ಮೊಹ್ಸಿನ್ ಶೇಖ್ ಹತ್ಯೆ ಪ್ರಕರಣ: ಹಿಂದೂ ರಾಷ್ಟ್ರ ಸೇನೆಯ ಸದಸ್ಯರಿಗೆ ಜಾಮೀನು

Source: S O News service | By Staff Correspondent | Published on 17th January 2017, 11:03 PM | National News | Don't Miss |

ಮುಂಬೈ: ಧರ್ಮದ ಹೆಸರಿನಲ್ಲಿ ಉದ್ರೇಕಿತರಾಗಿ ಹತ್ಯೆಯನ್ನು ಮಾಡಿದ್ದಾರೆ ಎಂದು ಬಾಂಬೆ ಹೈಕೋರ್ಟ್ ಜಡ್ಜ್ ಮುಸ್ಲಿಂ ವ್ಯಕ್ತಿ ಮೊಹ್ಸಿನ್ ಶೇಖ್ ಹತ್ಯೆ ಮಾಡಿರುವ ಹಿಂದೂ ರಾಷ್ಟ್ರ ಸೇನೆಯ ಮೂವರು ಸದಸ್ಯರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಹೈಕೋರ್ಟ್ ಆದೇಶದಿಂದ ನಿರಾಸೆಗೊಂಡ ಮೊಹ್ಸಿನ್ ಶೇಖ್ ಪೋಷಕರು ಸುಪ್ರೀಂ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

 2014 ರಲ್ಲಿ ಪುಣೆಯಲ್ಲಿ ಹಿಂದೂ ರಾಷ್ಟ್ರ ಸೇನೆಯ ಸದಸ್ಯರು ಮೊಹ್ಸಿನ್ ಶೇಖ್ ನನ್ನು ಹಾಕಿ ಸ್ಟಿಕ್ ಗಳು ಮತ್ತು ಕ್ಲಲುಗಳಿಂದ ಹೊಡೆದು ಅಮಾನುಷವಾಗಿ ಹತ್ಯೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿಂದೂ ರಾಷ್ಟ್ರ ಸೇನೆಯ 21 ಮಂದಿಯನ್ನು ಪೊಲೀಸರು ಬಂಧಿಸಿದ್ದರು.

 ಶಿವಾಜಿ, ಶಿವಸೇನಾ ಮುಖ್ಯಸ್ಥ ಬಾಲಾಠಾಕ್ರೆ ವಿರುದ್ಧ ಪೋಸ್ಟ್ ಗಳನ್ನು ಹಾಕಿದ್ದಾನೆ ಎಂದು ಆರೋಪಿಸಿ ದುಷ್ಕರ್ಮಿಗಳು ಹತ್ಯೆ ಮಾಡಿದ್ದರು.

ವಿಜಯ್ ರಾಜೇಂದ್ರ, ಗಣೇಶ್, ಅಜಯ್ ದಿಲೀಪ್ ನನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದು, ಈ ವೇಳೆ ಜಡ್ಜ್ , ಹತ್ಯೆಯಾದವರು ಇನ್ನೊಂದು ಧರ್ಮದವರಾಗಿದ್ದು, ಆರೋಪಿಗಳು ಧರ್ಮದ ಹೆಸರಿನಲ್ಲಿ ಉದ್ರೇಕಿತರಾಗಿ ಹತ್ಯೆಯನ್ನು ಮಾಡಿದ್ದಾರೆ. ಮತ್ತು ಆರೋಪಿಗಳಿಗೆ ಬೇರೆ ಯಾವುದೇ ರೀತಿಯ ಕ್ರಿಮಿನಲ್ ಹಿನ್ನೆಲೆಗಳಿಲ್ಲ ಎಂದು ಜಸ್ಟೀಸ್ ಮೃದುಲಾ ಹೇಳಿದ್ದಾರೆ.

ಮತ್ತೊಂದು ಧರ್ಮದ ಮುಗ್ಧ ವ್ಯಕ್ತಿಯ ಕೊಲೆಗೆ ಪ್ರಚೋದನಕಾರಿ ಭಾಷಣ ಅನುಮತಿಯೇ ಎಂದು ಪ್ರಶ್ನಿಸಿರುವ ಮೊಹ್ಸಿನ್ ತಂದೆ ಮೂವರು ಆರೋಪಿಗಳನ್ನು ಹತ್ಯೆ ನಡೆದ ಸ್ಥಳದಿಂದ ಬಂಧಿಸಲಾಗಿದೆ. ಆದರೆ ಹೈಕೋರ್ಟ್ ಆದೇಶ ತನಗೆ ನಿರಾಸೆ ತಂದಿದ್ದು ಇದನ್ನು ಪ್ರಶ್ನಿಸಿ ಸುಪ್ರೀಂ ಮೊರೆ ಹೋಗುವುದಾಗಿ ತಿಳಿಸಿದ್ದಾರೆ.

 

Read These Next

ಪ್ರಧಾನಿ ಮೋದಿಯಿಂದ ದ್ವೇಷ ಭಾಷಣ! ಚುನಾವಣಾ ಆಯೋಗದ ನಿಷ್ಕ್ರಿಯತೆಗೆ ಪ್ರತಿಪಕ್ಷಗಳ ಆಕ್ರೋಶ

ಪ್ರಧಾನಿ ನರೇಂದ್ರ ಮೋದಿಯವರು ಮುಸ್ಲಿಮ್ ಸಮುದಾಯದ ವಿರುದ್ದ ಆಕ್ಷೇಪಕಾರಿ ಭಾಷಣಗೈದು ತೀವ್ರ ವಿವಾದಕ್ಕೆ ಗುರಿಯಾಗಿದ್ದಾರೆ. ...

ಅಣಕು ಮತದಾನದ ವೇಳೆ ಬಿಜೆಪಿಗೆ ಮತ

ಕೇರಳದ ಕಾಸರಗೋಡಿನಲ್ಲಿ ಅಣಕು ಮತದಾನದವೇಳೆ ಇವಿಎಂಗಳು ತಪ್ಪಾಗಿ ಬಿಜೆಪಿ ಪರವಾಗಿ ಮತಗಳನ್ನು ದಾಖಲಿಸಿವೆ ಎಂದು ಅರ್ಜಿದಾರರೊಬ್ಬರು ...

ಚುನಾವಣಾ ಪ್ರಕ್ರಿಯೆಯಲ್ಲಿ ಪಾವಿತ್ರ್ಯವಿರಬೇಕು; ಆಯೋಗಕ್ಕೆ ಹೇಳಿದ ಸುಪ್ರೀಂ ಕೋರ್ಟ್

ಚುನಾವಣಾ ಪ್ರಕ್ರಿಯೆ ಯಲ್ಲಿ ಪಾವಿತ್ರ್ಯವಿರಬೇಕು ಎಂದು ಚುನಾವಣಾ ಆಯೋಗಕ್ಕೆ ಇಂದು ಸುಪ್ರೀಂ ಕೋರ್ಟ್ ಹೇಳಿದೆಯಲ್ಲದೆ ಸ್ವತಂತ್ರ ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...