ನಮ್ಮ ಕನಸಿನ ಮುಂಡಗೋಡ ವೇದಿಕೆಯಿಂದ ಸ್ಮಶಾನದಲ್ಲಿ  ಸ್ವಚ್ಚತಾಕಾರ್ಯಕ್ರಮ

Source: sonews | By sub editor | Published on 13th February 2018, 3:46 PM | Coastal News | Don't Miss |

ಮುಂಡಗೋಡ; ತಾಲೂಕ ಯುವಾ ಬ್ರಿಗೇಡ್ ಹಾಗು ನಮ್ಮ ಕನಸಿನ ಮುಂಡಗೋಡ ವೇದಿಕೆಯ ಸದಸ್ಯರು ಮಹಾಶಿವರಾತ್ರಿ ಅಂಗವಾಗಿ ಶಿವನ ಸ್ಥಾನವಾದ ಸ್ಮಶಾನ.  ಸ್ಮಶಾನದ ಸ್ವಚ್ಚತಾ  ಕಾರ್ಯಕ್ರಮವನ್ನು ಇಂದು ಹಮ್ಮಿಕೊಂಡಿದ್ದರು.

 ಶವವಾಗಿ ಸ್ಮಶಾನವನ್ನು ಪ್ರವೇಶಿಸುವ ಮೊದಲು ಜೀವಂತವಿರುವಾಗ ಸ್ಮಶಾನವನ್ನು ಪ್ರವೇಶಿಸುವುದರಿಂದ ಜನರಲ್ಲಿ ಮೂಡಿದಂತಹ ಸ್ಮಶಾನದ ಕುರಿತು ಭಯವನ್ನು ಓಡಿಸುವ ಹಾಗೂ ಸ್ವಚ್ಚತಾ ಕಾರ್ಯಕ್ರಮದಲ್ಲಿ ಭಾಗವಹಿಸುವಂತ ಧ್ಯೇಯದೊಂದಿಗೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು
ಬೆಳಗ್ಗೆ 6.30 ಕ್ಕೆ ಹುಬ್ಬಳ್ಳಿ-ಶಿರಸಿ ರಸ್ತೆಯ ಕೆಇಬಿ ಎದುರಿಗೆ ಇರುವ ಸ್ಮಶಾನದಲ್ಲಿ ಯುವ ಬ್ರಿಗ್ರೇಡ್ ಹಾಗು ನಮ್ಮ ಕನಸಿನ ಮುಂಡಗೊಂಡ ವೇದಿಕೆಯ ಸದಸ್ಯರು ಮತ್ತು  ಸ್ವ ಇಚ್ಚೆಯಿಂದ ಬಂದಂತಹ ಕೆಲ ಸಾರ್ವಜನಿಕರು ಸ್ಮಶಾನದಲ್ಲಿಯ ಕಸವನ್ನು ಹೆಕ್ಕಿ ತೆಗೆದು ಗಿಡಗಂಟಿಗಳನ್ನು ತೆರವು ಗೊಳಿಸಿದರು “ಆಸರೆ” ಸಂಸ್ಥೆಯವರು ನೀಡಿದ ಎರಡು ಜೆಸಿಬಿಗಳ ಸಹಾಯದಿಂದ ಭೂಮಿಯು ಏರಿಳಿತ ಇದ್ದಂತಹ ಪ್ರದೇಶವನ್ನು ಸಮತಟ್ಟವಾಗಿ ಮಾಡಲಾಯಿತು. ಕಸಕಡ್ಡಿಗಳನ್ನು ಗುಡ್ಡೆಹಾಕಿ ನಾಶಪಡಿಸಲಾಯಿತು.
ಸ್ಮಶಾನದ ಸ್ವಚ್ಚತಾ ಕಾರ್ಯಕ್ರಮವನ್ನು ಮಾಡಿರುವುದರಿಂದ ಮನಸ್ಸಿ ಸಂತೋಷವೆನಿಸಿದೆ ಸ್ವಚ್ಚತಾ ಕಾರ್ಯಕ್ರಮವನ್ನು  ಹಮ್ಮಿಕೊಂಡರೆ ತಾವು ಭಾಗವಹಿಸುವುದಾಗಿ ಯುವಬ್ರಿಗೇಡ್ ಹಾಗೂ ನಮ್ಮ ಕನಸಿನ ಮುಂಡಗೋಡ ವೇದಿಕೆಯ ಸದಸ್ಯರು ಖುಷಿಯಿಂದ ಹೇಳಿಕೊಂಡರು  
 

Read These Next

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...

ರಾಷ್ಟ್ರ ಮಟ್ಟದ ಪ್ರಬಂಧ ಸ್ಪರ್ಧೆಗೆ  ಅಂಜುವiನ್ ಮಹಿಳಾ ಮಹಾವಿದ್ಯಾಲಯದ ಶ್ರೀಲತಾ ಹೆಗಡೆ ಆಯ್ಕೆ

ಭಟ್ಕಳ:ಇಲ್ಲಿನ ಪ್ರತಿಷ್ಟಿತ ಅಂಜುಮನ್ ಹಾಮಿಯೆ ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮಾನ್ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ...