ಬೆಂಗಳೂರು:ಸೊಸೆ ಮೇಲೆ ಕಣ್ಣು ಹಾಕಿದ ಕಾಮುಕ ಮಾವ ಅಂದರ್‌

Source: s o news | By Manju Naik | Published on 7th July 2018, 11:51 AM | State News |

ಬೆಂಗಳೂರು: ಮಗಳ ವಯಸ್ಸಿನ ಸೊಸೆಗೆ ಲೈಂಗಿಕ ಕಿರುಕುಳ ಕೊಟ್ಟ ಆರೋಪದ ಮೇಲೆ ಮಾವನನ್ನು ಪೊಲೀಸರು ಬಂಧಿಸಿದ್ದಾರೆ.
ಬೆಂಗಳೂರಿನ ಜೆಸಿ ನಗರದಲ್ಲಿನ ಅಬ್ದುಲ್ ರೆಹಮಾನ್ ಇಲಿಯಾಜ್ ಎಂಬಾತ ಸೊಸೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ. ಮೊದಲ ರಾತ್ರಿಯ ಅನುಭವ ಹೇಳು ಎಂದು ಅಸಭ್ಯವಾಗಿ ವರ್ತಿಸುತ್ತಿದ್ದವನ ವಿರುದ್ಧ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಬಂಧಿಸಿದ್ದಾರೆ.
ಕಳೆದ ವರ್ಷ ಅಬ್ದುಲ್ ಹಾದಿ ಎನ್ನುವವರ ಜತೆ ಸಂತ್ರಸ್ತೆಯ ಮದುವೆಯಾಗಿತ್ತು. ಒಳ್ಳೆ ಕೆಲಸದಲ್ಲಿದ್ದೇನೆ ಎಂದು ಸುಳ್ಳು ಹೇಳಿ ಹಾದಿ ಮದುವೆಯಾಗಿದ್ದ. ಆದರೆ, ಅನಕ್ಷರಸ್ಥನಾಗಿರುವ ಅಬ್ದುಲ್ ಹಾದಿ ಕೂಡ ಹೆಂಡತಿಗೆ ಮಾನಸಿಕ, ದೈಹಿಕ ಕಿರುಕುಳ ನೀಡುತ್ತಿದ್ದನು. ಇದರೊಂದಿಗೆ ಮಾವ ಕೂಡ ಸೊಸೆ ಮುಂದೆ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಿದ್ದ ಎನ್ನಲಾಗಿದೆ.
ಈ ಕುರಿತು ಸಂತ್ರಸ್ತೆ ಜೆಸಿ ನಗರ ಪೊಲೀಸರಿಗೆ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಇಬ್ಬರು‌ ಆರೋಪಿಗಳಾದ ತಂದೆ-ಮಗನನ್ನು ಬಂಧಿಸಿ ಪೊಲೀಸರು ಜೈಲಿಗೆ ಕಳುಹಿಸಿದ್ದಾರೆ. 

 

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...