ಬಣ್ಣಮಿಶ್ರಿತ ಬಟಾಣಿ ಮಾರಾಟ; ಕ್ರಮಕ್ಕೆ ಆಗ್ರಹ

Source: sonews | By Staff Correspondent | Published on 22nd September 2018, 11:33 PM | Coastal News | Don't Miss |

ಕೋಲಾರ: ಕೋಲಾರ ನಗರದ ತರಕಾರಿ ಮಾರ್ಕೆಟ್‍ನಲ್ಲಿ ಬಣ್ಣ ಮಿಶ್ರಿತ ಹಸಿ ಬಟಾಣಿ ಮಾರುತ್ತಿದ್ದು, ಮಾರಾಟಗಾರರ ವಿರುದ್ಧ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ನಗರದ ಹೊಸ ಬಡಾವಣೆಯ ನಿವಾಸಿ ಸಂಪತ್‍ಕುಮಾರ್ ಒತ್ತಾಯಿಸಿದ್ದಾರೆ.

ಕಳೆದ ರಾತ್ರಿ ಮಾರುಕಟ್ಟೆಯಿಂದ ಸಿಪ್ಪೆ ಬಿಡಿಸಿಟ್ಟಿರುವ ಹಸಿ ಬಟಾಣಿಯನ್ನು ಖರೀದಿಸಲಾಗಿದ್ದು, ಅದನ್ನು ಮನೆಗೆ ತಂದು ಸಾಂಬಾರು ಮಾಡಲು ತೊಳೆದಾಗ ಅದರಲ್ಲಿರುವ ಬಣ್ಣ ಗೋಚರವಾಗಿದೆ. ಈ ಬಣ್ಣ ಹೊಟ್ಟೆ ಸೇರಿದರೆ ಕ್ಯಾನ್ಸರ್ ಮತ್ತು ಇತರೆ ಖಾಯಿಲೆಗಳಿಗೆ ತುತ್ತಾಗುವ ಸಂಭವವಿದ್ದು, ಆಹಾರ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ನಗರದಲ್ಲಿ ನಡೆಯುತ್ತಿರುವ ಬಣ್ಣಮಿಶ್ರಿತ ಕಲೆಬೆರಕೆ ಆಹಾರ ಪದಾರ್ಥಗಳ ಮಾರಾಟಕ್ಕೆ ಕಡಿವಾಣ ಹಾಕಿ ಸಾರ್ವಜನಿಕರ ಆರೋಗ್ಯವನ್ನು ಕಾಪಾಡಬೇಕೆಂದು ಸಂಪತ್ ಕುಮಾರ್ ಮನವಿ ಮಾಡಿದ್ದಾರೆ. 


 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...