ಶ್ರೀನಿವಾಸಪುರ: ತಾಲೂಕು ಬಿಜೆಪಿ ಯುವ ಮೋರ್ಚಾ ವತಿಯಿಂದ ರಕ್ತದಾನ ಹಾಗೂ ಸಸಿವಿತರಣಾ ಸಮಾರಂಭ

Source: shabbir | By Arshad Koppa | Published on 22nd September 2017, 3:11 PM | State News |

ಶ್ರೀನಿವಾಸಪುರ, ಸೆ-21: ರಾಜ್ಯ ರಾಜಕಾರಣದಲ್ಲಿ ಯುವಕರಿಗೆ ಆಧ್ಯತೆ ನೀಡಲಾಗುತ್ತಿದ್ದು ಉದಯೋನ್ಮುಖ ಯುವಕರು ಶಾಸಕರಾದಾಗ ರಾಜ್ಯದ ಅಭಿವೃದ್ಧಿಯಾಗುವುದರಲ್ಲಿ ಸಂಶಯವಿಲ್ಲ ಎಂದು ರಾಜ್ಯ ಬಿಜೆಪಿ ಪ್ರಧಾನಕಾರ್ಯದರ್ಶಿ ಹಾಗೂ ಮಹದೇವಪುರ ಶಾಸಕ ಅರವಿಂದ ಲಿಂಬಾವಳಿ ತಿಳಿಸಿದರು.


  ಪಟ್ಟಣದ ರಾಜಧಾನಿ ಮ್ಯಾಂಗೋ ಮಂಡಿಯಲ್ಲಿ ತಾಲೂಕು ಬಿಜೆಪಿ ಯುವ ಮೋರ್ಚಾವತಿಯಿಂದ ಏರ್ಪಡಿಸಲಾಗಿದ್ದ ಬಿಜೆಪಿ ಕೋಲಾರ ಜಿಲ್ಲಾಕಾರ್ಯದರ್ಶಿ ಎಸ್.ಎಲ್.ಎನ್.ಮಂಜುನಾಥ್ ರವರ ಹುಟುಹಬ್ಬದ ಅಂಗವಾಗಿ ಸತ್ಯಮ್ಮದೇವಿ ಪೂಜಾ ಮಹೋತ್ಸವ ಹಾಗೂ ರಕ್ತದಾನ ಶೀಭಿರ, ಸಸಿವಿತರಣಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಇವರು ಸಹಸ್ರಾರು ಸಂಖ್ಯೆಯಲ್ಲಿ ಯುವಕರು ಭಾಗವಹಿಸಿರುವುದನ್ನು ಕಂಡರೆ ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರದಲ್ಲಿ ಮುಂದಿನ ವಿಧನಸಭಾ ಚುನಾವಣೆಯಲ್ಲಿ ಕಮಲ ಅರಳುವುದು ನಿಶ್ಚಿತವಾದಂತೆ ತೋರುತ್ತದೆ. ಯುಕರು ಧೃಢ ಸಂಕಲ್ಪ ಮಾಡಿದರೆ ಅಸಾಧ್ಯವಾದುದು ಯಾವುದೂ ಇಲ್ಲ. ಮತ್ತೊಬ್ಬರ ಪ್ರಾಣ ರಕ್ಷಿಸಲು ಬೇಕಾದ ರಕ್ತವನ್ನು ದಾನ ಮಾಡುವುದರಿಂದ ಮನುಷ್ಯನ ಸಾರ್ಥಕ ಬದುಕಿಗೆ ಆಸರೆ ನೀಡಿದಂತಾಗುತ್ತದೆ ಎಂದರು.
   ಚಿಕ್ಕಬಳ್ಳಾಪುರ ವಾಲ್ಮೀಕಿ ಶಾಖಾ ಮಠದ ಶ್ರೀ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿ ಅನ್ನದಾನ ಶ್ರೇಷ್ಠದಾನ ಅದರಲ್ಲಿಯೂ ರಕ್ತದಾನ ಅತ್ಯಂತ ಶ್ರೇಷ್ಠ ದಾನವಾಗಿದ್ದು ಇಂತಹ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಿದ ಎಸ್.ಎಲ್.ಎನ್. ಕುಟುಂಬದವರಿಗೆ ಹಾಗೂ ತಾಲೂಕು ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರಿಗೆ ಅಭಿನಂದನೆಗಳನ್ನು ತಿಳಿಸಿದರು. ಎಸ್.ಎಲ್.ಎನ್. ಮಂಜುನಾಥ್ ರವರು ತಾಲೂಕಿನ ಜನತೆಯ ಮನೆ ಮಾತಾಗಿದ್ದಾರೆ. ಅವರ ಸಾಮಾಜಿಕ ಸೇವೆಯನ್ನು ಗುರ್ತಿಸಿರುವ ಮತದಾರರು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿರುವ ಎಸ್.ಎಲ್.ಎನ್.ಮಂಜುನಾಥ್‍ರನ್ನು ಶಾಸಕರನ್ನಾಗಿ ಮಾಡುವ ಉತ್ಸುಕದಲ್ಲಿದ್ದಾರೆ ಎಂದು ನುಡಿದರು.
   ರಾಜ್ಯದ ಬೆಂಗಳೂರು ಸೆಂಟ್ರಲ್‍ನ ಸಂಸದ ಪಿ.ಸಿ.ಮೋಹನ್ ಮಂಜುನಾಥ್‍ರವರನ್ನು ಅಭಿನಂದಿಸಿ ಮಾತನಾಡಿದ ಇವರು ಜನಪ್ರ್ರಿಯತೆ ಇಲ್ಲದಿದ್ದರೆ ಸಹಸ್ರಾರು ಸಂಖ್ಯೆಯ ಜನರನ್ನು ಒಂದೆಡೆಗೆ ಸೇರಿಸುವ ಇಂತಹ ಮಹಾನ್ ಕಾರ್ಯ ಸಾಧ್ಯವಿಲ್ಲ. ಕ್ಷೇತ್ರದಾಧ್ಯಂತ ಪ್ರವಾಸ ಮಾಡಿ ಜನರ ವಿಶ್ವಾಸವನ್ನು ಕೆಲವೇ ದಿನಗಳಲ್ಲಿ ಗಳಿಸಿರುವ ಇವರ ಕಾರ್ಯ ಕ್ಷಮತೆಯನ್ನು ಮೆಚ್ಚಲೇ ಬೇಕಾಗುತ್ತದೆ. ಕ್ಷೇತ್ರದ ಜನತೆ ಆಶೀರ್ವದಿಸಿ ಚುನಾಯಿತರನ್ನಾಗಿ ಮಾಡಿದರೆ ಈ ಕ್ಷೇತ್ರವನ್ನು ಅಭಿವೃದ್ಧಿಪಡಿಸಲು ಹಾಗೂ ಜನತೆಯ ಸೇವೆಯನ್ನು ಮಾಡಲು ಅವಕಾಶನೀಡಿದಂತೆ ಎಂದು ಹೇಳಿದರು.
  ವಿಧಾನಪರಿಷತ್ತಿನ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಕಾರ್ಯಕರ್ತರು ಚುನಾವಣೆಗೆ ಉತ್ಸುಕರಾಗಿದ್ದಾರೆ. ಅನೇಕ ಭಾಗಗಳಲ್ಲಿ ಈ ಭಾರಿ ಹೊಸ ಮುಖಗಳು ಬಿಜೆಪಿಯಿಂದ ಚುನಾವಣೆಯಲ್ಲಿ ಗೆದ್ದು ಶಾಸನ ಸಭೆಗೆ ಪ್ರವೇಶ ಮಾಡಲಿದ್ದಾರೆ ಎಂದು ಭವಿಷ್ಯ ನುಡಿದರು.


ಭೂರೀ ಭೋಜನದ ವ್ಯವಸ್ಥೆ: 50ಸಾವಿರ ಜನರಿಗೆ ಉಣಬಡಿಸಲು ಸುಮಾರು ಒಂದು ಸಾವಿರ ಅಡುಗೆ ಮತ್ತು ಸಹಾಯಕರು ಆಗಮಿಸಿದ್ದರು. ಶ್ರೀನಿವಾಸಪುರ ಕ್ಷೇತ್ರದಲ್ಲಿಯೇ ಎಂದೂ ಯಾರೂ ಮಾಡಿರದಂತಹ ಅದ್ದೂರಿ ಭೋಜನದ ವ್ಯವಸ್ಥೆಯನ್ನು ಮಾಡಿದ್ದರು. ಒಂದು ಬಾರಿಗೆ ಸುಮಾರು 3ಸಾವಿರ ಜನರು ಒಮ್ಮೆ ಕುಳಿತು ಊಟ ಮಾಡಬಹುದಾದಂತೆ ಟೇಬಲ್, ಚೇರ್‍ಗಳನ್ನು ವ್ಯವರ್ಸತೆ ಮಾಡಿದ್ದರು. ಲಾರಿಗಟ್ಟಲೆ ಬಂದ ಅಡುಗೆ ಸಾಮಾನುಗಳು ಎಂಥವರನ್ನೂ ನಿಬ್ಬೆರಗಾಗಿಸುವಂತೆ ಕಾಣ ಸುತ್ತಿದೆ ಎಂದು ಅಲ್ಲಿ ನೆರೆದಿದ್ದವರು ಹೇಳುತ್ತಿದ್ದರು. ಮಾಂಸಹಾರಿಗಳಿಗೆ ವಿವಿಧ ತರಹೇವಾರಿ ಬಾಡೂಟ ಹಾಗೂ ಸಸ್ಯಾಹಾರಿಗಳಿಗೆ ಹೋಳಿಗೆ, ಪಾಯಸ ಸೇರಿದಂತೆ ವಿವಿಧ ಭಕ್ಷ್ಯ ಬೋಜನಗಳನ್ನು ಸಿದ್ದಪಡಿಸಿದ್ದರು. ಪಟ್ಟಣದಲ್ಲಿ ಎಲ್ಲಿ ನೋಡಿದರು ಕಾರ್ಯಕ್ರಮದ ಕಟೌಟ್‍ಗಳು ರಾರಾಜಿಸುತ್ತಿದ್ದವು. ಪಟ್ಟಣದಲ್ಲಿ ಜನಸ್ತೋಮ ರಾಜಧಾನಿ ಮ್ಯಾಂಗೋ ಮಂಡಿಯೆಡೆಗೆ ಜಾತ್ರೋಪಾದಿಯಲ್ಲಿ ಹರಿದುಬರುತ್ತಿರುವುದು ಕಂಡು ಬಂದಿತು. ಈಲ್ಲಾ ಬಿಜೆಪಿ ಅಧ್ಯಕ್ಷ ಬಿ.ಪಿ.ವೆಂಕಟಮುನಿಯಪ್ಪ, ಪ್ರಧಾನ ಕಾರ್ಯದರ್ಶಿಗಳಾದ ವೆಂಕಟರೆಡ್ಡಿ, ರಾಮಚಂದ್ರಗೌಡ, ತಾಲೂಕು ಬಿಜೆಪಿ ಅಧ್ಯಕ್ಷ ವೆಂಕಟೇಗೌಡ ಸೆರಿದಂತೆ ಬಿಜೆಪಿ ಪದಾದಿಕಾರಿಗಳು ಭಾಗವಹಿಸಿದ್ದರು.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...