ಮುಂಡಗೋಡ: ಶಾಂತಿಯಿಂದ ಈದ್ ಮಿಲಾದ್  ಆಚರಣೆ

Source: sonews | By Staff Correspondent | Published on 3rd December 2017, 12:28 AM | Coastal News | Don't Miss |

ಮುಂಡಗೋಡ : ಪ್ರಪಂಚಕ್ಕೆ ಶಾಂತಿ ಹಾಗೂ ಸಹೋದರತೆ ಸಂದೇಶ ಸಾರಿರುವ ಪ್ರವಾದಿ ಮುಹಮ್ಮದ ಪೈಗಂಬರ ರ ಜನ್ಮದಿನೋತ್ಸವ ಈದ್ಮಿಲಾದ್ ನ್ನು ಇಲ್ಲಿನ ಮುಸ್ಲೀಂ ಬಾಂದವರು ಶನಿವಾರ ಶೃದ್ಧಾ ಭಕ್ತಿ ಶಾಂತಿ ಯಿಂದ ಆಚರಿಸಿದರು.


ಬೆಳಗ್ಗೆ 9.30 ಕ್ಕೆ ಮುಸ್ಲೀಂ ಬಾಂಧವರು ಯಲ್ಲಾಪುರ ರಸ್ತೆಯ ನೂರಾನಿ ಮಸ್ಜೀದ ಹತ್ತಿರ  ಶಾಂತಿಯ ಸಂದೇಶ ಸಾರುವ ಶ್ವೇತ ಬಟ್ಟೆಗಳನ್ನು ಧರಿಸಿ ಜಮಾವಣೆಗೊಂಡು ಮೆರವಣಿಗೆ ಹೊರಟರು ಮೆರವಣಿಗೆಯಲ್ಲಿ ಪಟ್ಟಣದ ಐದು ಮಸ್ಜೀದಿಗಳ  ಮುಸ್ಲೀಂ ಬಾಂಧವರು ಭಾಗವಹಿಸಿ ಮೆರವಣಿಗಿಗೆ ರಂಗು ತಂದರು. ಮೆರವಣಿಗೆಯಲ್ಲಿ ನಿರೀಕ್ಷಿಗೂ ಮೀರಿ ಮುಸ್ಲೀಂ ಬಾಂದವರು ಭಾಗವಹಿಸಿದ್ದರು. ಮೆರವಣಿಗೆಯಲ್ಲಿ  ಪ್ರವಾದಿ ಮಹ್ಮದ ಪೈಗಂಬರರು ಸಾರಿದ ಲೋಕಹಿತ ನುಡಿಗಳನ್ನು ನುಡಿಯಲಾಗುತ್ತಿತ್ತು ಮೆರವಣಿಗೆಯು ನೂರಾನಿ ಮಸ್ಜೀದ ದಿಂದ ಹೊರಟು ವಾಯ್.ಬಿ.ರಸ್ತೆಯಿಂದ ಬಸವನಬೀದಿ ಹುಬ್ಬಳ್ಳಿ ಶಿರಸಿ ರಸ್ತೆ, ಬಂಕಾಪುರ ರಸ್ತೆ ಕೃಷಿ ಇಲಾಖೆ ರಸ್ತೆ, ನೆಹರು ನಗರ ಬಡವಾಣೆ ಇಂದಿರಾನಗರ ಬಡವಾಣೆ ಟಿ.ಬಿ ರಸ್ತೆ ಯಿಂದ ಶಿರಸಿರಸ್ತೆ, ಕಲಾಲ ಓಣಿ  ರಸ್ತೆ ನೂರಾನಿ ಓಣಿ ಯಲ್ಲಾಪುರ ರಸ್ತೆ ಹಳೂರ ಓಣಿ, ಕಿಲ್ಲೆ ಓಣಿಯಿಂದ ನೂರಾನಿ ಮಸ್ಜೀದ ಹತ್ತಿರ ಮೆರವಣಿಗೆಯು ಮುಕ್ತಾಯವಾಯಿತು
ಮೆರವಣಿಗೆಯಲ್ಲಿ ಬೈಕ್ ರ್ಯಾಲಿ ಗಮನ ಸೆಳೆಯಿತು. ಮೆರವಣಿಗೆಯಲ್ಲಿ ಭಾಗವಹಿಸಿದವರು ದಾರಯುದ್ದಕ್ಕೂ ಅಕ್ಕಪಕ್ಕದ ಅಂಗಡಿಕಾರರಿಗೆ ಸಾರ್ವಜನಿಕರಿಗೆ ಸಿಹಿ ಹಂಚಿದರು
ಮುಸ್ಲೀಂ ಧುರಿಣ ಬಿ.ಎಫ್.ಬೆಂಡಿಗೇರಿ, ªನಾಜೀಮಆಲಾ ಎಮ್.ಕೆ.ಪಠಾಣ, ನೂರಾನಿ ಮಸ್ಜೀದ ಅಧ್ಯಕ್ಷ ಸಲೀಂ ನಂದಿಗಟ್ಟಿ, ಮದೀನಾ ಮಸ್ಜೀದ ಅಧ್ಯಕ್ಷ ನೂರಹ್ಮದ ಗಡವಾಲೆ, ರಜಾಕೀಯಾ ಮಸ್ಜೀದ ಅಧ್ಯಕ್ಷ ನಜೀರ ಅಹ್ಮದ ದರ್ಗಾವಾಲೆ, ಮಕ್ಬೂಲಿಯಾ ಮಸ್ಜೀದ ಅಧ್ಯಕ್ಷ ರಜಾಕ ಹಾಗೂ ಬಿಲಾಲ ಮಸ್ಜೀದಿನ ಜಾಫರ ಹಂಡಿ ಹಾಗೂ ಆಯಾ ಮಸ್ಜೀದಿಗಳ ಜಮಾತ್ ಸದಸ್ಯರು ಹಾಗೂ ಮದರಸಾ ಅಧ್ಯಕ್ಷ ಹಾಗೂ ಸದಸ್ಯರು ಮೆರಣಿಗೆಯ ಉಸ್ತುವಾರಿಯನ್ನು ಮಹಿಸಿದ್ದರು

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...