ವ್ಯಕ್ತಿ ಮೇಲೆ ಹಲ್ಲೆ: ಮೂರು ಮಂದಿ ಆರೋಪಿಗಳ ಬಂಧನ

Source: so news | By MV Bhatkal | Published on 26th March 2019, 12:29 AM | Coastal News | Don't Miss |

 

ಭಟ್ಕಳ: ಎಂಜಲು ಉಗಿದಿದ್ದಾನೆಂಬ ವಿಚಾರಕ್ಕೆ ಇಲ್ಲಿನ ಮುಡೇಶ್ವರದ ನ್ಯಾಶನಲ ಕಾಲೋನಿ ಬಳಿ ಓರ್ವನ ಮೇಲೆ 6 ಮಂದಿ  ಮಾರಣಾಂತಿಕ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿರುವ ಬಗ್ಗೆ ದೂರುದಾರ, ಹಲ್ಲೆಗೊಳಗಾದ ವ್ಯಕ್ತಿ ಅಬ್ದುಲ್ ಸಲಾಂ ಮುಗ್ದುಮ್ ಇಸ್ಮಾಯಿಲ್ ಶಿರೂರು ಎಂಬುವವರು ಶನಿವಾರದಂದು ಮುರ್ಡೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.
ಹಲ್ಲೆಗೊಳಗಾದ ವ್ಯಕ್ತಿ ಮುರ್ಡೇಶ್ವರದ ನ್ಯಾಶನಲ ಕಾಲೋನಿ ನಿವಾಸಿ ಅಬ್ದುಲ್ ಸಲಾಂ ಮುಗ್ದುಮ್ ಇಸ್ಮಾಯಿಲ್ ಶಿರೂರು(24) ಎಂದು ತಿಳಿದು ಬಂದಿದೆ. 
ಹಲ್ಲೆ ನಡೆಸಿದ ಆರೋಪಿಗಳು ಇಲ್ಲಿನ ಮುರ್ಡೇಶ್ವರ ನ್ಯಾಶನಲ್ ಕಾಲೋನಿ ನಿವಾಸಿಗಳಾದ ಮಹಮ್ಮದ್ ಇಫ್ಜಾಲ್ ಅಬ್ದುಲ್ ವದೂದ್ ಖಾಜಿ(24), ಮಹಮ್ಮದ್ ಮಿನಹಾಲ್ ಅಬ್ದುಲ್ ವದೂದ್ ಖಾಜಿ (27), ಅಬ್ದುಲ್ ವದೂದ್ ಖಾಜಿ ಅಬು ಮಹಮ್ಮದ್ ಖಾಜಿ (57), ಅಬ್ದುಲ್ ಮೊಹಿದ್ ತಂದೆ ಶೇಖ್ ಮೊಹಿದ್ದಿನ್ ಖಾಜಿ(19), ಸೋಬಾನ್ ಹಯಾತ್ ಫಕ್ರು(20), ನಿಸಾರ್ ಅಬ್ದುಲ್ ರೆಹಮಾನ್ ಹೆಗಡೆ (45) ಎಂದು ತಿಳಿದು ಬಂದಿದೆ. 
ಶನಿವಾರದಂದು ಸಂಜೆ 6 ಗಂಟೆ ಸುಮಾರಿಗೆ ಅಬ್ದುಲ್ ಸಲಾಂ ನಮಾಜ್ ಮುಗಿಸಿ ವಾಪಸ್ಸು ತೆರಳುತ್ತಿದ್ದ ವೇಳೆ ಆರೋಪಿ ಮಹಮ್ಮದ್ ಮಿನಹಾಲ್ ಅಬ್ದುಲ್ ವದೂದ್ ಖಾಜಿ ಎಂಬುವವನ್ನು ನೋಡಿ ಎಂಜಲು ಉಗಿದಿದ್ದಾನೆ ಎಂಬ ವಿಚಾರದಲ್ಲಿ ಸಂಜೆ 7.30ರ ಸುಮಾರಿಗೆ ಅಬ್ದುಲ್ ಸಲಾಂ ಶಾಮಿಯಾನ ಹಣವನ್ನು ಕೊಡಲು ರಾಮ ಈಶ್ವರ ನಾಯ್ಕ ಎಂಬುವವರ ಟೇಲರ ಅಂಗಡಿ ಹತ್ತಿರ ನಿಂತುಕೊಂಡಿದ್ದ ವೇಳೆ 6 ಮಂದಿ ಆರೋಪಿಗಳು ಅಬ್ದುಲ್ ಸಲಾಂನ ಮೇಲೆ ಏಕಾಏಕಿ ಎರಗಿ ಆತನ ಕುತ್ತಿಗೆಯನ್ನು ಬಲವಾಗಿ ಹಿಡಿದು ಕೈ,ಕಾಲಿನಿಂದ ತುಳಿದು ಕಟ್ಟಿಗೆ ಸ್ಟೂಲನಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿ ಅಬ್ದುಲ್ ಸಲಾಂನ ಕಿಸೆಯಲ್ಲಿದ್ದ 50 ಸಾವಿರ ರೂ. ನಗದು ಹಾಗೂ ಹಲ್ಲೆಯನ್ನು ತಪ್ಪಿಸಲು ಬಂದು ಟೇಲರ ಅಂಗಡಿಯವನಾದ ರಾಮ ನಾಯ್ಕ ಮೇಲು ಹಲ್ಲೆ ನಡೆಸಿ ಆತನ ಅಂಗಡಿಯಲ್ಲಿದ್ದ ವಸ್ತುವನ್ನೆಲ್ಲ ಹೊರಗೆ ಎಸೆದು 20 ಸಾವಿರ ರೂ.ನಷ್ಟು ವಸ್ತುವನ್ನು ಹಾನಿಪಡಿಸಿ ಜೀವ ಬೆದರಿಕೆಯೊಡ್ಡಿ ತೆರಳಿರುವ ಬಗ್ಗೆ ದೂರಿನಲ್ಲಿ ತಿಳಿಸಿದ್ದಾರೆ. 
ತಕ್ಷಣ ಹಲ್ಲೆಗೊಳಗಾದವರು ಸ್ಥಳಿಯ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದಾರೆ. ಹಲ್ಲೆಗೊಳಗಾದ ಅಬ್ದುಲ್ ಸಲಾಂನ ಎದೆ, ಭುಜ ಹಾಗೂ ತುಟಿ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದ್ದು ಹೆಚ್ಚಿನ ತಪಾಸಣೆ ಹಿನ್ನೆಲೆ ಕುಂದಾಪುರ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. 
ಈ ಕುರಿತು ಹಲ್ಲೆಗೊಳಗಾದ ವ್ಯಕ್ತಿ ಅಬ್ದುಲ್ ಸಲಾಂ ಮುರ್ಡೇಶ್ವರ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದು ಸದ್ಯ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.  
ಅಬ್ದುಲ್ ಸಲಾಂ ಮುಗ್ದುಮ್ ಇಸ್ಮಾಯಿಲ್ ಶಿರೂರು ಹಲ್ಲೆಗೊಳಗಾದ ವ್ಯಕ್ತಿ

Read These Next

ಕಾರವಾರ: ಮತದಾನ ಜಾಗೃತಿ ಜಾಥಾ

ಪ್ರತಿಯೊಂದು ಮತವು ದೇಶದ ಭವಿಷ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ನೀವು ನಿಮ್ಮ ಸುತ್ತಲಿನವರಿಗೂ ಮತದಾನ ಜಾಗೃತಿ ಮೂಡಿಸಬೇಕು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...