ಶ್ರೀನಿವಾಸಪುರ: ಶುದ್ಧ ನೀರಿನ ಘಟಕದ ಪ್ರಾರಂಭೋತ್ಸವ

Source: shabbir | By Arshad Koppa | Published on 24th March 2017, 7:47 PM | State News |

ಶ್ರೀನಿವಾಸಪುರ: ನೀರಿನಲ್ಲಿ ಹೆಚ್ಚಿನ ಪ್ಲೋರೈಡ್ ಅಂಶವು ಇದ್ದು ಮನುಷ್ಯನ ದೇಹದಲ್ಲಿ ಹಲವಾರು ಬದಲಾವಣೆಗಳನ್ನು ತಂದು ರೋಗ ಪೀಡಿತನನ್ನಾಗಿ ಮಾಡುತ್ತಿದೆ. ಆದ್ದರಿಂದ ಹೆಚ್ಚು ಪ್ಲೋರೈಡ್ ಅಂಶ ಪತ್ತೆಯಾಗಿರುವ ಸ್ಥಳಗಳಲ್ಲಿ ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆಯೆಂದು ಪುರಸಭೆ ಅಧ್ಯಕ್ಷೆ ಅರುಣಾ ಜಗದೀಶ್ ಪಟ್ಟಣದ ಕೊಳ್ಳೂರು ಹೊಸ ಬಡಾವಣೆಯಲ್ಲಿ ನೂತನವಾಗಿ ಪ್ರಾರಂಭಿಸಿದ ಶುದ್ಧ ನೀರು ಘಟಕವನ್ನು ಉದ್ಘಾಟಿಸಿ ಮಾತನಾಡಿದರು.


ಈ ಸಂಧರ್ಭದಲ್ಲಿ ಪಿಎಲ್‍ಡಿ ಬ್ಯಾಂಕ್ ಅಧ್ಯಕ್ಷ ದಿಂಬಾಲ್ ಅಶೋಕ್ ಮಾತನಾಡಿ ಮನುಷ್ಯ ಆರೋಗ್ಯವಾಗಿ ಬದುಕಲು ಆಹಾರ, ಗಾಳಿ, ನೀರು ಎಷ್ಟು ಮುಖ್ಯವೆಂದು ಎಲ್ಲರಿಗೂ ತಿಳಿದ ವಿಷಯವೇ ಆಗಿದೆ. ಆದರೆ ಆ ಕುಡಿಯವ ನೀರು ಕಲ್ಮಷಪೂರಿತ ಮತ್ತು ವಿಷಕಾರಿಯಾಗಿದ್ದರೆ ನಮ್ಮಲ್ಲಿನ ರೋಗ ನಿರೋಧಕ ಶಕ್ತಿ ನಶಿಸಿ ರೋಗ ರುಜಿನಗಳಿಂದ ಕೂಡಿದ ದೇಹದೊಂದಿಗೆ ಕೃಷವಾಗುವಂತಹ ಸ್ಥಿತಿಯನ್ನು ಕ್ಷೇತ್ರದ ಜನ ಅನುಭವಿಸಬಾರದೆಂದು ತಾಲ್ಲೂಕಿನಾಧ್ಯಂತ ಶುದ್ಧ ನೀರು ಘಟಕಗಳನ್ನು ಸ್ಥಾಪಿಸಲಾಗುತ್ತಿದೆಯೆಂದು ಸಚಿವ ಕೆ.ಆರ್.ರಮೇಶ್‍ಕುಮಾರ್ ಹೇಳಿದ್ದರು ಅದರಂತೆಯೇ ತಾಲ್ಲೂಕಿನಾಧ್ಯಂತ ಅದರಂತೆಯೇ ಘಟಕಗಳನ್ನು ಸ್ಥಾಪಿಸಿ ಲೋಕಾರ್ಪಣೆ ಮಾಡಲಾಗಿದೆಯೆಂದು ಹೇಳಿದರು.

ಈ ಸಂಧರ್ಭದಲ್ಲಿ ಪುರಸಭೆ ಮುಖ್ಯಾಧಿಕಾರಿ ವಿ.ಶ್ರೀಧರ್, ವ್ಯವಸ್ಥಾಪಕ ಸತ್ಯನಾರಾಯಣ, ಪುರಸಭೆ ಸದಸ್ಯರಾದ ಬಿ.ಎಂ.ಪ್ರಕಾಶ್, ಮುನಿರಾಜು, ಅಬ್ದುಲ್ ಸತ್ತಾರ್, ನಾಮನಿರ್ಧೇಶಿತ ಸದಸ್ಯರುಗಳಾದ ಜಯಣ್ಣ, ಡಾ||ವೆಂಕಟೇಶ್, ಮುಖಂಡರುಗಳಾದ ಕೆ.ಕೆ.ಮಂಜು, ಜಗದೀಶ್, ಯಮ್ಮನೂರು ನಾಗರಾಜ್ ಮತ್ತು ಗ್ರಾಮಸ್ಥರಾದ ಕೆ.ಎನ್.ಸತ್ಯನಾರಾಯಣರೆಡ್ಡಿ, ಕೆ.ಎನ್.ವೆಂಕಟೇಶ್, ಮೇಸ್ತ್ರೀ ವೆಂಕಟೇಶ್, ರಾಮಕೃಷ್ಣಪ್ಪ, ಶಿವ, ಸೋಮು, ರಾಮಣ್ಣ ಮುಂತಾದವರು ಭಾಗವಹಿಸಿದ್ದರು.
 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...