ಕೋಲಾರ: ನಗರದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿದ ಮೂರು ತಿಂಗಳಿಗೇ ಕುಲಗೆಟ್ಟು ಹೋಗಿರುವ ರಸ್ತೆಗಳು

Source: shabbir | By Arshad Koppa | Published on 18th October 2017, 8:25 AM | State News |

ಕೋಲಾರ.ಅ.17: ನಗರದಲ್ಲಿ ರಸ್ತೆಗೆ ಡಾಂಬರೀಕರಣ ಮಾಡಿದ ಮೂರು ತಿಂಗಳಿಗೆಲ್ಲಾ   ರಸ್ತೆಗಳು ಹಳ್ಳಗಳು ಬಿದ್ದು, ಕಳಪೆ ಗುಣಮಟ್ಟದ ಕಾಮಗಾರಿಯಿಂದ ಮಳೆಯಿಂದ ಕೆರೆಕುಂಟೆಗಳಾಗಿ ಮಾರ್ಪಡಾಗುತ್ತಿದ್ದರೂ ಅಧಿಕಾರಿಗಳು ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಳ್ಳದೆ ನಗರದ ರಸ್ತೆಗಳ ಹಣವನ್ನು ಮಿಂಗುತ್ತಿರುವ ಗುತ್ತಿಗೆದಾರರ ಮತ್ತು ಅಧಿಕಾರಿಗಳ ವಿರುದ್ದ ಕ್ರಮ ಕೈಗೊಂಡು ನಗರಸಭೆ ಜೆ.ಇ.ಪೂಜಾರಪ್ಪನನ್ನು ಕೂಡಲೆ ಅಮಾನತ್ತು ಮಾಡಿ ರಸ್ತೆಗಳ ರಿಪೇರಿಗೆ ಮುಂದಾಗಬೇಕೆಂದು ರೈತ ಸಂಘದಿಂದ ವೇಣುಗೋಪಾಲಸ್ವಾಮಿ ದೇವಸ್ಥಾನದ ಬಳಿ ರಸ್ತೆ ತಡೆದು ಆಗ್ರಹಿಸಲಾಯಿತು.


ರಾಜ್ಯ ಉಪಾಧ್ಯಕ್ಷ ಕೆ.ನಾರಾಯಣಗೌಡ ಮಾತನಾಡಿ ರಾಜದಾನಿಗೆ ಕೂಗಳತೆ ದೂರದಲ್ಲಿರುವ ನಗರವನ್ನು ಅಧಿಕಾರಿಗಳ ಮತ್ತು ಚುನಾಯಿತ ಜನಪ್ರತಿನಿಧಿಗಳ ಬೇಜವಾಬ್ದಾರಿತನ ಮತ್ತು ಲಂಚಭಾಕತನಕ್ಕೆ ನಗರ ಎಂದು ಹಂದಿಗಳ ವಾಸಸ್ಥಾನವಂತಾಗಿ ಹಳ್ಳಿಗಿಂತ ಅದ್ವಾನವಾಗಿದೆ. ಪ್ರತಿವರ್ಷ ಕೋಟಿಗಳ ಲೆಕ್ಕದಲ್ಲಿ ರಸ್ತೆಗಳ ಮತ್ತು ಚರಂಡಿಗಳ ಅಭಿವೃಧ್ದಿಗೆ ಹಣ ಬಂದರೂ 40 ವರ್ಷದಿಂದ ಯಾವರೀತಿ ನಗರ ಇತ್ತೊ ಇಂದೂ ಅದೇ ಸ್ಥಿತಿಯಲ್ಲಿದೆ ಇದಕ್ಕೆಲ್ಲಾ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಕಳಪೆ ಕಾಮಗಾರಿ ಮತ್ತು ಕಳ್ಳ ಬಿಲ್ಲುಗಳ ಲೆಕ್ಕಾಚಾರವೇ ಕಾರಣವಾಗಿ ಈ ರಸ್ತೆಗಳ ಗುಂಡಿಗಳಲ್ಲಿ ವಾಹ ಸವಾರರು ಬಿದ್ದು, ಕೈಕಾಲು ಮುರಿದುಕೊಂಡು ಸಾವುಗಳು ಸಂಭವಿಸಿ ಕೆಲವು ಅಪಘಾತಗಳಾದಾಗ ಹೊಡೆದಾದಟಗಳು ಸಹಾ ನಡೆದು ಇಡೀ ನಗರವೇ ಕೆಸರಿನ ಗದ್ದೆಯಂತಾಗಿ ಮಾರ್ಪಡಿಸಿರುವ ಅಧಿಕಾರಿಗಳ ಮತ್ತು ಗುತ್ತಿಗೆದಾರರ ವಿರುದ್ದ ಕ್ರಿಮಿನಲ್ ಮೊಕ್ಕದ್ದಮೆ ದಾಖಲಿಸಿ ಕಪ್ಪುಪಟ್ಟಿಗೆ ಸೇರಿಸಬೇಕೆಂದು  ಆಗ್ರಹಿಸಿದರು.
 ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್ ಮಾತನಾಡಿ ಕಮೀಷನ್ ದಂಧೆಯಿಂದ ಕಳಪೆ ಗುಣಮಟ್ಟದ ರಸ್ತೆಗಳನ್ನು ನಿರ್ಮಾಣ ಮಾಡುವ ಟೆಂಡರ್‍ದಾರರ ಗುಲಾಮರಂತೆ ಅಧಿಕಾರಿ ವರ್ಗ ಕೆಲಸ ಮಾಡುತ್ತಿದ್ದು, ಸರ್ಕಾರದ ನಿಯಮದ ಪ್ರಕಾರ ನಿರ್ಮಿಸಿದ ರಸ್ತೆ, ಸರಿಸುಮಾರು ಮೂರು ವರ್ಷಗಳಾದರೂ ಗುಣಮಟ್ಟ ಕಾಯ್ದುಕೊಳ್ಳಬೇಕು. ಇನ್ನು ಚರಂಡಿಗಳಂತೂ ಎಲ್ಲಿವೆಯೋ ಭಗವಂತನೆಬಲ್ಲ, ಟೆಂಡರ್‍ದಾರರನ್ನು ಕೇಳಿದರೆ, ಟೆಂಡರ್ ಹಾಕಿದ ದಿನದಿಂದ ಕಾಮಗಾರಿ ಮುಗಿಯುವವರೆಗೂ ಕಮೀಷನ್ ನೀಡದೇ ಇದ್ದರೆ, ನಮಗೆ ಯಾವುದೇ ಬಿಲ್ ಪಾವತಿ ಮಾಡುವುದಿಲ್ಲ ಎಂದು ಅಧಿಕಾರಿಗಳ ಮೇಲೆ ನೇರ ಆರೋಪ ಮಾಡುತ್ತಾರೆ. ಅಧಿಕಾರಿಗಳನ್ನು ಕೇಳಿದರೆ, ಟೆಂಡರ್‍ದಾರರ ಮೇಲೆ ಗೂಬೆ ಕೂರಿಸುತ್ತಾರೆ. ಈ ಇಬ್ಬರ ಜಗಳದಲ್ಲಿ ವಾಹನ ಸವಾರರ ಜನರ ಬದುಕು ಸಾವಿನ ಮಧ್ಯೆ ಸೆಣೆಸುವಂತಾಗಿದೆ.  ಕೋಡಲೇ 24 ಗಂಟೆಯೊಳಗಾಗಿ ರಸ್ತೆಗಳ ಮೇಲೆ ಬಿದ್ದಿರುವ ಗುಂಡಿಗಳನ್ನು ಮುಚ್ಚದೆಹೋದರೆ ನಗರಸಭೆಗೆ ಬೀಗ ಜಡಿಯಬೇಕೆಂದು ಎಚ್ಚರಿಸಲಾಯಿತು. 
    ಸ್ಥಳಕ್ಕೆ ಬಂದ ಜೆ.ಇ.ಪೂಜಾರಪ್ಪ ಹೋರಾಟ ಮಾಡಿದರೆ ನಾವು ರಿಪೇರಿ ಮಾಡಲಾಗುವುದಿಲ್ಲ ನೋಡೋಣ ಎಂದು ಗಾಂಚಾಲಿ ಮಾಡಿದಾಗ ಹೋರಾಟಗಾರರು ಮತ್ತು ಜೆ.ಇ.ಮಧ್ಯೆ ತಳ್ಳಾಟ ನಡೆದು ಅಧಿಕಾರಿಯನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಾಗ ಜಾಗ ಖಾಲಿ ಮಾಡಿದ. 
ನಂತರ ಸ್ಥಳಕ್ಕೆ ಬಂದು ಪ್ರತಿಭಟನಾಕಾರರನ್ನು ಸಮಾದಾನ ಪಡಿಸಿದ ಎ.ಡಬಲ್‍ಇ. ಸುದಾಕಾರ್‍ಶೆಟ್ಟಿ ಸಮಸ್ಯೆಯನ್ನು ಬಗೆಹರಿಸದೆ ದರ್ಪ ತೋರಿಸಿದ ಜೆ.ಇ.ಪೂಜಾರಪ್ಪನನ್ನು 24 ಗಂಟೆಯೊಳಗಾಗಿ ಅಮಾನತ್ತು ಮಾಡುವುದಾಗಿ ಭರವಸೆ ನೀಡಿದರು. 3-4 ದಿನಗಳೊಳಗಾಗಿ ನಗರದ ಗುಂಡಿಗಳನ್ನು ಮುಚ್ಚಿ ಈ ರಸ್ತೆಗಳನ್ನು ಗುತ್ತಿಗೆ ಪಡೆದಿರುವ ಗುತ್ತಿಗೆದಾರರ ವಿರುದ್ದ ಕ್ರಮ ಕೈಗೊಂಡು ನಗರದಲ್ಲಿ ಈ ರೀತಿ ಅನಾಹುತಗಳಾಗದಂತೆ  ತಡೆಯುವುದಾಗಿ ಭರವಸೆ ನೀಡಿದರು.
    ಈ ಹೋರಾಟದಲ್ಲಿ ಜಿಲ್ಲಾಧ್ಯಕ್ಷ ಮರಗಲ್ ಶ್ರೀನಿವಾಸ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ಎ.ನಳಿನಿ, ರಕ್ಷಣಾ ಸಮಿತಿ ಚೇತನ್‍ಬಾಬು, ಕೆ.ಶ್ರೀನಿವಾಸಗೌಡ, ರಂಜೀತ್‍ಕುಮಾರ್, ಆನಂದ್‍ಸಾಗರ್, ಕೆಂಬೋಡಿ ಕೃಷ್ಣೇಗೌಡ, ಭರತ್, ಸೀಸಂದ್ರ ಭಾರದ್ವಾಜ್, ವಕ್ಕಲೇರಿ ಹನುಮಪ್ಪ, ಎಂ.ಹೊಸಹಳ್ಳಿ ಚಂದ್ರಪ್ಪ, ರೆಹಮಾನ್, ಪುತ್ತೇರಿ ರಾಜು, ತೆರ್ನಹಳ್ಳಿ ವೆಂಕಟಸ್ವಾಮಿಗೌಡ,,ಚಲ, ಪುರುಶೋತ್ತಮ್, ಈಕಾಂಬಳ್ಳಿ ಮಂಜು ಮುಂತಾದವರಿದ್ದರು.

ವರದಿ: ಮೊಹಮ್ಮದ್ ಶಬ್ಬೀರ್, ಶ್ರೀನಿವಾಸಪುರ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...