ಮತದಾರರ ಪಟ್ಟಿಗೆ ಹೆಸರು ಸೇರಿಸಲು ನ.೨೦ ಕೊನೆ; ಕಮಲಾಬಾಯಿ

Source: sonews | By Staff Correspondent | Published on 11th October 2018, 11:02 PM | State News |

ಶ್ರೀನಿವಾಸಪುರ: ಲೋಕಸಭಾ ಚುನಾವಣೆಯ 2019ರ ಹಿನ್ನಲೆಯಲ್ಲಿ ಈ ತಿಂಗಳ 10 ರಿಂದಲೇ ಮತದಾರರ ಪಟ್ಟಿಯಲ್ಲಿ ಸೇರ್ಪಡೆ, ತೆಗೆಯುವುದು, ತಿದ್ದುಪಡಿಗಳನ್ನು ನವೆಂಬರ್ 20 ರ ಒಳಗೆ ಅರ್ಹತೆ ಇರುವ ವ್ಯಕ್ತಿಗಳ ಹೆಸರುಗಳನ್ನು ಮತದಾರರ ಪಟ್ಟಿಗೆ ಸೇರಿಸಲು ಹಾಗು ಬಿ.ಎಲ್.ಓ, ರವಿನ್ಯೂ ಅಂತರ್ಜಾಲ ಮೂಲಕ ತಮ್ಮ ಹೆಸರುಗಳನ್ನು ನಮೊದು ಮಾಡಿಕೊಳ್ಳುವ ಅವಕಾಶ ಕಲ್ಪಿಸಿರುತ್ತೇವೆ ಎಂದು ನೂತನ ಪ್ರಬಾರ ದಂಡಾಧೀಕಾರಿಗಳಾದ ಕಮಲಾಬಾಯಿ ರವರು ತಿಳಿಸಿದ್ದಾರೆ.

ತಾಲ್ಲೂಕು ಕಛೇರಿಯಲ್ಲಿ ಏರ್ಪಡಿಸಿದ್ದ ಭಾವಚಿತ್ರ ವಿರುವ ಮತದಾರರ ಪಟ್ಟಿಗಳ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2019 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಪ್ರಬಾರ ದಂಡಾಧೀಕಾರಿಗಳಾದ ಕಮಲಾಬಾಯಿ ರವರು ನವೆಂಬರ್ 20 ಆದ ಮೇಲೆ ಮತದಾರರ ಪಟ್ಟಿಯಲ್ಲಿ ಸೇರಿಸಲು ಅವಕಾಶ ಇರುವುದಿಲ್ಲಾ. ಕೆಲವು ಗ್ರಾಮ ಹಾಗು ಪಟ್ಟಣ ಪ್ರದೇಶಗಳಲ್ಲಿ ಜನಸಂಖ್ಯೆಗಿಂತ ಹೆಚ್ಚಾಗಿ ಮತದಾರರ ಪಟ್ಟಿಯಲ್ಲಿ ನಮೂದು ಆಗಿರುತ್ತವೆ ಅಂತಹವುಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿ ನಕಲಿ ಮತದಾರರನ್ನು ಪಟ್ಟಿಯಿಂದ ತೊಲಗಿಸಬೇಕು, ಹೆಚ್ಚು ಜನಸಂಖ್ಯೆ ಹೊಂದಿದ ಕೆಲವು ಬಾಗದಲ್ಲಿ ಕಡಿಮೆಯಾಗಿ ಮತದಾರರ ಪಟ್ಟಿಯಲ್ಲಿ ಸೇರಿರುತ್ತಾರೆ ಇದನ್ನು ಬಿ.ಎಲ್.ಓ ಅಧೀಕಾರಿಗಳು ಇವನ್ನು ಸೂಕ್ಷ್ಮವಾಗಿ ಪರಿಶೀಲಿಸಿ ಅರ್ಹತೆ ಉಳ್ಳ ವ್ಯಕ್ತಿಗಳನ್ನು ಮತದಾರರ ಪಟ್ಟಿಯಲ್ಲಿ ಸೇರಿಸಬೇಕಾಗುತ್ತದೆ, ಹೊಸದಾಗಿ ಹೆಸರುಗಳನ್ನು ನೊಂದಣಿ ಮಾಡಿಕೊಳ್ಳುವವರು ಸಂಖ್ಯೆ-6 ಭರ್ತಿಮಾಡಿ ತಮ್ಮ ಭಾವಚಿತ್ರವನ್ನು ಅಂಟಿಸಿ ವಿಳಾಸ ದೃಡೀಕರಣ ಪತ್ರವನ್ನು ಅರ್ಜಿಯೊಂದಿಗೆ ನೀಡಬೇಕು, 01.01.2019 ಕ್ಕೆ 18 ವರ್ಷ ತುಂಬಿದ ಎಲ್ಲಾ ಯುವತಿ-ಯುವಕರು ಮತದಾರರ ಪಟ್ಟಯಲ್ಲಿ ತಮ್ಮ ಹೆಸರುಗಳನ್ನು ನಮೂದಿಸಿಕೊಳ್ಳಬೇಕಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಬಿ.ಎಲ್.ಓ ಸಿಬ್ಬಂದಿ ಹಾಗು ಚುನಾವಣಾಧೀಕಾರಿಗಳು ಒಂದು ತಂಡವಾಗಿ ಎಲ್ಲರೂ ಕೆಲಸಾ ಮಾಡಬೇಕು ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೇ ಪ್ರತಿಯೊಂದು ಮನೆಗೂ ಮತದಾರರ ಪಟ್ಟಿಯ ಸೇರ್ಪಡೆಯ ಕಾರ್ಯಕ್ರಮವನ್ನು ತಿಳಿಸಬೇಕು ಆಯಾಗ್ರಾಮದಲ್ಲಿ ಹಾಗು ವಾರ್ಡಗಳಲ್ಲಿ ನಿಗದಿ ಪಡಿಸಿರುವ ದಿನಾಂಕದ ಒಳಗೆ ತಮ್ಮ ಕರ್ತವ್ಯವನ್ನು ಪಾರದರ್ಶಕವಾಗಿ ನಿರ್ವಹಿಸಬೇಕು ಏನೇ ಸಮಸ್ಯೆಬಂದರೂ ನಮ್ಮ ಬಳಿ ಚರ್ಚಿಸಿ ಮಾಹಿತಿ ಪಡೆದು ತದನಂತರ ತೀರ್ಮಾನ ತೆಗೆದುಕೊಳ್ಳಬೇಕೆಂದು ಸಿಬ್ಬಂದಿ ವರ್ಗದವರಿಗೆ ತಿಳಿಸಿದರು. 
ಈ ಸಭೇಯಲ್ಲಿ ಎಲ್ಲಾ ಬಿ.ಎಲ್.ಓ ಹಾಗು ಚುನಾವಣಾಧಿಕಾರಿ ಸಿಬ್ಬಂದಿ ಹಾಜರಿದ್ದರು.
  

Read These Next