ಕೋಲಾರ: ನೆಹರು ದೇಶದ ಭದ್ರ ಬುನಾಧಿಗೆ ಶ್ರಮಿಸಿದ್ದರು-ಹೆಚ್.ಎ. ಬಿಂಧು

Source: shabbir | By Arshad Koppa | Published on 15th November 2017, 8:34 AM | State News |

ಕೋಲಾರ ನ.14: ಪುಸ್ತಕ ಪ್ರೇಮಿಯಾಗಿದ್ದ ದೇಶದ ಮೊದಲ ಪ್ರಧಾನಿ ಜವಹರಲಾಲ್‍ರವರು ದೇಶದ ಭದ್ರ ಬುನಾಧಿಗೆ ಶ್ರಮಿಸಿದ್ದರು. ಅವರು ಅಪೂರ್ವ ದೇಶಭಕ್ತರಾಗಿದ್ದರು ಎಂದು ವಿದ್ಯಾರ್ಥಿ ಮಂತ್ರಿಮಂಡಲ ಮುಖ್ಯಮಂತ್ರಿ ಹೆಚ್.ಎ. ಬಿಂಧು ಅಭಿಪ್ರಾಯಪಟ್ಟರು.


    ತಾಲ್ಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಪಂಡಿತ್ ಜವಹರಲಾಲ್ ನೆಹರುರವರ ಜಯಂತಿಯಲ್ಲಿ ಭಾವಚಿತ್ರಕ್ಕೆ ನಮನ ಸಲ್ಲಿಸಿ ಅವರು ಮಾತನಾಡುತ್ತಿದ್ದರು.
    17 ವರ್ಷಗಳ ಕಾಲ ಸ್ವತಂತ್ರ್ಯ ಭಾರತದ ಪ್ರಧಾನಿಯಾಗಿದ್ದ ನೆಹರೂ ರವರು ದೇಶದ ಉನ್ನತಿಗಾಗಿ ಹಾಗೂ ಜಗತ್ತಿನಲ್ಲಿ ಶಾಂತಿ ಸ್ಥಾಪಿಸಲು ಶ್ರಮಿಸಿದ ಅವರು 1995ರಲ್ಲಿ ಭಾರತರತ್ನ ಪ್ರಶಸ್ತಿಗೆ ಭಾಜನರಾದ ಶ್ರೀಯುತರಿಗೆ ಮೊದಲಿನಿಂದಲೂ ಮಕ್ಕಳೆಂದರೆ ಬಹಳ ಪ್ರೀತಿ, ಮಕ್ಕಳೊಡನೆ ಆಟ ಆಡುವುದೆಂದರೆ ಆನಂದ. ಭಾರತದ ಪ್ರಧಾನಿಯಾಗಿದ್ದರೂ ಮಕ್ಕಳ ಜೊತೆ ಆಡುವ ಪ್ರಸಂಗ ಎಂದೂ ತಪ್ಪಿಸದ ಮಹಾನ್ ದೀಮಂತ ನಾಯಕರಾಗಿದ್ದರು ಎಂದರು.


    ಮಕ್ಕಳಿಗಾಗಿ ಚಿತ್ರಕಲೆ, ಭಾಷಣ, ಸ್ಪರ್ಧೆಗಳನ್ನು ಏರ್ಪಡಿಸಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾದ್ಯಾಯ ಜಿ. ಶ್ರೀನಿವಾಸ್ ವಹಿಸಿದ್ದು, ತೀರ್ಪುಗಾರರಾಗಿ ಶಿಕ್ಷಕರಾದ ಪಿ.ಎಂ.ಗೋವಿಂದಪ್ಪ, ಎಂ.ಆರ್.ಮೀನಾ, ಹೆಚ್. ಮುನಿಯಪ್ಪ, ಆರ್.ಮಂಜುಳ, ಕೆ. ಮಮತ ಮತ್ತಿತರರು ಭಾಗವಹಿಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಮಕ್ಕಳೇ ನಿರೂಪಿಸಿ, ಸ್ವಾಗತಿಸಿ, ವಂದಿಸಿದ ಕಾರ್ಯಕ್ರಮವು ಮಕ್ಕಳ ಹಬ್ಬವಾಗಿತ್ತು.

ಚಿತ್ರ : ತಾಲ್ಲೂಕಿನ ಹರಟಿ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿಂದು ಏರ್ಪಡಿಸಿದ್ದ ಮಕ್ಕಳ ದಿನಾಚರಣೆಯಲ್ಲಿ ನೆಹರು ಭಾವಚಿತ್ರಕ್ಕೆ ವಿದ್ಯಾರ್ಥಿಗಳು ನಮಿಸುತ್ತಿರುವುದು.

        (ಜಿ. ಶ್ರೀನಿವಾಸ್)
    ಕೋಲಾರ.


ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ವಿವಾಹಿತ ಮಹಿಳೆ ಆತ್ಮಹತ್ಯೆ

ಶ್ರೀನಿವಾಸಪುರ: ತಾಲ್ಲೂಕಿನ ಯಲ್ದೂರು ಗ್ರಾಮದಲ್ಲಿ ಬುಧವಾರ ರಾತ್ರಿ ವಿವಾಹಿತ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ...