ಮುಂಡಗೋಡ : ಯುವ ಬ್ರಿಗೇಡ್ ನಿಂದ ಕಾರ್ಗಿಲ್ ವಿಜಯೋತ್ಸವ

Source: sonews | By Staff Correspondent | Published on 27th July 2017, 7:37 PM | Coastal News | Don't Miss |

ಮುಂಡಗೋಡ :ನಮ್ಮ ಸೈನಿಕರು ಪ್ರಾಣವನ್ನು ಪಣಕ್ಕಿಟ್ಟು ದೇಶದ ರಕ್ಷಣೆಗಾಗಿ ಹಗಲಿರಳು ದುಡಿಯುವ ಸೈನಿಕರಿಗೆ ಆತ್ಮ ಸ್ಥೈರ್ಯ ಶಕ್ತಿಯನ್ನು ನೀಡುವಂತೆ ಹಾಗೂ ಹುತ್ಮಾತ್ಮರಾದ ಸೈನಿಕರ ಆತ್ಮಕ್ಕೆ ಶಾಂತಿಕೋರಿ ಯುವ ಬ್ರೀಗೆಡ್ ನಿಂದ ಪಟ್ಟಣದ ಮಾರಿಕಾಂಬ ದೇವಸ್ಥಾನದಲ್ಲಿ  ನೂರಾರು ದೀಪ ಬೆಳಗಿಸಿ  ಪೂಜೆ ಸಲ್ಲಿಸಿ ಪಟ್ಟಣದಲ್ಲಿ ಮನೆಮನೆಗಳಲ್ಲಿ ದೀಪಬೆಳಗಿಸಿ ೧೮ನೇ  ಕಾರ್ಗಿಲ್ ವಿಜಯೋತ್ಸವ  ಆಚರಿಸಲಾಯಿತು
ತಾಲೂಕಾ ಯುವ ಬ್ರಿಗೇಡ್ ಸಂಚಾಲಕ ಶ್ರೀಧರ ಉಪ್ಪಾರ ಮಾತನಾಡಿ ನಮ್ಮ ಸೈನಿಕರು ನೆತ್ತರು ಹರಿಸಿದ್ದರಿಂದ ನಾವು ಇಲ್ಲಿ ಆರಾಮವಾಗಿ ನಮ್ಮ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೇವೆ. ಸೈನಿಕರ ಉಪಕಾರವೇ ನಮಗೆ ಶ್ರೀರಕ್ಷೆ. ಬರಿ ತಾನು ತನ್ನ ಕುಟುಂಬ ಚೆನ್ನಾಗಿದ್ದರೆ ಸಾಕು  ಬೇರೆಯವರ ಚಿಂತೆ ನನಗೇಕೆ. ಇದರಿಂದ ನನಗೇನು ಲಾಭ ನಮ್ಮ ದೇಶದ ಜನರು ಸ್ವಾರ್ಥಮಯ ಜೀವನ ಸಾಗಿಸುತ್ತಿದ್ದಾರೆ
ಕಾರ್ಗಿಲ್ ಯುದ್ದದಲ್ಲಿ  ಶತ್ರು ರಾಷ್ಟ್ರವನ್ನು ಸೋಲಿಸಿ ಗೆಲುವಿನ ಪತಾಕೆ ಹಾರಿಸಿದ ಜುಲೈ ೨೬ ದಿನವಾದರು ದೇಶವಾಸಿಗಳಾದ ಒಗ್ಗಾಟ್ಟಾಗಿ ನಾವು ನಮ್ಮ ರಾಷ್ಟ್ರದ ರಕ್ಷಣೆ ಕುರಿತು ಪ್ರತಿಯೊಬ್ಬರಿಗೆ ತಿಳಿಸಬೇಕಾಗಿದೆ. ನಮ್ಮ ಸೈನಿಕರು ಎಂಥ ಘೋರ ವಾತಾವಣದಲ್ಲಿಯೂ ಸಹ ಶತ್ರು ಗಳನ್ನು ಹಿಮ್ಮೆಟ್ಟಿಸಬಲ್ಲರೂ ಎಂದು ನಮ್ಮ ಸೈನಿಕರು ತೋರಿಸಿಕೊಟ್ಟಿದ್ದಾರೆ ಎಂದು ನಾವೇಲ್ಲರೂ ಹೇಳಬೇಕಾಗಿದೆ ಈ ದೇಶದ ನಿಜ ಹಿರೋ ನಮ್ಮ ಗಡಿಕಾಯುವ ಸೈನಿಕರೇ ಎಂದರೂ ತಪ್ಪಾಗಲಾರದು  ಎಂದರು
ದೇಶ ಕಾಯುವುದೇ ತನ್ನ ಆದ್ಯ ಕರ್ತವ್ಯ ಎಂದು ಭಾವಿಸಿ ಹಗಲಿರಳು ದುಡಿಯುತ್ತಿರುವ ನಮ್ಮ ಸೈನಿಕರಿಗೆ ಸಲಾಂ.  
ಈ ಸಂದರ್ಭದಲ್ಲಿ  ಮಾರುತಿ ಓಂಕಾರ, ಸುಧೀಂದ್ರರಾವ, ವಿಶ್ವನಾಥ ಭಜಂತ್ರಿ, ಮಂಜುನಾಥ ಹರಿಜನ, ಅರುಣ ಭಜಂತ್ರಿ, ಅಮೀತ ದೇಸಾಯಿ, ಬೇಲೂರ, ಗುರು ಕಾಮತ್ ಪರಶರಾಮ ರಾಣಗೇರ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...