ಗುಂಜಾವತಿಯಲ್ಲಿ    ಕಾಡಿಗೆ ಬೆಂಕಿ ತಡೆ ಕಾರ್ಯಕ್ರಮ

Source: sonews | By Staff Correspondent | Published on 12th January 2018, 10:17 PM | Coastal News | Don't Miss |

ಮುಂಡಗೋಡ : ಕಾಡಿಗೆ ಬೆಂಕಿ ಬೀಳುವುದನ್ನು ಮುಂಜಾಗೃತವಹಿಸಿ ತಡೆಯುವುದು ಹಾಗೂ ಬೆಂಕಿ ಹತ್ತಿದಾಗ ಆರಿಸುವುದು ಎಂಬ ಕುರಿತು ಅರಣ್ಯ ಇಲಾಖೆ ಹಾಗೂ ಗ್ರಾಮ ಅರಣ್ಯ ಸಮೀತಿ ಯಿಂದ ಸಾರ್ವಜನಿಕರಿಗೆ ತಿಳಿವಳಿಕೆ ನೀಡುವ ಕಾರ್ಯಕ್ರಮ ಗುಂಜಾವತಿ ಅರಣ್ಯ ವಿಶ್ರಾಂತಿ ಧಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮದಲ್ಲಿ ಮಾತನಾಡಿದ ಗುಂಜಾವತಿ ಉಪವಲಯ ಅರಣ್ಯಾಧಿಕಾರಿ ಆನಂದ ಪೂಜಾರ ಮಾತನಾಡಿ ಕಾಡಿಗೆ ಬೆಂಕಿಯಿಂದ ರಕ್ಷಣೆ ಮಾಡುವುದು ನಮ್ಮನಿಮ್ಮಲರ ಕರ್ತವ್ಯ  ಹಾಗೂ ಹೊಣೆ ಯಾಗಿದೆ. ಪ್ರತಿವರ್ಷವು ಅರಣ್ಯಕ್ಕೆ ಬೀಳದಂತೆ ತಡೆಯುವ ಕಾರ್ಯವನ್ನು ಈ ವರ್ಷವೂ  ಗ್ರಾಮ ಅರಣ್ಯ ಸಮಿತಿಯವರು ಹಾಗೂ ಸಾರ್ವಜನಿಕರು ಅತಿ ಜವಾಬ್ದಾರಿಯಿಂದ ಮಾಡಬೇಕು. ಮುಂದಿನ ಪೀಳಿಗಿಗೆ ಅರಣ್ಯ ನಾಶವಾಗುವುದನ್ನು ತಡೆಯುವುದು ಅವಶ್ಯವಾಗಿದೆ.  ಅರಣ್ಯಕ್ಕೆ ಬೆಂಕಿ ಬಿದ್ದರೆ ಕಾಡು ಪ್ರಾಣಿ ಸಂಕೂಲವೇ ನಾಶವಾಗುತ್ತದೆ ಅತ್ಯಮೂಲ್ಯ ಔಷಧಿ ಸಸ್ಯಗಳು ನಾಶವಾಗುತ್ತವೆ.  ಅರಣ್ಯ ಸಂಪತ್ತು ನಾಶವಾದರೆ ಮಳೆ ಕಡಿಮೆಯಾಗಿ ಪ್ರಕೃತಿ ವಿಕೋಪಕ್ಕೆ ಹೋಗುತ್ತದೆ ನೈಸರ್ಗಿಕ ಅವಘಡಗಳು ಸಂಭವಿಸುತ್ತವೆ ಆದ್ದರಿಂದ ನಾವೇಲ್ಲರೂ ಈಗಿನಿಂದಲೇ ಎಚ್ಚರಗೊಂಡು ಬೆಂಕಿ ಕಾಡಿಗೆ ಬೀಳುವುದನ್ನು ತಡೆಯೋಣ ಯಾರೂ ಸಹ ಕಾಡಿಗೆ ಬೆಂಕಿ ಹಚ್ಚುವ ಕಾರ್ಯಕ್ಕೆ ಇಳಿಯಬಾರದು . ಕಾಡಿನಲ್ಲಿ ಬೆಂಕಿ ಕಂಡಕ್ಷಣ ಸಾರ್ವಜನಿಕರು ಒಟ್ಟಾಗಿ ಬೆಂಕಿ ಆರಿಸುವ ನಿಟ್ಟಿನಲ್ಲಿ ಸಾಗಬೇಕು ಎಂದರು. ಸಾರ್ವಜನಿಕರನ್ನು ಜಾಗೃತಿಗೊಳಿಸುವ ಕಾರ್ಯದಲ್ಲಿ  ಅರಣ್ಯ ಸಮೀತಿಯವರ ಜವಾಬ್ದಾರಿ ಹೆಚ್ಚಿಗೆ ಇದೆ ಎಂದರು
ಗ್ರಾಮ ಅರಣ್ಯ ಸಮೀತಿ ಅಧ್ಯಕ್ಷ ಸಯ್ಯದ ಪಿ.ಸಯ್ಯದ ಮಾತನಾಡಿ ಕಾಡಿಗೆ ಬೆಂಕಿ ಹಚ್ಚುವುರನ್ನು  ಹಿಡಿದು ಕಾನೂನಿನ ಕುಣಿಕೆಗೆ ಒಳಪಡಿಸಿ ಶಿಕ್ಷೆ ಆಗುವಂತೆ ನೋಡಿಕೊಂಡಾಗ ಬೆಂಕಿಹಾಕುವುರು ಹೆದರಿ ಕಾಡಿಗೆ ಬೆಂಕಿ ಹಚ್ಚುವುದಿಲ್ಲ. ನಮ್ಮ ಮುಂದಿನ ಪೀಳಿಗಿಗೆ ಕಾಡನ್ನು ಉಳಿಸಿಕೊಂಡು  ಹೋಗುವ ಹಾಗೂ ಅಭಿವೃದ್ದಿ ಪಡಿಸುವ ನಿಟ್ಟಿನಲ್ಲಿ ನಾವೇಲ್ಲರೂ ಅರಣ್ಯ ಇಲಾಖೆಗೆ ಸಹಕಾರ ನೀಡೋಣ ಎಂದರು
ಕಾರ್ಯಕ್ರಮದಲ್ಲಿ ಅರಣ್ಯ ಸಮಿತಿ ಸದಸ್ಯರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...