ವಿಜಯದಶಮಿಯಂದು ಗಾಳಿಯಲ್ಲಿ ಗುಂಡು; ೬೦ ಭಜರಂಗಿಗಳ ವಿರುದ್ಧ ಪ್ರಕರಣ ದಾಖಲು

Source: sonews | By sub editor | Published on 1st October 2017, 3:52 PM | National News | Don't Miss |

ಹೊಸದಿಲ್ಲಿ: ವಿಜಯದಶಮಿಯ ಸಂಭ್ರಮದಂದು ಭಜರಂಗಿ ಹಾಗೂ ವಿಹಿಪಂ ಕಾರ್ಯಕರ್ತರೆನ್ನಲಾದ ಕೆಲವರು ಗಾಳಿಯಲ್ಲಿ ಗುಂಡು ಹಾರಿಸಿ, ಮಾರಕಾಯುಧಗಳನ್ನು ಪ್ರದರ್ಶಿಸಿದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ  60ಕ್ಕು ಹೆಚ್ಚು ಕಾರ್ಯಕರ್ತರ ವಿರುದ್ಧ ಆಗ್ರಾ ಪೊಲೀಸರು ಶಸ್ತ್ರಾಸ್ತ್ರ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.

 

“60 ಮಂದಿಯಲ್ಲಿ 29 ಮಂದಿಯ ವಿವರಗಳು ತಿಳಿದುಬಂದಿದೆ” ಎಂದು ಪೊಲೀಸ್ ಅಧಿಕಾರಿ ಸಂಜೀವ್ ತೋಮರ್ ತಿಳಿಸಿದ್ದಾರೆ.

ಆಗ್ರಾದ ರಾಮ್ ಲೀಲಾ ಮೈದಾನದ ಸಮೀಪದ ಹನುಮಾನ್ ದೇವಸ್ಥಾನದಲ್ಲಿ ನಡೆದ ವಿಜಯದಶಮಿ ಆಚರಣೆಯ ವೇಳೆ ವಿಎಚ್ ಪಿ ಹಾಗು ಬಜರಂಗದಳ ಕಾರ್ಯಕರ್ತರು ಗಾಳಿಯಲ್ಲಿ ಗುಂಡು ಹಾರಿಸಿದ್ದಲ್ಲದೆ ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದ್ದರು.

ಆಗ್ರಾ ಕೋಟೆ ಸಮೀಪವೇ ಗಾಳಿಯಲ್ಲಿ ಗುಂಡು ಹಾರಿಸಿರುವುದು ಗಂಭೀರ ವಿಷಯವಾಗಿದೆ. ಈ ಘಟನೆ ನಡೆದ ಬಗ್ಗೆ ನಮಗೆ ಮಾಹಿತಿ ಲಭಿಸಿದ ತಕ್ಷಣ ಮಾಹಿತಿ ಕಲೆ ಹಾಕಿದ್ದೇವೆ. ಆಕ್ಷೇಪಾರ್ಹ ಘೋಷಣೆಗಳನ್ನು ಕೂಗಿದವರ ಹಾಗು ಗಾಳಿಯಲ್ಲಿ ಗುಂಡು ಹಾರಿಸಿದವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಆಗ್ರಾ ಸುಪರಿಂಟೆಂಡೆಂಟ್ ಆಪ್ ಪೊಲೀಸ್ ಅನುಪಮ್ ಸಿಂಗ್ ತಿಳಿಸಿದ್ದಾರೆ.

https://www.facebook.com/abpnews/videos/2266923986658176/

Read These Next

 ಟಿಪ್ಪೂ,ಇಕ್ಬಾಲ್,ಆಝಾದ್; ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇರುವ ತ್ರೀರತ್ನಗಳು

ನ,೯,೧೦,೧೧ ಈ ಮೂರು ದಿನಗಳು ಇತಿಹಾಸದ ಸ್ಮೃತಿಪಟಲದಿಂದ ಮಾಸದೆ ಇವರು ತ್ರೀರತ್ನಗಳಾದ ಮೈಸೂರು ಹುಲಿ ಟಿಪ್ಪೂ ಸುಲ್ತಾನ್,”ಸಾರೆ ಜಹಾಂ ಸೆ ...

ವಿಕಲಚೇತನ ವಿದ್ಯಾರ್ಥಿಗಳಲ್ಲಿನ ಪ್ರತಿಭೆಗಳನ್ನು ಪೋಷಿಸುತ್ತಿರುವ ಸ್ನೇಹ ಶಾಲೆ-ಎಂ.ವಿ.ಹೆಗಡೆ

ಭಟ್ಕಳ: ವಿಶೇಷ ಚೇತನ ಮಕ್ಕಳಿಗೆ ಒಂದು ಶಾಲೆಯನ್ನು ತೆರೆದು ಅವರಿಗೆ ಸೇವೆ ನೀಡುತ್ತಿರುವ ಸ್ನೇಹ ವಿಶೇಷ ಮಕ್ಕಳ ಶಾಲೆಯ ಮಾಲತಿ ...