಕ್ಕೆ ಚುಚ್ಚುಮದ್ದು ಲಭ್ಯ ಇಲ್ಲದ್ದನ್ನು ಪ್ರಶ್ನಿಸಿ ಕಡಿತಕ್ಕೊಳಗಾದ ಕುಟುಂಬದ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದು ಸರ್ಕಾರದಿಂದ ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ಚುಚ್ಚು ಮದ್ದು ಪೂರೈಕೆಯಾಗಲಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ. ಹೊರಗಡೆ ಖಾಸಗಿ ಮೆಡಿಕಲ್ ನಲ್ಲಿ ಚುಚ್ಚು ಮದ್ದು ಲಭ್ಯವಿದ್ದರೂ ಅದು ದುಬಾರಿಯಾಗಿದ್ದು ಬಡಜನರ ಕೈಗೆ ಎಟುಕದ್ದು ಸರ್ಕಾರ ಆಸ್ಪತ್ರೆಗೆ ಚುಚ್ಚು ಮದ್ದು ಪೂರೈಕೆ ಮಾಡಬೇಕು ಎಂಬುದು ಸಾರ್ವಜನಿಕರ ಬೇಡಿಕೆಯಾಗಿದೆ. 

Read These Next

ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ಹೂಡುವಂತೆ ರೈತಸಂಘದಿಂದ ಮೌನ ಹೋರಾಟ

ಕೋಲಾರ: ರೈತರ ಮರಣ ಶಾಸನ ಬರೆಯುತ್ತಿರುವ ನಕಲಿ ಬಿತ್ತನೆ ಬೀಜ ಹಾಗೂ ಕೀಟ ನಾಶಕ ಕಂಪನಿಗಳ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ...

ಗೌನಿಪಲ್ಲಿ ಗ್ರಾಮ ಪಂಚಾಯಿತಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ,ಉಪಾಧ್ಯರಾಗಿ ಮಂಜುನಾಥ ಆರಾಧ್ಯ

ಶ್ರೀನಿವಾಸಪುರ: ತಾಲ್ಲೂಕಿನ ಗೌನಿಪಲ್ಲಿ ಗ್ರಾಮ ಪಂಚಾಯಿತಿಗೆ ಗುರುವಾರ ನಡೆದ ಚುನಾವಣೆಯಲ್ಲಿ ಅಧ್ಯರಾಗಿ ಕಾಂಗ್ರೆಸ್‌ನ ಶಂಕರಮ್ಮ ...