ಪಡಿತರ ಹಾಗೂ ಸೀಮೆ ಎಣ್ಣೆ ಕೂಪನ್ ಪಡೆಯಲು ಹಣ ನೀಡಬೇಡಿ- ಕೃಷ್ಣಾರೆಡ್ಡಿ.

Source: S O News service | By Staff Correspondent | Published on 26th September 2016, 11:12 PM | State News |


ಚಿಂತಾಮಣಿ: ಸೈಬರ್ ಕೇಂದ್ರಗಳಲ್ಲಿ ಪಡಿತರ ಹಾಗೂ ಸೀಮೆ ಎಣ್ಣೆ ಟೋಕನ್ ಪಡೆಯಲು ಬಡವರಿಂದ ಯಾವುದೇ ರೀತಿಯ ಹಣವನ್ನು ಪಡೆಯಬಾರದೆಂದು ಶಾಸಕ ಜೆ.ಕೆ.ರೆಡ್ಡಿ ತಿಳಿಸಿದ್ದಾರೆ.
ಈ ಕುರಿತಂತೆ ನಗರದಲ್ಲಿ ಪಡಿತರ ಹಾಗೂ ಸೀಮೆ ಎಣ್ಣೆ ಪಡೆಯಲು ನೀಡುತ್ತಿರುವ ಕೋಪನ್ ಗಾಗಿ ಹಣ ತೆರುವಂತಾಗಿದೆ ಎಂಬ ಸಾರ್ವಜನಿಕರ ದೂರುಗಳಿಗೆ ಸಂಬಂಧಿಸಿದಂತೆ ಶಾಸಕ ರೆಡ್ಡಿ ಈ ಮೇಲಿನಲ್ಲಿ ಪ್ರತಿಕ್ರಿಯಿಸಿದ್ದು ಯಾರೂ ಕೂಡ ಟೋಕನ್ ಪಡೆಯಲು ಹಣ ನೀಡುವ ಅವಶ್ಯಕತೆಯಿಲ್ಲ. ಸರ್ಕಾರವೇ ಆಯಾ ಕೇಂದ್ರಗಳಿಗೆ ಹಣ ನೀಡುತ್ತಿದೆ ಎಂದು ತಿಳಿಸಿದ್ದಾರೆ. ಈ ಕುರಿತಂತೆ ಜಿಲ್ಲಾದಿಕಾರಿಗಳು, ಜಿಲ್ಲಾ ಆಹಾರ ಉಪನಿರ್ದೇಶಕರು ಹಾಗೂ ತಹಸಿಲ್ದಾರ್ ರವರ ಗಮನಕ್ಕೆ ತಂದಿದ್ದು, ಇನ್ನೂ ಮುಂದೆ ಯಾರು ಸಹ ಪಡಿತರ ಹಾಗೂ ಸೀಮೆ ಎಣ್ಣೆ ಕೂಪನ್ ಗಳನ್ನು ಪಡೆಯಲು ಸೈಬರ್ ಕೇಂದ್ರಗಳಿಗೆ ಯಾವುದೇ ಕಾರಣಕ್ಕೂ ಹಣ ನೀಡಬಾರದು ಹಾಗೇನಾದರೂ ಹಣ ಕೇಳಿದರೆ ತಮ್ಮ ಗಮನಕ್ಕೆ ತರುವಂತೆ ಶಾಸಕ ಜೆ.ಕೆ ಕೃಷ್ಣಾರೆಡ್ದಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. 

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...