ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡನಿಂದ ಹೆಚ್ಚಿನ ಪ್ರಯೋಜನವಿದೆ: ಅನಿಲ್

Source: S O News Service | By I.G. Bhatkali | Published on 14th June 2018, 3:20 PM | Coastal News | Don't Miss |

ಭಟ್ಕಳ: ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಆರೋಗ್ಯ ಕಾರ್ಡ ಯೋಜನೆ ಜನಸಾಮಾನ್ಯರಿಗೆ ಅನಿವಾರ್ಯ ಸಂದರ್ಭದಲ್ಲಿ ರಕ್ಷಣೆ ನೀಡುವ ಯೋಜನೆಯಾಗಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಮಾರ್ಕೆಟಿಂಗ್ ವಿಭಾಗದ ವ್ಯವಸ್ಥಾಪಕ ಅನಿಲ್ ಜಾಕೋಬ್ ಹೇಳಿದರು.

 ಅವರು ಇಲ್ಲಿನ ಸೈಂಟ್ ಮಿಲಾಗ್ರಿಸ್ ಸೌಹಾರ್ದ ಸಹಕಾರಿ ಭಟ್ಕಳ ಶಾಖಾ ಕಚೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಮಣಿಪಾಲ ಆರೋಗ್ಯ ಕಾರ್ಡ ಯೋಜನೆಯು 2017ರ ವೇಳೆಗೆ 2.54 ಲಕ್ಷ ಸದಸ್ಯರ ದಾಖಲಾತಿಯನ್ನು ಹೊಂದಿದೆ. ಈ ವರ್ಷ 4 ಲಕ್ಷಕ್ಕೂ ಅಧಿಕ ಸದಸ್ಯರನ್ನು ಹೊಂದುವ ಗುರಿಯನ್ನು ಹೊಂದಿದ್ದೇವೆ.

ಉತ್ತರಕನ್ನಡ ಜಿಲ್ಲೆಯಲ್ಲಿ 60 ಸಾವಿರ ಜನರು ಮಣಿಪಾಲ ಕಾರ್ಡದಾರರಾಗಿದ್ದು, ಸೈಂಟ್ ಮಿಲಾಗ್ರಿಸ್ ಸಹಕಾರಿ ಸಂಘದಿಂದಲೇ 25 ಸಾವಿರದಷ್ಟು ಜನರು ಕಾರ್ಡ ಪಡೆದುಕೊಂಡಿದ್ದಾರೆ. ಈ ಸಂಸ್ಥೆಯ ಪ್ರತಿ ಶಾಖೆಯಲ್ಲಿಯೂ ನೊಂದಣಿಗೆ ಅವಕಾಶವಾಗುವಂತೆ ಕೌಂಟರ್‍ನ್ನು ತೆರೆಯಲಾಗಿದೆ. ಕಾರ್ಡುದಾರರು ಮಣಿಪಾಲ ಆಸ್ಪತ್ರೆಯಲ್ಲಿ ಲಭ್ಯವಿರುವ ವೈದ್ಯರು, ಸಮಯದ ಬಗ್ಗೆಯೂ ಇಲ್ಲಿ ಮಾಹಿತಿಯನ್ನು ಪಡೆದುಕೊಳ್ಳಬಹುದು. ಜನರು ತಮಗೆ ಹಿಂದೆ ಇದ್ದ ಕಾಯಿಲೆ, ರಸ್ತೆ ಅಪಘಾತದಂತಹ ಸಂದರ್ಭದಲ್ಲಿಯೂ ಮಣಿಪಾಲ ಕಾರ್ಡನ ಪ್ರಯೋಜನವನ್ನು ಕಂಡುಕೊಳ್ಳಬಹುದು.

ಅಲ್ಲದೇ ವೈದ್ಯರ ಸಮಾಲೋಚನೆಗೆ 50%, ಪ್ರಯೋಗಾಲಯ ಪರೀಕ್ಷೆ, ಸಿ.ಟಿ., ಎಮ್‍ಆರ್‍ಐ ಸ್ಕ್ಯಾನ್, ಅಲ್ಟ್ರಾ ಸೌಂಡ್, ಹೊರರೋಗಿ ವಿಧಾನಗಳಲ್ಲಿ 25%, ಸಾಮಾನ್ಯ ವಾರ್ಡಿನಲ್ಲಿ ಒಳರೋಗಿಯಾದಲ್ಲಿ ಉಪಯೋಗವಾಗುವ ವಸ್ತುಗಳನ್ನು ಹೊರತುಪಡಿಸಿ 25% ಮತ್ತು ಔಷಧಾಲಯಗಳಲ್ಲಿ 10%ವರೆಗೆ ರಿಯಾಯಿತಿ ಇರುತ್ತದೆ. ಈ ಕಾರ್ಡನ್ನು ಒಂದು ವರ್ಷಕ್ಕೆ ಯಾವುದೇ ರೀತಿಯ ಚಿಕಿತ್ಸೆಗಳಿಗೆ ಅನೇಕ ಬಾರಿ ಬಳಸಬಹುದು. ಒಬ್ಬ ಸದಸ್ಯರಿಗೆ ದಾಖಲಾತಿ ಶುಲ್ಕ ರು.250 ಮತ್ತು ಕುಟುಂಬಕ್ಕೆ ರು.520 ಆಗಿದ್ದು,

ಹೆಚ್ಚಿನ ಮಾಹಿತಿಗಾಗಿ ಸೈಂಟ್ ಮಿಲಾಗ್ರಿಸ್ ಸೌಹಾರ್ದ ಭಟ್ಕಳ 08385-222300, ಸೈಂಟ್ ಮಿಲಾಗ್ರಿಸ್ ಸೌಹಾರ್ದ ಮುರುಡೇಶ್ವರ 08385-268800ನ್ನು ಸಂಪರ್ಕಿಸ ಬಹುದು ಎಂದು ವಿವರಿಸಿದರು.

ಜಾಯ್‍ಸ್ಟಿನ್ ಪಿಂಟೋ, ಮೈಕೆಲ್ ಡಿಸೋಜಾ, ಗಣೇಶ ಕಂಚುಗಾರ ಮೊದಲಾದವರು ಉಪಸ್ಥಿತರಿದ್ದರು.

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...