5 ವರ್ಷದಿಂದ ಹೊಂಡಮಯವಾದ ಚೌಥನಿ-ಮುಂಡಳ್ಳಿ ಮಾರ್ಗದ ರಸ್ತೆಗೆ ಸಿಗದ ಮುಕ್ತಿ 

Source: so news | By Manju Naik | Published on 13th June 2018, 7:37 PM | Coastal News | Don't Miss |

ಭಟ್ಕಳ:ಕಳೆದ 5 ವರ್ಷದಿಂದ ಇಲ್ಲಿನ ಚೌಥನಿಯಿಂದ ಮುಂಡಳ್ಳಿಗೆ ತೆರಳುವ ರಸ್ತೆಯೂ ಸಂಪುರ್ಣ ಹಾಳಾಗಿ ಹೊಂಡವಾಗಿದ್ದು, ಇಳಿಜಾರು ಪ್ರದೇಶವಾಗಿದ್ದರಿಂದ 1 ಅಡಿಯಷ್ಟು ಹೊಂಡದಿಂದ ವಾಹನ ಸವಾರರಿಗೆ ತಿರುಗಾಡುವುದು ಸವಾಲಾಗಿದೆ. ಈ ಹೊಂಡಮಯವಾದ ರಸ್ತೆಯಿಂದ ಪ್ರತಿ ವರ್ಷ ರಸ್ತೆಯ ಮೇಲೆ ನೀರು ನಿಲ್ಲುತ್ತಿದ್ದು, ನೀರು ಹರಿದು ಹೋಗಲು ಯಾವುದೇ ಚರಂಡಿ ವ್ಯವಸ್ಥೆ ಇಲ್ಲಿದೆ ಪಾದಚಾರಿಗಳು ಕೆಸರಿನ ನೀರಿನಲ್ಲಿಯೇ ತಿರುಗಾಡಬೇಕಾಗಿದೆ. 

ಸಾಕಷ್ಟು ವರ್ಷಗಳ ಈ ಚರಂಡಿ ವ್ಯವಸ್ಥೆಯಿದ್ದು, ಪಂಚಾಯತನಿಂದ ಸರಿಯಾದ ಕಾಲಕ್ಕೆ ಮಾಡದ ನಿರ್ವಹಣೆಯಿಂದ ಚರಂಡಿ ಸಂಪೂರ್ಣ ಮುಚ್ಚಿ ಹೋಗಿದೆ ಎನ್ನುತ್ತಾರೆ ಸ್ಥಳಿಯರು. ಪ್ರತಿನಿತ್ಯ ಇಲ್ಲಿನ ಸ್ಥಳಿಯ ಗ್ರಾ.ಪಂ.ಗೆ ಜನರು, ವಾಹನ ಸವಾರರು ಹಿಡಿ ಶಾಪ ಹಾಕಿ ತಿರುಗಾಡುತ್ತಿದ್ದರು, ಸ್ಥಳಕ್ಕೆ ಬಂದು ಸಮರ್ಪಕ ಪರಿಹಾರ ಮಾಡದೇ ಸುಮ್ಮನಿರುವುದು ವಿಪರ್ಯಾಸವಾಗಿದೆ. ಈ ಹೊಂಡಮಯ ರಸ್ತೆಯಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಈ ಮಾರ್ಗದಲ್ಲಿ ತೆರಳಲು ಕಷ್ಟವಾಗುತ್ತಿದ್ದು, ಶಾಲಾ ಸಮವಸ್ತ್ರ ಕೊಳೆಯಾಗುತ್ತದೆಂಬ ಕಿರಿಕಿರಿಯಲ್ಲಿಯೇ ಸಂಚರಿಸಬೇಕಾಗಿದೆ. ರಸ್ತೆಯ ಪಕ್ಕದಲ್ಲಿರುವ ಮನೆಗಳಿಗೆ ಹೊಂಡಮಯ ರಸ್ತೆಯಲ್ಲಿ ನಿಲ್ಲುವ ಕೆಸರಿನ ನೀರಿನಿಂದ ಅವರ ಮನೆಯ ಬಾವಿಗಳಿಗೆ ಈ ನೀರು ಸೇರುತ್ತಿದ್ದು, ಕುಡಿಯಲು ಸೂಕ್ತವಾಗಿಲ್ಲವಾಗದೇ ಬೇರೆ ಮನೆಯಿಂದ ನೀರು ತಂದು ಕುಡಿಯುವ ಸ್ಥಿತಿ ಎದುರಾಗಿದೆ. 
ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ಸ್ಥಳಿಯರೆಲ್ಲ ಸೇರಿ ಪಂಚಾಯತಗೆ ಮುತ್ತಿಗೆ ಹಾಕಿ ಬೀಗ ಹಾಕಿ ಪ್ರತಿಭಟಿಸಲು ತೆರಳಿದ್ದು, ಪಂಚಾಯತ್‍ನಲ್ಲಿ ಪಿಡಿಓ ಮಾತ್ರ ಇರುವುದರಿಂದ ಪಿಡಿಓ ಸ್ಥಳಕ್ಕೆ ಕರೆಯಿಸಿದರು. ನಂತರ ಸ್ಥಳಿಯರೆ ರಸ್ತೆಯ ನೀರು ಸರಾಗವಾಗಿ ಹೋಗುವಂತೆ ವ್ಯವಸ್ಥೆ ಮಾಡಿದ್ದು, ಮುಂದಿನ ಕ್ರಮಕ್ಕೆ ಪಂಚಾಯತ್ ಉತ್ತರ ಏನು ಎಂಬುದನ್ನು ಪ್ರಶ್ನಿಸಿದರು. ಈ ಮಧ್ಯೆ ಪಿಡಿಓ ಹಾಗೂ ಸಾರ್ವಜನಿಕರ ಮಧ್ಯೆ ಮಾತಿನ ಚಕಮಕಿ ಉಂಟಾಯಿತು. ನಂತರ ಸಾರ್ವಜನಿಕರ ಮಧ್ಯಸ್ಥಿಕೆಯಲ್ಲಿ ಜೆಸಿಬಿ ಬಳಸಿ ರಸ್ತೆಯ ನೀರು ಸರಾಗವಾಗಿ ಹರಿಯಲು ವ್ಯವಸ್ಥೆ ಕಲ್ಪಿಸಲಾಯಿತು. ಸ್ಥಳದಲ್ಲಿ ಗ್ರಾಮೀಣ ಠಾಣೆ ಪಿಎಸೈ ಹಾಗೂ ಸಿಬ್ಬಂದಿಗಳು ಇದ್ದರು. 

Read These Next

ಭಟ್ಕಳ ಶಿರಾಲಿ,ಬೆಂಗ್ರೆ ಭಾಗಗಳಲ್ಲಿ ಗದ್ದೆ ನಾಟಿ ಕಾರ್ಯ ಆರಂಭ:ಪೇಟೆಗೆ ಮುಖ ಮಾಡಿ ನಾಟಿಗೆ ನೋ ಎನ್ನುತ್ತಿರುವ ನಾರಿಯರು

ಭಟ್ಕಳ: ಮುಂಗಾರು ಮಳೆಯಿಂದಾಗಿ ತಾಲೂಕಿನಲ್ಲಿ ಕೃಷಿ ಭೂಮಿ ತಂಪಾಗಿದೆ. ಇದ್ದ ತುಂಡು ಭೂಮಿಯಲ್ಲಿಯೇ ಅನ್ನ ಹುಡುಕಾಡುವ ಇಲ್ಲಿನ ರೈತನಿಗೆ ...

ಮೋದಿ ತಂಡದೊಂದಿಗೆ ಯೂರೋಪ್ ಪ್ರವಾಸ ಕೈ ತೆರಳುವ:ಕನ್ನಡಿಗ ಐ.ಎಫ್.ಎಸ್.ಅಧಿಕಾರಿ ಎ.ಟಿ.ದಾಮೋದರ ನಾಯ್ಕ 

ಭಟ್ಕಳ:ಲಕ್ಷದ್ವೀಪದಲ್ಲಿ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಭಟ್ಕಳ ಗಡಿಭಾಗದ ನಿವಾಸಿ ಐ.ಎಫ್.ಎಸ್. ಅಧಿಕಾರಿ ...