ಕೋಲಾರ: ಹೆದ್ದಾರಿ ಸುಲಿಗೆಕೋರರ ಬಂಧನ

Source: shabbir ahmed | By Arshad Koppa | Published on 25th February 2017, 11:18 PM | State News |

ಕೋಲಾರ : ಫೆ.16 ರಂದು ಕೆಎ : 50, 3728 ಸಂಖ್ಯೆ ಲಾರಿಯಲ್ಲಿ ಸುಮಾರು 4,72,000 ರೂ. ಬೆಲೆ ಬಾಳುವ ಕಬ್ಬಿಣದ ಪೈಪುಗಳು ತುಂಬಿಸಿಕೊಂಡು ಮುಳಬಾಗಿಲಿಗೆ ಹೋಗಲು ಚಾಲಕ ಜಾಫರ್ ಸಾದಿಕ್ ಎಂಬುವರು ಲಾರಿಯನ್ನು ಚಾಲನೆ ಮಾಡಿಕೊಂಡು ಬೆಂಗಳೂರು - ಚನ್ನೈ ಮಾರ್ಗದ ಎನ್.ಹೆಚ್.75 ರಸ್ತೆಯಲ್ಲಿ ಬರುವಾಗ ಅರಾಭಿಕೊತ್ತನೂರು ಗೇಟಿನ ಸಮೀಪ ಯಾರೋ ಅಪರಿಚಿತರು ಒಂದು ಹೋಂಡಾ ಆಕ್ಟೀವಾ ದ್ವಿ-ಚಕ್ರ ವಾಹನದಲ್ಲಿ ಬಂದು ಲಾರಿಯನ್ನು ಅಡ್ಡಗಟ್ಟಿ ನಿಲ್ಲಿಸಿ ಚಾಲಕನಿಗೆ ಮೆಣಸಿನ ಪುಡಿಯನ್ನು ಎರಚಿ, ಕೆಳಗಿಳಿಸಿ ಲಾರಿಯನ್ನು ಕಬ್ಬಿಣದ ಪೈಪುಗಳ ಸಮೇತ ಕಿತ್ತುಕೊಂಡು ಹೊರಟು ಹೋಗಿದ್ದು, ಈ ಬಗ್ಗೆ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಮೊ.ಸಂ:76/2017 ಕಲಂ 394 IPಅ  ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿರುತ್ತೆ.

ಈ ಪ್ರಕರಣದ ಪತ್ತೆ ಸಂಬಂಧ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ ರವರ ಮಾರ್ಗದರ್ಶನದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಕೋಲಾರ ಜಿಲ್ಲೆ ಮತ್ತು ಮಾನ್ಯ ಡಿ.ಎಸ್.ಪಿ., ಕೋಲಾರ ಉಪ-ವಿಭಾಗ ರವರ ನೇತೃತ್ವದಲ್ಲಿ ಕೋಲಾರ ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಶ್ರೀ. ಕೆ.ಓ.ಪುಟ್ಟ ಓಬಲ ರೆಡ್ಡಿ ಮತ್ತು ಪೊಲೀಸ್ ಸಬ್-ಇನ್ಸ್‍ಪೆಕ್ಟರ್ ಗಳಾದ ಎಸ್.ಶಿವರಾಜ್, ಬಿ.ಎಸ್.ಕೃಷ್ಣಮೂರ್ತಿ ಹಾಗೂ ಸಿಬ್ಬಂದಿಯಾದ ಎ.ಎಸ್.ಐ. ವೆಂಕಟಾಚಲಪತಿ, ಮಂಜುನಾಥ್, ನಾಗರಾಜ್, ಪ್ರಕಾಶ್, ಶಿವಕುಮಾರ್, ಮುನಿರಾಜು, ಚಿಕ್ಕಅಂಜಿನಪ್ಪ ರವರ ತಂಡದ ಪ್ರಾಮಾಣ ಕ ಪ್ರಯತ್ನದಿಂದ ಕೋಲಾರ ತಾಲ್ಲೂಕಿನ ಹೊಗರಿ-ಗೊಲ್ಲಹಳ್ಳಿ ಸಮೀಪದಲ್ಲಿ ಆರೋಪಿಗಳು ಮುಚ್ಚಿಟ್ಟಿದ್ದ ಕೆಎ : 50, 3728 ಸಂಖ್ಯೆಯ ಲಾರಿ ಮತ್ತು ಕಬ್ಬಿಣದ ಪೈಪುಗಳು, ಒಟ್ಟು ಸುಮಾರು ರೂ.8,72,000 ಬೆಲೆ ಬಾಳುವ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಈ ಸಂಬಂಧ ಕೋಲಾರ ನಗರ ವಾಸಿಗಳಾದ ಆರೋಪಿ (1) ಮುಜ್ಜು @ ಸೈಯದ್ದ ಮುಸದ್ದಿಕ್ ಅಹಮದ್ s/o ಅಹಮದ್ ಜಾನ್ @ ಡೀಸಲ್ ಬಾಬಾ, (2) ಫಾಜಿಲ್  @ ಫಾಜಿಲ್ ಪಾಷ s/o ಸನಾವುಲ್ಲಾ, (3) ಸೈಯದ್ ಹುಸ್ಸೇನ್ s/o ಸೈಯದ್ ಖಾಲಿದ್, (4) ಸೈಯದ್ ತಬೀರ್ s/o ಸೈಯದ್ ಸಮೀವುಲ್ಲಾ ರವರುಗಳನ್ನು ಬಂಧಿಸಿ, ಆರೋಪಿಗಳು ಕೃತ್ಯಕ್ಕೆ ಉಪಯೋಗಿಸಿದ ನಂ : ಕೆ.ಎ.07, ವೈ.7476 ಯಮಹ ಫ್ಯಾಸಿನೋ ದ್ವಿ-ಚಕ್ರ ವಾಹನವನ್ನು ವಶಪಡಿಸಿಕೊಂಡು, ಪ್ರಕರಣವನ್ನು ಬೇಧಿಸಿರುತ್ತಾರೆ.

Read These Next

ರಾಜ್ಯದಲ್ಲಿ ಶೇ.69.23 ಮತದಾನ; ಮಂಡ್ಯದಲ್ಲಿ ಗರಿಷ್ಠ ಶೇ.81.48; ಬೆಂಗಳೂರು ಕೇಂದ್ರದಲ್ಲಿ ಕನಿಷ್ಠ ಶೇ.52.81

ರಾಜ್ಯದ 14 ಲೋಕಸಭಾ ಕ್ಷೇತ್ರಗಳಿಗೆ ಶುಕ್ರವಾರ ನಡೆದ ಮೊದಲ ಹಂತದ ಮತದಾನವು ಬಹುತೇಕ ಶಾಂತಿಯುತವಾಗಿ ನೆರವೇರಿತು. ಒಟ್ಟಾರೆ ಶೇ.69.23ರಷ್ಟು ...

ಮನೆಯಿಂದ‌ ಮತದಾನ ಪ್ರಕ್ರಿಯೆಗೆ ಡಿ.ಸಿ. ಚಾಲನೆ. ಹಿರಿಯ ನಾಗರೀಕರು, ವಿಶೇಷ ಚೇತನರಿಂದ ಮತದಾನ

ಕಲಬುರಗಿ : ಸಾರ್ವತ್ರಿಕ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರೀಕರು ಹಾಗೂ ವಿಶೇಷಚೇತನರು ಮನೆಯಿಂದಲೇ ಮತ ...

ಒತ್ತಡ ನಿರ್ವಹಣೆ ಸಮರ್ಪಕವಾಗಿ ನಿರ್ವಹಿಸಿ ಸದೃಢ ಆರೋಗ್ಯ ಕಾಯ್ದುಕೊಳ್ಳಿ: ಡಾ.ವೀರೇಂದ್ರ ಕುಮಾರ್

ಬಳ್ಳಾರಿ : ಮಾನಸಿಕ ಆರೋಗ್ಯದ ಸದೃಢತೆಗೆ ಜೀವನದ ಪ್ರತಿಯೊಂದು ಕ್ಷಣಗಳನ್ನು ಸಮನಾಗಿ ಸ್ವೀಕರಿಸುವ ಮೂಲಕ ಆರೋಗ್ಯದ ಮೇಲುಂಟಾಗುವ ...