ಮಕ್ಕಳ ಅಪಹರಣ ವದಂತಿಯಿಂದ ಭಯ ಸೃಷ್ಟಿಯಾಗುತ್ತಿದೆ-ಸಿಪಿಐ ಹನುಮಂತಪ್ಪ

Source: sonews | By sub editor | Published on 25th May 2018, 11:22 PM | State News | Don't Miss |

ಶ್ರೀನಿವಾಸಪುರ : ಪಟ್ಟಣದ ಪೊಲೀಸ್ ಠಾಣೆಯಲ್ಲಿ ಕರೆಯಲಾಗಿದ್ದ ಪತ್ರಿಕಾ ಘೋಷ್ಟಿಯಲ್ಲಿ ಸಿಪಿಐ ಹನುಮಂತಪ್ಪ ಮಾತನಾಡಿ ಹೊರ ರಾಜ್ಯಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ ಅಲ್ಲಿ ಅನೇಕ ಘಟನಾವಳಿಗಳಿಗೆ ಕಾರಣವಾಗಿದ್ದು ಈಗ ಕರ್ನಾಟಕದಲ್ಲಿ ಅದೇ ರೀತಿಯ ತೊಂದರೆಯನ್ನು ಸಾರ್ವಜನಿಕರು ಅನುಭವಿಸುವಂತೆ ಮಾಡುತ್ತಿದೆ.

ಇದು ದೇಶದ್ರೋಹದ ಕೆಲಸವಾಗಿದ್ದು, ಭಯೋತ್ಪಾದನೆಯನ್ನು ಜನಮನಗಳಲ್ಲಿ ಹುಟ್ಟುಹಾಕಿರುವ ವಿಷಯವಾಗಿದೆ. ಜಾಲತಾಣಗಳಲ್ಲಿ ಹರಿದಾಡುತ್ತಿರುವ ಸುದ್ದಿಗಳಿಂದ ಭಯಭೀತವಾಗಿರುವ ಜನರಿಗೆ ನಿಜ ಯಾವುದು, ಸುಳ್ಳು ಯಾವುದು ಎನ್ನುವ ತಿಳುವಳಿಕೆ ಮತ್ತು ಜ್ಞಾನ ಇಲ್ಲವಾಗಿದ್ದು, ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ. 

ಸಾಮಾಜಿಕ ಜಾಲತಾಣಗಳಲ್ಲಿ ಈ ಕೃತ್ಯಗಳನ್ನು ಅಪಲೋಡ್ ಮಾಡಿರುವ ಪ್ರಕರಣಕ್ಕೆ ಸೈಬರ್ ಕ್ರೈಂ ಕೊಪ್ಪಳದಲ್ಲಿ ಒಬ್ಬನನ್ನು ಬಂಧಿಸಲಾಗಿದೆ. ಅನುಮಾನದ ಮೇಲೆ ಹಲವಾರು ಕಡೆಗಳಲ್ಲಿ ಹಲ್ಲೆ ಮಾಡಿರುವ ಘಟನೆಗಳು 80 ದಾಖಲಾಗಿದ್ದು, ಅದರಲ್ಲಿ ಕೊಲೆ ಪ್ರಕರಣವೂ ದಾಖಲಾಗಿದೆ. 

ಸದರಿ ಕೃತ್ಯಗಳ ವಿಡಿಯೋಗಳು ಅನ್ಯ ದೇಶಗಳಲ್ಲಿ ನಡೆದಿರುವಂತಹವುಗಳಾಗಿದ್ದು ಅವುಗಳನ್ನು ಅಪ್‍ಲೋಡ್ ಮಾಡಿ ಜನರನ್ನು ಭಯಬೀತರನ್ನಾಗಿಸುತ್ತಿದ್ದು ಇವುಗಳ ಮೂಲವನ್ನು ಸೈಬರ್ ಕ್ರೈಂ ಬೇದಿಸುತ್ತಿದ್ದು ಶೀಘ್ರದಲ್ಲೇ ಮೂಲವನ್ನು ಪತ್ತೆ ಹಚ್ಚಿಲಾಗವುದೆಂದು ಪೊಲೀಸ್ ಮಾಹಾ ನಿರ್ಧೇಶಕರು ಪತ್ರಿಕಾಘೋಷಿಯಲ್ಲಿ ತಿಳಿಸಿದ್ದಾರೆಂದು ಹೇಳಿದರು.

ನಿರಾಶ್ರಿತರ ಪರಿಹಾರ ಕೇಂದ್ರದ ಸೂಪರಿಂಡೆಂಟ್ ರತ್ನಕುಮಾರಿ ಮಾತನಾಡಿ ಜಿಲ್ಲೆಯಾಧ್ಯಂತ ಬಿಕ್ಷುಕರ ಮೇಲೆ ಮತ್ತು ರಸ್ತೆ ಬದಿ ಮಲಗುವವರ ಮೇಲೆ ಹಲ್ಲೆಗಳಾಗುತ್ತಿದ್ದು ಇದರಿಂದ ತೊಂದರೆಯಾಗಬಾರದೆಂದು ಅಂತಹವರನ್ನು ಗುರ್ತಿಸಿ ಅವರನ್ನು ಬಂಗಾರಪೇಟೆಯ ಸಮಾಜ ಕಲ್ಯಾಣ ಇಲಾಖೆಯು ನಿರ್ವಹಿಸುತ್ತಿರುವ ನಿರಾಶ್ರಿತರ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದೆಂದು ಮತ್ತು ಅವರಿಗೆ ಸೂಕ್ತ ಚಿಕಿತ್ಸೆ ಮತ್ತು ಮನೊವೈಧ್ಯರಿಂದ ಕೌನ್ಸಿಲಿಂಗ್ ನಡೆಸಲಾಗುವುದು ಹಾಗೂ ಅವರ ಕುಟುಂಬಗಳ ಪತ್ತೆ ಹಚ್ಚಿ ಅವರನ್ನು ಅವರಲ್ಲಿ ಸೇರಿಸಲಾಗುವುದೆಂದು ಹೇಳಿದರು.

ಈ ಸಂದರ್ಭದಲ್ಲಿ ಪೊಲೀಸ್ ಸಬ್ ಇನ್ಸ್‍ಪೆಕ್ಟರ್ ಬಿ.ಆರ್.ಜಗದೀಶ್ ಹಾಗೂ ಸಿಬ್ಬಂದಿ ಭಾಗವಹಿಸಿದ್ದರು.

Read These Next

ಬಿಜೆಪಿ ಹಿಂದುಳಿದವರನ್ನು ತುಳಿಯುವ ಸಂಚು ರೂಪಿಸಿದೆ, ಭಟ್ಕಳದಲ್ಲಿ ಬಿಜೆಪಿ ವಿರುದ್ಧ ಬಿ.ಕೆ.ಹರಿಪ್ರಸಾದ್ ವಾಗ್ದಾಳಿ

ಬಿಜೆಪಿ ಮೇಲ್ನೋಟಕ್ಕೆ ಅಲ್ಪಸಂಖ್ಯಾತರನ್ನು ವಿರೋಧಿಸುವ ಪಕ್ಷವಾಗಿ ಮೇಲ್ನೋಟಕ್ಕೆ ಕರೆಯಿಸಿಕೊಳ್ಳುತ್ತಿದೆಯಾದರೂ, ವಾಸ್ತವಾಗಿ ...