ಕಾಡಾನೆ ಓಡಿಸಲು ಹೋಗಿ ಹೊಂಡಕ್ಕೆ ಬಿದ್ದು ಕಣ್ಣು ಕಳೆದುಕೊಂಡ ರೈತ

Source: sonews | By Staff Correspondent | Published on 23rd November 2017, 11:04 PM | Coastal News | Don't Miss |

ಮುಂಡಗೋಡ : ಕಾಡಾನೆಗಳನ್ನುಓಡಿಸಿ ತನ್ನ ಗದ್ದೆಯನ್ನು ಸಂರಕ್ಷೀಸಲು ಹೋದ ರೈತನೊಬ್ಬ ಹೊಂಡದಲ್ಲಿ ಬಿದ್ದು ಕಣ್ಣು ಕಳೆದುಕೊಂಡ ಘಟನೆ ತಾಲೂಕಿನ ಹನುಮಾಪುರ ಗ್ರಾಮದಲ್ಲಿ ನಡೆದಿದೆ. 
ಹನುಮಾಪುರ ಗ್ರಾಮದ ಕೆಂಗಪ್ಪ ಗುರಪ್ಪ ಮಹಾರಾಜಪೇಟೆ(55) ಎಂಬವನೆ ಕಣ್ಣು ಕಳೆದುಕೊಂಡ ರೈತನಾಗಿದ್ದಾನೆ. ಎಂಟಕ್ಕೂ ಹೆಚ್ಚು ಕಾಡಾನೆಗಳು ರಾತ್ರಿ ಹನುಮಾಪುರ ಗ್ರಾಮದ ಸನಿಹದ ಗದ್ದೆಗೆ ದಾಳಿ ನಡೆಸಿವೆ ಗ್ರಾಮಸ್ಥರೆಲ್ಲರೂ ಸೇರಿ ಪಟಾಕಿ ಸಿಡಿಸಿ ಕಾಡಾನೆಗಳನ್ನು ಓಡಿಸಲು ಮುಂದಾದಾಗ ಜನರ ಕೂಗಾಟಕ್ಕೆ ಕಾಡನೆಯೊಂದು ತಿರುಗಿ ಜನರತ್ತ ಬಂದಿದೆ. ಕೆಂಗಪ್ಪ ಪ್ರಾಣ ರಕ್ಷಣೆಗೆಓಡಿ ಹೋಗುತ್ತಿರುವಾಗ ಅರಣ್ಯದಲ್ಲಿನ ಹೊಂಡದಲ್ಲಿ ಬಿದ್ದಿದ್ದಾನೆ. ಪ್ರಜ್ಞಾನಹಿನ ಸ್ಥಿತಿಯಲ್ಲಿಯೇ ಒಂದು ರಾತ್ರಿ ಕಳೆದಿದ್ದಾನೆ ಮನೆಗೆ  ಬಾರದೇ ಇರುವುದರಿಂದ ಮನೆಯವರು ಹುಡುಕಾಟ ನಡೆಸಿದ್ದಾರೆ ಸಂಜೆ ವೇಳೆ ಅರಣ್ಯದ ಹೊಂಡದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಹಾಗೂ ಕೆಂಗಪ್ಪನ ಕಣ್ಣಿಗೆ ಕಟ್ಟಿಗೆ ತುಂಡು ತಾಗಿ ಗಾಯವಾಗಿರುವುದು ಕಂಡುಬಂದಿದೆ
ತಕ್ಷಣವೇ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಕಿಮ್ಸ್‍ಗೆ ದಾಖಲಿಸಲಾಗಿದೆ.  ಕಣ್ಣಿಗೆ ಬಲವಾದ ತಿವಿತ ಆಗಿರುವುದರುವದರಿಂದ ಕಣ್ಣು ಕಾಣದಾಗುತ್ತದೆ ಎಂದು ವೈದ್ಯರು ತಿಳಿಸದ್ದಾರೆ ವಿಷಯ ತಿಳಿಯುತ್ತಿದ್ದಂತೆ ಕಾತೂರ ಆರ್ ಎಫ ಒ ಮಹೇಶ ಹಾಗೂ ಉಪವಲಯ ಅರಣ್ಯಾಧಿಕಾರಿ ನಾಗರಜ ಕಲಾಲ ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿ. ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳಿ ಕಿಮ್ಸಗೆ ದಾಖಲಿಸಿದ್ದಾರೆ.  

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...