ಪ. ಜಾತಿ/ಪಂಗಡದ ಪತ್ರಿಕೋದ್ಯಮ ಪದವೀಧರ ಅಭ್ಯರ್ಥಿಗಳಿಗೆ ವೃತ್ತಿ ನಿರೂಪಣಾ ತರಬೇತಿಗಾಗಿ ಅರ್ಜಿ ಆಹ್ವಾನ 

Source: sonews | By Staff Correspondent | Published on 14th September 2017, 11:15 PM | Coastal News | Don't Miss |

ಕಾರವಾರ:ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.  

ಅಭ್ಯರ್ಥಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅರ್ಜಿ ನಮೂನೆಯನ್ನು ಪಡೆಯಬಹುದು.  ಇಲ್ಲವೆ ಇಲಾಖೆಯ ವೆಬ್‌ಸೈಟ್ www.karnatakainforamtion.gov.in  ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಹಾಗೂ ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ಧೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ: ೨೧-೯-೨೦೧೭ ರ ಸಂಜೆ ೫-೦೦ ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. ೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ೫೬೦ ೦೦೧ ಇವರಿಗೆ ಸಲ್ಲಿಸಬೇಕು.

ಲಕೋಟೆಯ ಮೇಲ್ಬಾಗದಲ್ಲಿ  "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ ೦೮೦- ೨೨೦೨೮೦೩೭/೮೭ ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.  

ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಹಾಗೂ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಮತ್ತು ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ಧೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ: ೩-೧೦-೨೦೧೭ ರ ಸಂಜೆ ೫-೦೦ ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. ೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ೫೬೦ ೦೦೧ ಇವರಿಗೆ ಸಲ್ಲಿಸಬೇಕು.

ಲಕೋಟೆಯ ಮೇಲ್ಬಾಗದಲ್ಲಿ  "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ (ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ)" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ ೦೮೦- ೨೨೦೨೮೦೩೭/೮೭ ರ ಮೂಲಕ ಸಂಪರ್ಕಿಸಬಹುದಾಗಿದೆ.

ಹಿಂದುಳಿದ ವರ್ಗದ ಪತ್ರಿಕೋದ್ಯಮ ಪದವೀಧರ ಅಭ್ಯರ್ಥಿಗಳಿಗೆ ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನ 
ಕಾರವಾರ:  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿಂದುಳಿದ ವರ್ಗದ ಪತ್ರಿಕೋದ್ಯಮ ಪದವಿ, ಸ್ನಾತಕೋತ್ತರ ಪದವಿ, ವಿದ್ಯುನ್ಮಾನ ಮಾಧ್ಯಮದಲ್ಲಿ ಪದವಿ, ಪಿ.ಜಿ. ಡಿಪ್ಲೊಮಾ ಪಡೆದ ಅಭ್ಯರ್ಥಿಗಳಿಗಾಗಿ ಆರು ದಿವಸಗಳ ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.  

ಕೆಟಗರಿ ೧, ೨ಎ, ೨ಬಿ, ೩ಎ, ೩ಬಿ ಅಭ್ಯರ್ಥಿಗಳು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸುದ್ದಿ ಮತ್ತು ಪತ್ರಿಕಾ ವಿಭಾಗದಿಂದ ಅರ್ಜಿ ನಮೂನೆಯನ್ನು ಪಡೆಯಬಹುದು.  ಇಲ್ಲವೆ ಇಲಾಖೆಯ ವೆಬ್‌ಸೈಟ್ www.karnatakainforamtion.gov.in  ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು.

ಅಭ್ಯರ್ಥಿ ಹೆಸರು, ಜನ್ಮ ದಿನಾಂಕ, ಖಾಯಂ ವಿಳಾಸ, ವಿದ್ಯಾರ್ಹತೆ, ಜಾತಿ, ಶೇಕಡಾವಾರು ಅಂಕ, ಉದ್ಯೋಗ ವಿವರ ಹಾಗೂ ಈ ಹಿಂದೆ ಯಾವುದಾದರು ತರಬೇತಿ ಪಡೆದ ವಿವರ ಮತ್ತು ವಿಶೇಷ ಸಾಧನೆಗಳನ್ನೊಳಗೊಂಡ ಸ್ವ ವಿವರಗಳ ಮಾಹಿತಿಗಳನ್ನು ಭರ್ತಿ ಮಾಡಿ ಸ್ವ ವಿಳಾಸ ಇರುವ ಲಕೋಟೆಯೊಂದಿಗೆ ಅರ್ಜಿಯನ್ನು ಸಲ್ಲಿಸಬಹುದು.

ಅರ್ಜಿಯೊಂದಿಗೆ ಅಂಕಪಟ್ಟಿ, ಜಾತಿ ಪ್ರಮಾಣ ಪತ್ರ, ವಿಳಾಸ ಹಾಗೂ ವಯಸ್ಸನ್ನು ಧೃಢೀಕರಿಸುವ ದಾಖಲೆಗಳ ಪ್ರತಿಯನ್ನು ಲಗತ್ತಿಸಿ ದಿನಾಂಕ: ೩-೧೦-೨೦೧೭ ರ ಸಂಜೆ ೫-೦೦ ಗಂಟೆಯೊಳಗೆ ನಿರ್ದೇಶಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನಂ. ೧೭, ವಾರ್ತಾ ಸೌಧ, ಭಗವಾನ್ ಮಹಾವೀರ ರಸ್ತೆ, ಬೆಂಗಳೂರು ೫೬೦ ೦೦೧ ಇವರಿಗೆ ಸಲ್ಲಿಸಬೇಕು.

ಲಕೋಟೆಯ ಮೇಲ್ಬಾಗದಲ್ಲಿ  "ವೃತ್ತಿ ನಿರೂಪಣಾ ಕೌಶಲ್ಯ/ವ್ಯಕ್ತಿ ವಿಕಸನ ತರಬೇತಿಗಾಗಿ ಅರ್ಜಿ (ಹಿಂದುಳಿದ ವರ್ಗ)" ಎಂದು ನಮೂದಿಸಿರಬೇಕು. ಹೆಚ್ಚಿನ ಮಾಹಿತಿಗಾಗಿ ಸುದ್ದಿ ಮತ್ತು ಪತ್ರಿಕಾ ವಿಭಾಗದ, ಉಪ ನಿರ್ದೇಶಕರು ಇವರನ್ನು ದೂರವಾಣಿ ಸಂಖ್ಯೆ ೦೮೦- ೨೨೦೨೮೦೩೭/೮೭ ರ ಮೂಲಕ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.  
 

Read These Next

ಜಿಲ್ಲೆಯಲ್ಲಿ ಮೇ 7 ರಂದು ಮತದಾನ, ತಕ್ಷಣದಿಂದಲೇ ನೀತಿ ಸಂಹಿತೆ ಜಾರಿ : ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ

ಕಾರವಾರ : ಚುನಾವಣಾ ಆಯೋಗದ ನಿರ್ದೇಶನದಂತೆ, ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಮೇ 7 ರಂದು ಮತದಾನ ನಡೆಯಲಿದ್ದು, ಜಿಲ್ಲೆಯಲ್ಲಿ ...

ಭಟ್ಕಳ: ಶ್ರೀ ಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಕ್ಷ್ಮ ಬೋಧನೆ, ಲಲಿತಕಲೆ ಮತ್ತು ರಂಗಭೂಮಿ ಕಾರ್ಯಾಗಾರ ಮುಕ್ತಾಯ

ಶಿಕ್ಷಕರಾದವರು ವಿದ್ಯಾರ್ಥಿಗಳಿಗೆ ಸಂಸ್ಕಾರ, ಮಾನವೀಯ ಮೌಲ್ಯ, ಪರಸ್ಪರ ಗೌರವ ನೀಡುವುದು ಮತ್ತು ರಾಷ್ಟ್ರಭಕ್ತಿಯನ್ನು ಹೆಚ್ಚಿಸುವ ...