ಸಿರಿಗನ್ನಡ ವೇದಿಕೆಯಿಂದ ಕವನಗಳ ಆಹ್ವಾನ

Source: sonews | By Sub Editor | Published on 12th January 2018, 11:23 PM | Coastal News | Don't Miss |

ಮುಂಡಗೋಡ; ಮಂಡ್ಯದಲ್ಲಿ ನಡೆಯಲಿರುವ ಸಿರಿಗನ್ನಡ ವೇದಿಕೆಯ  ರಾಜ್ಯ ಮಟ್ಟದ ಕವಿ ಕಾವ್ಯ ಮೇಳ ಸಮಾರಂಭಕ್ಕೆ ರಾಜ್ಯಾದ್ಯಂತ ಕವಿಗಳಿಂದ ಕವನಗಳನ್ನು ಅಹ್ವಾನಿಸಿದೆ ಎಂದು ವೇದಿಕೆಯ  ಉಪಾಧ್ಯಕ್ಷರಾದ ಮುಂಡಗೋಡಿನ ರಾಧಾಬಾಯಿ ಶಿರಾಲಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕವನ ಸಂಕಲನ ಬಿಡುಗಡೆ ಸಮಾರಂಭಕ್ಕೆ ರಾಜ್ಯದ ಎಲ್ಲ ಜಿಲ್ಲೆಗಳ ಕವಿ ಕವಿಯತ್ರಿಯರು ಇದೆ ಜನವರಿ 31 ರೊಳಗೆ ತಮ್ಮ ಕವನಗಳನ್ನು ತಲುಪಿಸಲು ಕೊರಲಾಗಿದೆ.
ಕವನಗಳನ್ನು ಬರೆದುಕಳಿಸುವ ಕವನಗಳು 18 ರಿಂದ 24 ಸಾಲುಗಳಲ್ಲಿರಬೇಕು ಎಲ್ಲಿಯೂ ಪ್ರಕಟವಾಗಿರಬಾರದು. ಕೈ ಬರವಣಿಗೆಯಿಂದ ಬಂದ ಕವನಗಳನ್ನು ಸ್ವೀಕರಿಸುವುದಿಲ್ಲ ಆದ್ದರಿಂದ ಕವನಗಳು  ಕಂಪ್ಯೂಟರ ಡಿಟಿಪಿ ಆಗಿರಬೇಕು ಯಾವುದೆ ವಿಷಯಕ್ಕೆ ಸಂಬಂದಿಸಿದರೂ ನಡೆಯುತ್ತದೆ. ಕವನದ ಜೊತೆಗೆ ಫೋಟೊ ಹಾಗೂ ಕಿರು ಪರಿಚಯ ಮತ್ತು ಫೋನ ನಂಬರ ಲಗತ್ತಿಸಿರಬೇಕು. ಆಸಕ್ತ ಕವಿಗಳು ತಮ್ಮ ಕವನಗಳನ್ನು ಈ ಕೆಳಗಿನ ವಿಳಾಸಕ್ಕೆ ಕಳುಹಿಸಿಕೊಡಲು  ಕೊರಲಾಗಿದೆ
ರಾಧಾಬಾಯಿ ಶಿರಾಲಿ ರಾಜ್ಯ ಉಪಾಧ್ಯಕ್ಷರು ಕಸ್ತೂರಿ ಸಿರಿಗನ್ನಡ ವೇದಿಕೆ, ಬಸವನ ಬೀದಿ, ವಾಸ್ತವ ಉತ್ಸವ ಕಾಂಪ್ಲೇಕ್ಸ, ಮುಂಡಗೋಡ ಉತ್ತರ ಕನ್ನಡ ಜಿಲ್ಲೆ 581349 ಮೊಬೈಲ ನಂಬರ 9481423887 ಈ ವಿಳಾಸಕ್ಕೆ ಕಳುಹಿಸಬಹುದು.
 

Read These Next

ದೇವರ ದಾಸಿಮಯ್ಯ ಸಮಾಜ ಪರಿವರ್ತನೆಗೆ ಶ್ರಮಿಸಿದ ಶ್ರೇಷ್ಠ ವಚನಕಾರ: ಜಿಲ್ಲಾಧಿಕಾರಿ ಎಸ್. ಎಸ್. ನಕುಲ್

ಕಾರವಾರ  : ತಮ್ಮ ವಚನಗಳ ಮೂಲಕ ಸಮಾಜದಲ್ಲಿನ  ಮೌಡ್ಯಗಳನ್ನು ತೋಡೆಯಲು ಶ್ರಮಿಸಿದ ವಚನಕಾರರಲ್ಲಿ ದೇವರ ದಾಸಿಮಯ್ಯನವರ ಪಾಲು ಕೂಡಾ ...