ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು ಮಾರುತಿ ವೆಗನರ್ ಕಾರ್ ನಡುವೆ ಭೀಕರ ಅಪಫಾತ:ಸ್ಥಳದಲ್ಲೇ ಓರ್ವ ಸಾವು

Source: so news | By Manju Naik | Published on 14th June 2018, 4:33 PM | Coastal News | Don't Miss |

ಭಟ್ಕಳ: ತಾಲ್ಲೂಕಿನ ಮುರ್ಡೇಶ್ವರ ಬೇಲೂರು ಕ್ರಾಸ್ ಬಳಿ ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು ಮಾರುತಿ ವೆಗನರ್ ಕಾರ್ ನಡುವೆ ಭೀಕರ ಅಪಫಾತ  ಸಂಭವಿಸಿದ್ದ ಘಟನೆ ಬುದುವಾರ ಮಧ್ಯ ರಾತ್ರಿ ನಡೆದಿದೆ. ಮಂಗಳೂರು ದಿಂದ ಗಜೇಂದ್ರಗಡ ಕಡೆಗೆ ಚಲಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ.ಬಸ್ ಮತ್ತು  ಭಟ್ಕಳ ದಿಂದ ಕುಮಟಾ ಅಘನಾಶಿನಿ ಕಡೆಗೆ ಮಾರುತಿ ವೆಗನರ್ ಕಾರ್ ಚಲಿಸುವಾಗ ಮುರ್ಡೇಶ್ವರ ಸಮೀಪದ ಬೇಲೂರು ಕ್ರಾಸ್ ಬಳಿ ಕಾರು ಪಕ್ಕದಲ್ಲಿ ನಿಲ್ಲಿಸಿದ ಸಂದರ್ಭದಲ್ಲಿ ಹಿಂಬದಿಯಲ್ಲಿ ಬಂದ್ದ  ಬಸ್ ಚಾಲಕನ ಅತೀವೇಗ ಹಾಗೂ ಅಜಾಗರುಕತೆ ಡಿಕ್ಕಿ ಸಂಭವಿಸಿದ್ದು ಕುಮಟಾ ತಾಲೂಕಿನ ಅಘನಾಶಿನಿಯ ನಿವಾಸಿ ಶೇಕರ ಖಾಮೇಶ್ವರ ನಾಯ್ಕ( 49) ಸ್ಥಳದಲ್ಲೇ ಮೃತಪಟ್ಟಿದ್ದು. ಹಾಗೂ ಮೃತನ ಹೆಂಡತಿ ಇಂದಿರಾ ನಾಯ್ಕ ಹಾಗೂ ಭಾವಮೈದನಾದ ಗೋಪಾಲ ನಾಯ್ಕಈ ಇಬ್ಬರಿಗೂ ಗಾಯಗೊಂಡ ಅವರಿಗೆ ಭಟ್ಕಳ ಸರಕಾರಿ ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗಿದೆ. ಎಂದು ತಿಳಿದು ಬಂದಿದೆ.ಈ ಬಗ್ಗೆ  ಮುರ್ಡೇಶ್ವರ ಠಾಣೆ ಯಲ್ಲಿ ಪ್ರಕರಣ ದಾಖಲು ಆಗಿದೆ.

 

Read These Next