ಆರ್‌ಟಿಒ ಮನೆಯಲ್ಲಿ ರೂ. 70 ಲಕ್ಷ ಪತ್ತೆ:ನೋಟುಗಳ ರಾಶಿ ಕಂಡು ಬೆಚ್ಚಿಬಿದ್ದ ಅಧಿಕಾರಿಗಳು

Source: so news | By MV Bhatkal | Published on 20th March 2019, 12:33 AM | Coastal News | Don't Miss |

 

ಉಡುಪಿ: ಕಾರಿನ ಟ್ಯಾಕ್ಸ್ ರಿಫಂಡ್‌ಗೆ ಸಂಬಂಧಿಸಿ ಲಂಚ ಸ್ವೀಕರಿಸುತ್ತಿದ್ದಾಗ ಸಿಕ್ಕಿಬಿದ್ದಿದ್ದ ಉಡುಪಿ ಆರ್‌ಟಿಒ(ಸಾರಿಗೆ ಉಪ ಆಯುಕ್ತ) ಆರ್.ಎಂ ವರ್ಣೇಕರ್(55)ನ ಬ್ರಹ್ಮಾಂಡ ಭ್ರಷ್ಟಚಾರ ಮತ್ತಷ್ಟು ತೆರೆದುಕೊಂಡಿದ್ದು, ಮಂಗಳೂರಿನ ಐಷಾರಾಮಿ ಮನೆಯಲ್ಲಿ ಬರೋಬ್ಬರಿ 70 ಲಕ್ಷ ರೂ, ಅಕ್ರಮ ಹಣ, ಬಹು ಕೋಟಿ ಮೌಲ್ಯದ ಆಸ್ತಿ, ದಾಖಲೆಪತ್ರ ಪತ್ತೆಯಾಗಿದೆ.
ಬೆಂಗಳೂರಿನ ಯಲಹಂಕದಲ್ಲಿ ಇತ್ತೀಚೆಗೆ ನಡೆದ ಏರ್‌ಶೋದಲ್ಲಿ ಸಂಭವಿಸಿದ್ದ ಅಗ್ನಿ ಅನಾಹುತದಲ್ಲಿ ಕಾರ್ಕಳ ಮೂಲದ, ಬೆಂಗಳೂರಿನಲ್ಲಿ ಇಂಜಿನಿಯರ್ ಆಗಿರುವ ವ್ನಿೇಶ್ ಎಂಬುವವರ ಫೋಕ್ಸ್‌ವ್ಯಾಗನ್ ಕಾರು ಸುಟ್ಟು ಹೋಗಿತ್ತು. ಕಾರಿನ ಟ್ಯಾಕ್ಸ್ ರಿಫಂಡ್‌ಗೆ ಸಂಬಂಧಿಸಿ ಆರ್‌ಟಿಒ ವ್ನಿೇಶ್ ಲಂಚದ ಬೇಡಿಕೆ ಒಡ್ಡಿದ್ದ. ಮಾ.16ರಂದು ಮಧ್ಯಾಹ್ನ 3 ಗಂಟೆಗೆ ಮಣಿಪಾಲ ರಜತಾದ್ರಿ ಆರ್‌ಟಿಒ ಕಚೇರಿಗೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು, ಆರೋಪಿಗಳಾದ ಆರ್‌ಟಿಒ ಆರ್.ಎಂ ವರ್ಣೇಕರ್, ಗುತ್ತಿಗೆ ನೌಕರ ಮುನಾಫ್ ಎಂಬುವರನ್ನು 4 ಸಾವಿರ ರೂ. ಲಂಚ ಸ್ವೀಕರಿಸುತ್ತಿದ್ದಾಗ ಬಂಧಿಸಿದ್ದರು. ಬಳಿಕ ಕಚೇರಿ ದಾಖಲೆ ಪತ್ರ ಪರಿಶೀಲಿಸಿದ ಅಧಿಕಾರಿಗಳು, ಅಕ್ರಮವಾಗಿ ಸಂಗ್ರಹಿಸಿಡಲಾಗಿದ್ದ 30.670 ರೂ. ವಶಕ್ಕೆ ಪಡೆದುಕೊಂಡಿದ್ದರು.
ಮನೆಯಲ್ಲಿ ನೋಟು ಕಂತೆ!: ಮಂಗಳೂರಿನ ಬಿಜೈಯಲ್ಲಿರುವ ಐಷಾರಾಮಿ ಮನೆಯಲ್ಲಿ ಪರಿಶೀಲನೆ ನಡೆಸಿದ ಅಧಿಕಾರಿಗಳು ಹಣದ ರಾಶಿ ಕಂಡು ಬೆಚ್ಚಿಬಿದ್ದಿದ್ದಾರೆ. 500, 2 ಸಾವಿರ ರೂ. ಮುಖಬೆಲೆಯ ಒಟ್ಟು 70,18,237 ರೂ.ಅಕ್ರಮ ಹಣವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಇತರೆಡೆ ಹೊಂದಿರುವ ಮನೆ, ಜಮೀನು, ಫ್ಲಾೃಟ್, ಹಲವಾರು ಉಳಿತಾಯ ಖಾತೆ, ಇತರೆ ಮಹತ್ವದ ಕೊಟ್ಯಂತರ ರೂ. ಬೆಲೆಬಾಳುವ ಮಹತ್ವದ ದಾಖಲೆಗಳನ್ನು ಎಸಿಬಿ ಅಧಿಕಾರಿಗಳು ವಶಪಡಿಸಿಕೊಂಡು ಪರಿಶೀಲಿಸುತ್ತಿದ್ದಾರೆ. ಮೈಸೂರು, ಬೆಂಗಳೂರು, ಬೆಳಗಾವಿ ಮುಂತಾದ ಕಡೆಗಳಲ್ಲಿ ಆಸ್ತಿ ಸಂಪಾದಿಸಿರುವ ಬಗ್ಗೆ ಮಾಹಿತಿ, ದಾಖಲೆ ಲಭಿಸಿದ್ದು, ತನಿಖೆ ನಡೆಸಲಾಗುತ್ತಿದೆ. ಎರಡು ಲಾಕರ್‌ನ ಬೀಗ ದೊರೆತಿದ್ದು ಎಲ್ಲ ಆಯಾಮಗಳಿಂದ ನಡೆಸಲಾಗುತ್ತಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...