ಮಾರಣಾಂತಿಕ ಹಲ್ಲೆ ಎಂಟು ಜನರ ಮೇಲೆ ಪ್ರಕರಣ ದಾಖಲು

Source: S O News service | By Staff Correspondent | Published on 25th October 2016, 7:08 PM | Coastal News | Don't Miss |


ಮುಂಡಗೋಡ ; ತಾಲೂಕಿನ ಪಾಳಾ ಗ್ರಾಮ ಪಂಚಾಯತ ವ್ಯಾಪ್ತಿಯ ಕೊಡಂಬಿಯಲ್ಲಿ ರಸ್ತೆ ಅಗಲಿಕರಣ ಕೆಲಸಕ್ಕೆ ಅಡ್ಡಿ ಪಡಿಸಿದ ವ್ಯೆಕ್ತಿಯ ಮೇಲೆ ಮಾರಣಾಂತಿಕ ಹಲ್ಲೆ ಫಿರ್ಯಾದಿ ಸಹೊದರನು ಸೇರಿ ಎಂಟು ಜನರ ಮೇಲೆ ಪ್ರಕರಣ ದಾಖಲು.
ವಿವರ; ಫಿರ್ಯಾದಿ ನಾಗರಾಜ ವೆಂಕಪ್ಪಾ ಕಟ್ಟಿಮನಿ ಕೊಡಂಬಿಯವರಾಗಿದ್ದು ನಿನ್ನೆ ಹನ್ನೊಂದು ಘಂಟೆಯ sಸುಮಾರಿಗೆ ಇವರ ಜಾಗೆಯ ಸರ್ವೇ ನಂಬರ ಒಂದರಿಂದಾ ೪೨ ರಲ್ಲಿಯ ಪ್ಲಾಟ ನಂಬರ ೪೯ ರಲ್ಲಿ ೭ ಎಕರೆ ಜಮೀನಿನ ಪಕ್ಕದಲ್ಲಿ ಹಾದು ಹೋಗಿರುವ ಪ್ರಧಾನ ಮಂತ್ರಿ ಸಡಕ್ ಯೋಜನೆಯಲ್ಲಿ ರಸ್ತೆ ಮುಂಜುರಾಗಿದ್ದು ರಸ್ತೆಯ ಅಗಲಿಕರಣ ಕಾಮಗಾರಿ ನಡೆಯುತ್ತಿದ್ದು. ಸದರಿ ಕಾಮಗಾರಿಯ ವಿಷಯ ತಿಳಿದು ಕೊಳ್ಳಲು ಹೋದಾಗ ತನ್ನ ಸಹೋದರನಾದ ಪರುಶುರಾಮ ಕಟ್ಟಿಮನಿ ಮತ್ತು ಅವನ ಸಂಗಡಿಗರು ಸೇರಿ ನನ್ನ ಹೊಲದಲ್ಲಿ ಅಕ್ರಮ ಪ್ರವೇಶ ಮಾಡಿದ್ದಲ್ಲದೆ ನನ್ನ ಹೊಲದಲ್ಲಿ ಬೆಳೆಸಿರುವ ನೀಲಗಿರಿ ಗಿಡಗಳನ್ನು ಕಡಿದು ರಸ್ತೆ ಅಗಲಿಕರಣ ಮಾಡುತ್ತಿದ್ದವರಿಗೆ ನಾಗರಾಜ ಕೇಳಿದ್ದಕ್ಕೆ.ಆರೋಪಿತರಲ್ಲಿ ೬ ಜನರು ಆವಾಚ್ಯವಾಗಿ ಬೈದು ಪ್ರಾಣ ಬೆದರಿಕೆ ಹಾಕಿ ೭ ನೇಯವನು ಮರ ಕಡಿಯುವ ಕಟಿಂಗ ಮಶೀನಿನಿಂದ ಮರ ಕಡಿಯುತ್ತಿದ್ದಾಗ. ಏಕೆ ಮರಗಳನ್ನು ಕಡಿಯುತ್ತಿದ್ದಿ ಅಂತಾ ತಡೆಯಲು ಹೋದಾಗ  ತನ್ನ ಸಹೋದರ ಪರಶರಾಮ ಕೊಲೆ ಮಾಡುವ ಉದ್ದೇಶದಿಂದಾ ಕತ್ತಿಯಿಂದ ಮಾರಣಾಂತಿಕವಾಗಿ ಹೊಡೆದು ಗಾಯಪಡಿಸಿರುತ್ತಾರೆಂದು ಎಂಟು ಜನರ ಮೇಲೆ ದೂರು ನೀಡಿರುತ್ತಾರೆ ಆರೋಪಿತರನ್ನು ಪರುಶುರಾಮ ಕಟ್ಟಿಮನಿ,ಮಂಜುನಾಥ ಬಾಸುರ,ರವಿ ಬೆಣಗೇರಿ,ಹನುಮಂತ ಮೇಣಸಿನಕಾಯಿ,ಶಾಂತಪ್ಪಾ ಅಕ್ಕಿವಳ್ಳಿ,ಪರುಶುರಾಮ ಬಾಸುರ,ಸಹದೇವಪ್ಪಾ ಅಕ್ಕಿವಳ್ಳಿ,ಗೌಸ ಆಲದಕಟ್ಟಿ, ಎಂದು ಹೇಳಲಾಗಿದೆ ಇವರೆಲ್ಲರೂ ಕೋಡಂಬಿ ಗ್ರಾಮದವರೆಂದು ಹೇಳಲಾಗಿದೆ ಎಂಟು ಜನರ ಮೇಲೆ ಮುಂಡಗೋಡ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ 
 

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...