ಕಾಶ್ಮೀರದ ಕಣಿವೆಯಲ್ಲಿ ಮಿಂಚುತ್ತಿರುವ ಫುಟ್ಬಾಲ್ ಆಟಗಾರ್ತಿ, ಕೋಚ್ ನಿದಾ ನಝೀರ್

Source: S O News service | By I.G. Bhatkali | Published on 16th June 2016, 4:02 PM | Sports News | Don't Miss |

ಶ್ರೀನಗರ: ವಿಶ್ವದ ಫುಟ್ಬಾಲ್ ತಾರೆಗಳಾದ ರೊನಾಲ್ಡೊ ಹಾಗೂ ಲಿಯೊನೆಲ್ ಮೆಸ್ಸಿ ಅವರಿಂದ ಸ್ಫೂರ್ತಿ ಪಡೆದಿರುವ ಕಾಶ್ಮೀರದ ಯುವತಿಯೋರ್ವಳು ಫುಟ್ಬಾಲ್ ಕ್ರೀಡೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ.

ಶ್ರೀನಗರದ ರಂಬಾಬಾಘ್ ಪ್ರದೇಶದ ನಿವಾಸಿಯಾಗಿರುವ 19ರ ಹರೆಯದ ನಿದಾ ನಝೀರ್ ಕಾಶ್ಮೀರ ಕಣಿವೆಯಲ್ಲಿ ಬೆಳಕಿಗೆ ಬರುತ್ತಿರುವ ಪ್ರಪ್ರಥಮ ಮಹಿಳಾ ಫುಟ್ಬಾಲ್ ಆಟಗಾರ್ತಿ ಹಾಗೂ ಕೋಚ್ ಆಗಿದ್ದಾರೆ.

ಪ್ರಸ್ತುತ ಶ್ರೀನಗರದ ಮಹಿಳಾ ಕಾಲೇಜೊಂದರಲ್ಲಿ ವ್ಯಾಸಂಗ ಮಾಡುತ್ತಿರುವ ನಿದಾ 2007ರಲ್ಲಿ ತನ್ನ 10ರ ಹರೆಯದಲ್ಲಿ ಫುಟ್ಬಾಲ್ ಆಡಲು ಆರಂಭಿಸಿದ್ದರು. ನಿದಾ ಆರಂಭದಲ್ಲಿ ಬಹಳಷ್ಟು ಸಮಸ್ಯೆಯನ್ನು ಎದುರಿಸಿದ್ದರು. ನಿದಾಳ ಪ್ರತಿಭೆಯನ್ನು ಗುರುತಿಸಿದ ಹೆತ್ತವರು ಫುಟ್ಬಾಲ್ ಆಟಗಾರ್ತಿಯಾಗಬೇಕೆಂದು ಮಗಳ ಕನಸಿಗೆ ಬೆಂಗಾವಲಾಗಿ ನಿಂತರು.

ನಿದಾ ಈಗಾಗಲೇ ಎರಡು ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಆಡಿದ್ದಾರೆ. ಇದೀಗ ಆಕೆ ಕೇವಲ ಫುಟ್ಬಾಲ್ ಆಡುವುದು ಮಾತ್ರವಲ್ಲ ಕಾಶ್ಮೀರ ಕಣಿವೆಯಲ್ಲಿ ಫುಟ್ಬಾಲ್‌ನಲ್ಲಿ ಆಸಕ್ತಿ ಹೊಂದಿರುವ ಸುಪ್ತ ಪ್ರತಿಭೆಗಳಿಗೂ ಕೋಚಿಂಗ್ ನೀಡುತ್ತಿದ್ದಾರೆ. ನಿದಾ ಕಾಶ್ಮೀರದ ಫುಟ್ಬಾಲ್ ಸಂಸ್ಥೆಯ ನೆರವನ್ನು ಶ್ಲಾಘಿಸುತ್ತಿದ್ದಾರೆ. ಕಾಶ್ಮೀರ ಫುಟ್ಬಾಲ್ ಸಂಸ್ಥೆಯು ನಿದಾಗೆ ನೈತಿಕ ಸ್ಥೈರ್ಯ ತುಂಬಿದ್ದಲ್ಲದೆ ತಾಂತ್ರಿಕ ಬೆಂಬಲವನ್ನು ನೀಡುತ್ತಾ ಬಂದಿದೆ.

ನಿದಾ ಅಂತಾರಾಷ್ಟ್ರೀಯ ಫುಟ್ಬಾಲ್ ಟೂರ್ನಮೆಂಟ್‌ನಲ್ಲಿ ಆಡಬೇಕೆಂಬ ಕನಸು ಕಾಣುತ್ತಿದ್ದಾರೆ. ಆ ನಿಟ್ಟಿಯಲ್ಲಿ ಪ್ರಯತ್ನವನ್ನು ಮುಂದುವರಿಸಿದ್ದಾರೆ.

Read These Next

ಹ್ಯಾಮರ್ ಥ್ರೋ; ಇಸ್ಲಾಮಿಯಾ ಆಂಗ್ಲೋ ಉರ್ದು ಪ್ರೌಢಶಾಲೆ ವಿದ್ಯಾರ್ಥಿ ರಾಷ್ಟ್ರಮಟ್ಟಕ್ಕೆ ಆಯ್ಕೆ

ಭಟ್ಕಳ: ಮಂಡ್ಯ ಜಿಲ್ಲೆಯ ಆದಿಚುಂಚನಗಿರಿಯಲ್ಲಿ ಬುಧವಾರ ನಡೆದ ಪ್ರೌಢಶಾಲಾ ವಿದ್ಯಾರ್ಥಿಗಳ ರಾಜ್ಯಮಟ್ಟದ ಅಥ್ಲೆಟಿಕ್ಸ್ ನಲ್ಲಿ ...

ಕ್ರೀಡಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಆಸಕ್ತಿ ವಹಿಸುವಂತೆ ಕ್ಷೇತ್ರಶಿಕ್ಷಣಾಧಿಕಾರಿ ಕರೆ

ಭಟ್ಕಳ:  ವಿದ್ಯಾರ್ಥಿಗಳು  ಪಟ್ಯಪುಸ್ತಕದ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲಿ ಆಸಕ್ತಿ ವಹಿಸಿದ್ದಲ್ಲಿ ವಿದ್ಯಾರ್ಥಿಗಳ ಸರ್ವಾಂಗೀಣ ...