ಭಟ್ಕಳ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಖೈಸರ್ ಮೊಹತೆಶಮ್

Source: sonews | By Staff Correspondent | Published on 11th July 2018, 6:20 PM | Coastal News | Don't Miss |

ಭಟ್ಕಳ: ನಗರದ 17ನೇ ವಾರ್ಡಿನ ಪುರಸಭೆ ಸದಸ್ಯ ಖೈಸರ್ ಮೊಹತೆಶಮ್ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಸರ್ವಾನುಮತದೊಂದಿಗೆ ಆಯ್ಕೆಯಾಗಿದ್ದಾರೆ.

ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಕೆ.ಅಬ್ದುಲ್ ರಹೀಮ್ ರ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಈ ಆಯ್ಕೆ ನಡದಿದೆ ಎಂದು ತಿಳಿದುಬಂದಿದೆ. 

ಖೈಸರ್ ಮೊಹತೆಶಮ್ 2016ನೇ ಇಸ್ವಿಯಲ್ಲೂ ಸ್ಥಾಯಿಸಮಿತಿ ಅಧ್ಯಕ್ಷರಾಗಿ ಸೇವೆಸಲ್ಲಿಸಿದ ಅನುಭವವನ್ನು ಹೊಂದಿದ್ದು ಉತ್ತಮ ಕ್ರಿಯಾಶೀಲ ವ್ಯಕ್ತಿಯಾಗಿದ್ದಾರೆ. 

ಸಭೆಯಲ್ಲಿ ಪುರಸಭೆ ಅಧ್ಯಕ್ಷ ಮುಹಮ್ಮದ್ ಸಾದೀಕ್ ಮಟ್ಟಾ, ಮುಖ್ಯಾಧಿಕಾರಿ ವೆಂಕಟೇಶ್ ನಾವುಡಾ, ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ಕೆ.ಅಬ್ದುಲ್ ರಹೀಂ, ಸದಸ್ಯರಾದ ಸೈಯ್ಯದ್ ಆಹ್ಮದ್ ಪರ್ವಾಝ್, ಮುಹಿದ್ದೀನ್ ಅಲ್ತಾಫ್ ಖರೂರಿ, ಅಬ್ದುಲ್ಲಾ ಖಲಿಫಾ, ಕೃಷ್ಣಾನಂದಾ ಪ್ರಭು, ಪಾಸ್ಕಲ್ ಗೋಮ್ಸ್, ವಾಹಿದಾ ಮುಕ್ರಿ ಮತ್ತಿತರರು ಉಪಸ್ಥಿತಿದ್ದರು.
 

Read These Next

ಪ್ರಕೃತಿ ರಕ್ಷಣೆಗೆ  ಪ್ರತಿಯೊಬ್ಬರು ಎರಡು ಸಸಿಗಳನ್ನು ನೆಡಬೇಕು: ನೀಲಕಂಠಮಠದ ಮಹಾಸ್ವಾಮಿ

ಜೂನ್ ತಿಂಗಳು ಮುಗಿಯುತ್ತಾ ಬಂತು. ಆದರೆ ಸಮರ್ಪಕವಾದ ಮಳೆ ಮಾತ್ರ ಈವರೆಗೂ ಆಗಿಲ್ಲ. ಇದಕ್ಕೆಲ್ಲ ಅರಣ್ಯ ಸಂಪತ್ತಿನ ನಾಶವೇ ಕಾರಣ. ...