ರಾಜಕೀಯ ಪಕ್ಷಗಳ ಸಭೆ ಸಮಾರಂಭಗಳನ್ನು ಆಯೋಜಿಸಲು ಪೂರ್ವಾನುಮತಿ ಕಡ್ಡಾಯ – ಜಿ. ಸತ್ಯವತಿ

Source: sonews | By sub editor | Published on 3rd April 2018, 12:47 AM | State News | Don't Miss |

ಕೋಲಾರ :  ರಾಜಕೀಯ ಸಭೆ ಸಮಾರಂಭಗಳಾಗಲಿ, ಮುದ್ರಣ, ವಿದ್ಯುನ್ಮಾನ ಅಥವಾ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಚಾರ ಮಾಡಲು ರಾಜಕೀಯ ಪಕ್ಷಗಳು ಪೂರ್ವಾನುಮತಿ ಪಡೆಯುವುದು ಕಡ್ಡಾಯ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿಗಳಾದ ಜಿ.ಸತ್ಯವತಿಯವರು ತಿಳಿಸಿದರು.
    

ಇಂದು ತಮ್ಮ ಕಛೇರಿಯ ನ್ಯಾಯಾಂಗ ಸಭಾಂಗಣದಲ್ಲಿ ಜಿಲ್ಲೆಯ ವಿವಿಧ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ಸಭೆ ನಡೆಸಿ ಅವರು ಈ ಮಾಹಿತಿ ನೀಡಿದರು. ಸಭೆ ಸಮಾರಂಭಗಳ ಆಯೋಜನೆ ಕುರಿತ ಸಂಪೂರ್ಣ ವಿವರಗಳನ್ನು ನಿಗದಿತ ಅರ್ಜಿಯಲ್ಲಿ ನೀಡಬೇಕು. ಸಭೆಯಲ್ಲಿ ಬಳಸಲಾಗುವ ಸಾಮಾಗ್ರಿಗಳು ಪಾಲ್ಗೊಳ್ಳುವ ಜನರ ಸಂಖ್ಯೆ ಅವರನ್ನು ಕಾರ್ಯಕ್ರಮಕ್ಕೆ ಕರೆತರುವ ವಿಧಾನ ಬಳಸಲಾಗುವ ವಾಹನಗಳ ಸಂಖ್ಯೆ ಸೇರಿದಂತೆ ಇತರೆ ಅಗತ್ಯ ಮಾಹಿತಿಯನ್ನು ಕಡ್ಡಾಯವಾಗಿ ಅರ್ಜಿಯಲ್ಲಿ ನಮೂದಿಸತಕ್ಕದ್ದು, ಎಂದು ಅವರು ತಿಳಿಸಿದರು.
    

ಅನುಮತಿ ಪಡೆದಂತಹ ವಾಹನಗಳಲ್ಲಿ ಅನುಮತಿ ಪತ್ರದ ಮೂಲ ಪ್ರತಿಯನ್ನು ವಾಹನದ ಮುಂಭಾಗದ ಗಾಜಿಗೆ ಕಡ್ಡಾಯವಾಗಿ ಲಗತ್ತಿಸತಕ್ಕದ್ದು ಎಂದು ಕೋಲಾರ ಉಪವಿಭಾಗಾಧಿಕಾರಿ ಶುಭ ಕಲ್ಯಾಣ್ ಅವರು ತಿಳಿಸಿದರು.
    

ಚುನಾವಣೆ ಮುಗಿಯುವವರೆಗೂ ಆರ್.ಪಿ ಆಕ್ಟ್ ಅನ್ವಯ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯಾದ ಪ್ರತಿಭಟನೆ ನಿಷೇದಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದರು.
    

ನಾಮಪತ್ರ ಸಲ್ಲಿಸುವ ಮುನ್ನ ತಾನು ಸಂಭಾವಿ ಅಭ್ಯರ್ಥಿ ಎಂದು ಯಾವುದೇ ವ್ಯಕ್ತಿಯು ಪ್ರಚಾರ ಕೈಗೊಳ್ಳುವುದನ್ನು ನಿಷೇಧಿಸಿದೆ ಎಂದು ತಿಳಿಸಿದ ಅವರು ಏಪ್ರಿಲ್ 17 ರವರೆಗೆ ಯಾವುದೇ ಬಹಿರಂಗ ಪ್ರಚಾರಕ್ಕಾಗಿ ಪೂರ್ವಾನುಮತಿಯನ್ನು ಜಿಲ್ಲಾ ಚುನಾವಣಾಧಿಕಾರಿಗಳಿಂದಲೇ ಪಡೆಯಬೇಕು ಎಂದರು. ಏಪ್ರಿಲ್ 17 ರ ನಂತರ ಆಯಾ ಕ್ಷೇತ್ರದ ಚುನಾವಣಾಧಿಕಾರಿಗಳಿಂದ ಪೂರ್ವಾನುಮತಿ ಪಡೆಯಬಹುದಾಗಿದೆ ಎಂದು ಮಾಹಿತಿ ನೀಡಿದರು.

ಮತಗಟ್ಟೆ ಮಟ್ಟದ ಏಜೆಂಟರನ್ನು ನೇಮಿಸಿ 
ನವೆಂಬರ್ 2017 ರಿಂದ ರಾಜಕೀಯ ಪಕ್ಷಗಳ ಸಭೆಯಲ್ಲಿ ಹಲವಾರು ಬಾರಿ ಭೂತ್ ಮಟ್ಟದ ಏಜೆಂಟರನ್ನು ನೇಮಕ ಮಾಡುವಂತೆ ತಿಳಿಸಲಾಗಿದ್ದರೂ ಸಂಪೂರ್ಣವಾಗಿ ಮತಗಟ್ಟೆ ಮಟ್ಟದ ಏಜೆಂಟ್‍ರ ನೇಮಕಾತಿ ನಡೆದಿರುವುದಿಲ್ಲ. ಈ ಕುರಿತು ಶೀಘ್ರವೇ ನೇಮಕಾತಿ ಪ್ರಕ್ರಿಯೆ ಮುಗಿಸಿ ಮತದಾರರ ಪಟ್ಟಿಯಲ್ಲಿ ಹೊಸದಾಗಿ ಸೇರಿಸಬೇಕಾದ ಮತದಾರರ ಹೆಸರುಗಳನ್ನು ಸೇರಿಸಲು ಭೂತ್ ಮಟ್ಟದ ಅಧಿಕಾರಿಗಳೊಂದಿಗೆ ಸಹಕರಿಸಲು ಕೋರಿದರು. 
    

ಏಪ್ರಿಲ್ 14 ರವರೆಗೆ ಮತದಾರರ ಹೆಸರುಗಳನ್ನು ಸೇರ್ಪಡೆಗೊಳಿಸುವ ಅವಕಾಶವಿದ್ದು ದೊಡ್ಡ ಪ್ರಮಾಣದಲ್ಲಿ ಅರ್ಜಿಗಳನ್ನು ಯಾವುದೇ ಕಾರಣಕ್ಕೂ ಸ್ವೀಕರಸಲಾಗುವುದಿಲ್ಲ ಎಂದು ತಿಳಿಸಿದರು. ಈ ಕೂಡಲೇ ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರು ಇರುವ ಬಗ್ಗೆ ಪರಿಶೀಲಿಸಿ, ಇಲ್ಲವಾದಲ್ಲಿ ಸೇರಿಸಿಕೊಳ್ಳಲು ಅರ್ಹ ಮತದಾರರಿಗೆ ಭೂತ್ ಮಟ್ಟದ ಏಜೆಂಟರು ಮಾರ್ಗದರ್ಶನ ನೀಡಬಹುದಾಗಿದೆ ಎಂದು ತಿಳಿಸಿದರು.
    

ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ರೋಹಿಣಿ ಕಟೋಚ್ ಸಫೆಟ್, ಕೆ.ಜಿ.ಎಫ್ ಪೊಲೀಸ್ ವರಿಷ್ಠಾಧಿಕಾರಿಗಳಾದ ಲೋಕೇಶ್, ಅಪರ ಜಿಲ್ಲಾಧಿಕಾರಿಗಳಾದ ಕೆ. ವಿದ್ಯಾಕುಮಾರಿ ಸೇರಿದಂತೆ ಕ್ಷೇತ್ರ ಚುನಾವಣಾಧಿಕಾರಿಗಳು ಹಾಗೂ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಉಪಸ್ಥಿತರಿದ್ದರು.

ಏಪ್ರಿಲ್ 05 ರಂದು ಬಾಬು ಜಗಜೀವನ್‍ರಾಂ ಜಯಂತಿ
ಕೋಲಾರ :   ಹಸಿರು ಕ್ರಾಂತಿಯ ಹರಿಕಾರರಾದ ಬಾಬು ಜಗಜೀವನ್‍ರಾಂ ರವರ ಜನ್ಮದಿನಾಚರಣೆಯನ್ನು ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಸಾಂಕೇತಿಕವಾಗಿ ಜಿಲ್ಲಾಡಳಿತ ವತಿಯಿಂದ ಶ್ರೀ ಟಿ. ಚನ್ನಯ್ಯರಂಗಮಂದಿರ ಕೋಲಾರ ಇಲ್ಲಿ ದಿನಾಂಕ 05-04-2018 ರಂದು ಬೆಳಿಗ್ಗೆ 10.00 ಗಂಟೆಗೆ ಆಚರಿಸಲಾಗುತ್ತಿದೆ. ಕಾರ್ಯಕ್ರಮಕ್ಕೆ ವಿವಿಧ ದಲಿತ ಸಂಘಟನೆಗಳ ಮುಖಂಡರು ಹಾಗೂ ಪದಾಧಿಕಾರಿಗಳು ಬಾಗವಹಿಸಬೇಕೆಂದು ಸಮಾಜ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕರಾದ ಜಯಣ್ಣ ಅವರು ಕೋರಿದ್ದಾರೆ.

 

Read These Next

ಭಟ್ಕಳದಲ್ಲಿ ಹೆದ್ದಾರಿಗೆ ಮತ್ತೆ ಹೊಸ ರೂಪ ನೀಡಿದ ಪ್ರಾಧಿಕಾರ, ಫ್ಲೈ ಓವರ್ರೂ ಇಲ್ಲ, ಅಂಡರ್ ಪಾಸೂ ಇಲ್ಲ; 30ಮೀ.ಗೆ ಸೀಮಿತ

ರಾಷ್ಟ್ರೀಯ ಹೆದ್ದಾರಿ 66ರ ಅಗಲೀಕರಣ ಕಾಮಗಾರಿಗೆ ವೇಗ ದೊರಕಿರುವಂತೆಯೇ, ಭಟ್ಕಳ ಶಹರ ವ್ಯಾಪ್ತಿಯಲ್ಲಿ ನೂತನ ಹೆದ್ದಾರಿ ನಿರ್ಮಾಣಕ್ಕೆ ...

ಯುಎಪಿಎ ಕ್ರೂರ ಕಾಯ್ದೆ ರದ್ದುಗೊಳಿಸುವಂತೆ ನಡೆಯುತ್ತಿರುವ ಹೋರಾಟಕ್ಕೆ ಎ.ಪಿ.ಸಿ.ಆರ್ ಬೆಂಬಲ

ಬೆಂಗಳೂರು: ಕಾನೂನು ಬಾಹಿರ ಚಟುವಟಿಕೆ ತಡೆ ಕಾಯ್ದೆ (ಯುಎಪಿಎ) ಅತ್ಯಂತ ಕ್ರೂರ ಕಾಯ್ದೆಯಾಗಿದ್ದು ಇದನ್ನು ರದ್ದುಗೊಳಿಸಲು ಆಗ್ರಹಿಸಿ ...

ಸೈಕಲ್ ಮೂಲಕ ಸಂಚರಿಸಿ ‘ಮಾದಕ ದ್ರವ್ಯದ ವಿರುದ್ಧ ಹೋರಾಡುತ್ತಿರುವ ಸೈಯ್ಯದ್ ಫೈಝಾನ್ ಅಲಿ

ಭಟ್ಕಳ: ಮನುಷ್ಯನಲ್ಲಿ ಛಲವೊಂದಿದ್ದರೆ ಸಾಕು ತಾನು ಏನು ಬೇಕಾದರೂ ಸಾಧಿಸಬಹುದು ಎಂದು ಸಾಬೀತು ಮಾಡಲು ಹೊರಟಿರುವ ಓರಿಸ್ಸಾ ಮೂಲದ ...